ಬೀನ್ಸ್‌ ಬಳಸಿ ರಜನಿಕಾಂತ್ ಭಾವಚಿತ್ರ: ತಲೈವಾ 50 ವರ್ಷಗಳ ಸಿನಿ ಜರ್ನಿಗೆ ಕಲಾವಿದನಿಂದ ಗೌರವ

ಸಿನಿಮಾ ಜಗತ್ತಿನಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಮೇಲೆ ತೋರಿಸುವ ಪ್ರೀತಿ ಅಳತೆಗೆ ಸಿಗಲಾರದು. ಇದು ಕೇವಲ ಟಿಕೆಟ್ ಖರೀದಿಗೆ ಸೀಮಿತವಾಗಿಲ್ಲ. ಆ ಪ್ರೀತಿ, ಆರಾಧನೆ ಕೆಲವೊಮ್ಮೆ ಸೃಜನಶೀಲ ಕಲೆಯ ರೂಪದಲ್ಲಿ ಹೊರಬರುತ್ತದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಶಿಷ್ಟವಾದ ಕಲಾ ಪ್ರಯತ್ನ ಎಲ್ಲರ ಗಮನ ಸೆಳೆದಿದೆ. ಈ ವಿನೂತನ ಶೈಲಿ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಸಾಮಾನ್ಯವಾಗಿ ಕಲಾವಿದರು ಕ್ಯಾನ್ವಾಸ್ ಮೇಲೆ ಬಣ್ಣ, ಪೆನ್ಸಿಲ್ ಅಥವಾ ಇತರ ಸಾಧನಗಳನ್ನು ಬಳಸುತ್ತಾರೆ. ಆದರೆ, ಈ ವಿಶೇಷವಾದ ಕಲಾಕೃತಿಯನ್ನು ರಚಿಸಲು ಕಲಾವಿದನೊಬ್ಬ ಅಸಾಧ್ಯ ಎನಿಸುವ ವಸ್ತುವನ್ನು ಆಯ್ಕೆ ಮಾಡಿದ್ದಾನೆ. ಅಂತಹ ಪ್ರಯತ್ನವನ್ನು ಯಾರು ಊಹಿಸಲು ಸಾಧ್ಯವಿಲ್ಲ. ಈ ಕಲೆ ಈಗ ಇಂಟರ್‌ನೆಟ್‌ನಲ್ಲಿ ದೊಡ್ಡ ಟ್ರೆಂಡ್ ಅನ್ನೇ ಸೃಷ್ಟಿಸಿದೆ.

A vegetable tribute to the superstar Rajinkanth from Art master Harish V G video went viral

ಈ ಕಲಾಕೃತಿಯು ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ಪಯಣದ ಐತಿಹಾಸಿಕ ಕ್ಷಣಕ್ಕೆ ಸಮರ್ಪಿತವಾಗಿದೆ. ಈ ವಿನೂತನ ಪ್ರಯತ್ನವು ಈಗ ಸ್ಯಾಂಡಲ್‌ವುಡ್‌ನಿಂದ ಕಾಲಿವುಡ್‌ವರೆಗೆ ಧೂಳೆಬ್ಬಿಸಿದೆ. ಕಲಾವಿದನ ಅಭಿಮಾನದ ಗೌರವಕ್ಕೆ ತಲೈವಾ ಅಭಿಮಾನಿಗಳು ಸಿಕ್ಕಾಪಟ್ಟೆ ಮೆಚ್ಚಿಕೊಂಡು ವೈರಲ್ ಮಾಡುತ್ತಿದ್ದಾರೆ.

ಈಗ ವಿಷಯವನ್ನು ಒಂದೊಂದಾಗೇ ನೋಡುತ್ತಾ ಹೋಗುವುದಾರೇ, ಈ ವಿಶಿಷ್ಟ ಗೌರವ ಸಲ್ಲುತ್ತಿರುವುದು ಬೇರೆ ಯಾರಿಗೂ ಅಲ್ಲ, ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ. ತಲೈವಾ ಸಿನಿಮಾ ರಂಗದಲ್ಲಿ 50 ವರ್ಷಗಳ ಭವ್ಯ ಪಯಣವನ್ನು ಪೂರೈಸಿದ್ದಾರೆ. ಇದು ಸುಲಭದ ಮಾತಲ್ಲ. ಇದರ ಜೊತೆಗೆ ಅವರ ಹುಟ್ಟುಹಬ್ಬದ ಸಂಭ್ರಮವೂ ಇತ್ತು. ಇವೆರಡಕ್ಕೂ ಗೌರವ ಸಲ್ಲಿಸಲು ಈ ಪ್ರಯತ್ನ ನಡೆದಿದೆ.

ಇಂತಹ ಐತಿಹಾಸಿಕ ಸಂದರ್ಭದಲ್ಲಿ ಕಲಾವಿದರಾದ ಹರೀಶ್ ವಿ ಜಿ ಅಚ್ಚರಿಯ ಕಲಾಕೃತಿಯನ್ನು ನಿರ್ಮಿಸಿದ್ದಾರೆ. ಹರೀಶ್ ವಿ ಜಿ ರಜನಿಕಾಂತ್ ಅವರ ಭಾವಚಿತ್ರವನ್ನು ಬರೀ ಬೀನ್ಸ್ ಮತ್ತು ಕ್ಯಾರೆಟ್‌ಗಳನ್ನು ಬಳಸಿ ರಚಿಸಿದ್ದಾರೆ. ಈ ವಿಚಾರ ತಿಳಿದು ಸಿನಿಪ್ರೇಮಿಗಳು ಒಂದು ಕ್ಷಣ ದಂಗಾಗಿದ್ದಾರೆ. ಇದು ನಿಜಕ್ಕೂ ನಂಬಲು ಅಸಾಧ್ಯವಾದ ಸಂಗತಿ.

ತರಕಾರಿಗಳ ಮೂಲಕ ಇಂತಹ ಸುಂದರ ಭಾವ ಚಿತ್ರವನ್ನು ರಚಿಸುವುದು ಸವಾಲಿನ ಕೆಲಸ. ಇಲ್ಲಿ ಕಲಾವಿದ ಬೀನ್ಸ್ ಮತ್ತು ಕ್ಯಾರೆಟ್‌ಗಳನ್ನು ವಿನ್ಯಾಸ, ಬಣ್ಣ ಮತ್ತು ಆಕಾರಕ್ಕೆ ಬಹಳ ಸೂಕ್ಷ್ಮವಾಗಿ ಬಳಸಿದ್ದಾರೆ. ಬಹುತೇಕ ಬೀನ್ಸ್‌ನಿಂದ ಮುಖ, ಅಂಚುಗಳು ಮತ್ತು ಕೂದಲನ್ನು ಸೃಷ್ಟಿಸಲಾಗಿದೆ. ಹಾಗೇ ಕ್ಯಾರೆಟ್‌ ಅನ್ನು ಸ್ವಲ್ಪವೇ ಪ್ರಮಾಣದಲ್ಲಿ ಬಳಸಿದ್ದು, ಚಿಕ್ಕ ಡಿಟೈಲಿಂಗ್ ಕೊಡುವುದಕ್ಕೆ ಬಳಸಿದ್ದಾರೆ. ಇದು ಆ ಭಾವ ಚಿತ್ರಕ್ಕೆ ವಿಶೇಷ ಮೆರುಗು ನೀಡಿದೆ.

ಹರೀಶ್ ವಿ ಜಿ ಈ ಕಲಾಕೃತಿಯಲ್ಲಿ ಸೂಪರ್ ಸ್ಟಾರ್ ಅವರ ಸ್ಟೈಲಿಶ್ ಲುಕ್ ಅತ್ಯದ್ಭುತವಾಗಿ ಮೂಡಿಬಂದಿದೆ. ರಜನಿಕಾಂತ್ ಸಿನಿಮಾ ಪ್ರಯಾಣದಂತೆ, ಈ ಕಲೆಯೂ ಕೂಡ ಅಸಾಧಾರಣವಾಗಿದೆ. ಇದು ಕೇವಲ ಚಿತ್ರವಲ್ಲ. ತಲೈವಾ ಮೇಲಿನ ಅಭಿಮಾನಿಯ ಅತೀವ ಪ್ರೀತಿ ಮತ್ತು ಶ್ರಮದ ಪ್ರತಿರೂಪವಾಗಿದೆ.

ಐದು ದಶಕಗಳ ಕಾಲ ಚಿತ್ರರಂಗವನ್ನು ಆಳಿದ ರಜನಿಕಾಂತ್ ಸಾಧನೆಗೆ ಈ ಕಲಾ ಪ್ರಯತ್ನ ಒಂದು ವಿಶೇಷ ನಮನ. ಈ ರೀತಿಯ ಅನನ್ಯ ಗೌರವವು ಅಪರೂಪದ ನಟರಿಗೆ ಮಾತ್ರ ಸಿಗುತ್ತದೆ. ಇದು ಭಾರತೀಯ ಚಿತ್ರರಂಗದ ಅಭಿಮಾನಿಗಳಿಗೆ ಒಂದು ಸ್ಫೂರ್ತಿದಾಯಕ ಮೈಲಿಗಲ್ಲು.

ಸದ್ಯ ಹರೀಶ್ ವಿ ಜಿ ಅವರ ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ರಜನಿಕಾಂತ್ ಅಭಿಮಾನಿಗಳು ಇದನ್ನು ಶೇರ್ ಮಾಡಿ ಟ್ರೆಂಡಿಂಗ್ ಮಾಡುತ್ತಿದ್ದಾರೆ. "ಇಂತಹ ವಿಭಿನ್ನ ಕಲೆಯನ್ನು ನಾವು ಹಿಂದೆಂದೂ ನೋಡಿಲ್ಲ" ಎಂದು ಜನರು ಕಮೆಂಟ್ ಮಾಡಿದ್ದಾರೆ. ಹಲವು ಜನರು ಕಲಾವಿದನಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಒಟ್ಟಾರೆಯಾಗಿ ಈ 'ತರಕಾರಿ ಆರ್ಟ್‌ವರ್ಕ್' ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಲೆಯಷ್ಟೇ ಶ್ರೇಷ್ಠವಾಗಿದೆ. ಇದು ಅಭಿಮಾನ ಮತ್ತು ಸೃಜನಶೀಲತೆಯ ಅದ್ಭುತ ಸಂಗಮ. ರಜನಿಕಾಂತ್ ಅವರ ಐದು ದಶಕಗಳ ಪಯಣಕ್ಕೆ ಈ ಅನನ್ಯ ಗೌರವ ಒಂದು ಸ್ಮರಣೀಯ ಕೊಡುಗೆಯಾಗಿದೆ. ಹರೀಶ್ ವಿ ಜಿ ಅವರು ತಮ್ಮ ಕಲಾ ಸಾಮರ್ಥ್ಯದಿಂದ ತಲೈವಾ ಅಭಿಮಾನಿಗಳನ್ನು ಮತ್ತಷ್ಟು ಖುಷಿಗೊಳಿಸಿದ್ದಾರೆ.

More from Filmibeat

English summary
A vegetable tribute to the superstar Rajinkanth from Art master Harish V.G. video went viral.
Read more about: rajinikanth tribute art
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X