ಚೆನ್ನೈ ಪ್ರವಾಹದಲ್ಲಿ ಸಿಲುಕಿದ್ರಾ ನಟ ಆಮೀರ್ ಖಾನ್? ಅಭಿಮಾನಿಗಳು ಶಾಕ್
ಮಿಗ್ಜಾಮ್ ಚಂಡಮಾರುತದ ಹೊಡೆತಕ್ಕೆ ಚೆನ್ನೈ ನಗರ ತತ್ತರಿಸಿ ಹೋಗಿದೆ. ಭಾರೀ ಮಳೆಯಿಂದಾಗಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಪ್ರದೇಶಗಳು ಜಲಾವೃತವಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹದಲ್ಲಿ ಸಿಲುಕಿ ಪರದಾಡುತ್ತಿದ್ದವರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ.
ಈಗಾಗಲೇ ತಮಿಳು ಸಿನಿಮಾ ಕಲಾವಿದರು ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ಸಹಾಯ ಮಾಡುತ್ತಿದ್ದಾರೆ. NDRF, SDRF ತಂಡಗಳು ಸಂತ್ರಸ್ತರ ರಕ್ಷಣೆಗೆ ಧಾವಿಸಿದೆ. ಸಾಮಾನ್ಯ ಜನರು ಮಾತ್ರವಲ್ಲ ಸಿನಿಮಾ ಕಲಾವಿದರು ಕೂಡ ಮಿಚುವಾಂಗ್ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ನಟ ವಿಷ್ಣು ವಿಶಾಲ್ ಕೂಡ ಪ್ರವಾಹದಲ್ಲಿ ಸಿಲುಕಿದ್ದರು. ಕಾರಪ್ಪಕಂನಲ್ಲಿರುವ ಅವರ ನಿವಾಸಕ್ಕೆ ನೀರು ಬಂದಿದೆ ಎಂದು ವಿಷ್ಣು ವಿಶಾಲ್ ಹೇಳಿದ್ದರು. ಪ್ರವಾಹದ ನೀರು ಮನೆಗೆ ನುಗ್ಗುತ್ತಿದ್ದಂತೆ ವಿಷ್ಣು ವಿಶಾಲ್ ಮನೆಯ ಮೇಲೆ ಹತ್ತಿದ್ದಾರೆ. ಅಲ್ಲಿದ್ದ ಫೋಟೋವನ್ನು ಶೇರ್ ಮಾಡಿದ್ದಾರೆ. ವಿದ್ಯುತ್, ಇಂಟರ್ ನೆಟ್ ಸೌಲಭ್ಯವಿಲ್ಲ ಎಂದು ವಿಶಾಲ್ ಪೋಸ್ಟ್ ಮಾಡಿದ್ದಾರೆ.

ಸದ್ಯ ಚೆನ್ನೈ ಅಗ್ನಿಶಾಮಕ ಸಿಬ್ಬಂದಿ ನಟ ವಿಷ್ಣು ವಿಶಾಲ್ ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದೆ. ಆದರೆ ವಿಶಾಲ್ ಜೊತೆ ಬಾಲಿವುಡ್ ನಟ ಆಮೀರ್ ಖಾನ್ ಕಾಣಿಸಿಕೊಂಡಿದ್ದಾರೆ. ಅಯ್ಯೋ ಚೆನ್ನೈ ಪ್ರವಾಹದಲ್ಲಿ ಆಮೀರ್ ಖಾನ್ ಏನು ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
ಅನಾರೋಗ್ಯಕ್ಕೆ ತುತ್ತಾಗಿರುವ ತಾಯಿಯ ಚಿಕಿತ್ಸೆಗಾಗಿ ನಟ ಆಮೀರ್ ಖಾನ್ ಕೆಲ ದಿನಗಳಿಂದ ಚೆನ್ನೈನಲ್ಲಿ ಬೀಡುಬಿಟ್ಟಿದ್ದಾರೆ. ಚೆನ್ನೈನ ಕರಪಾಕ್ಕಂ ಪ್ರದೇಶದಲ್ಲಿ ವಿಷ್ಣು ವಿಶಾಲ್ ಪತ್ನಿ ಜ್ವಾಲಾ ಗುಟ್ಟಾ ಜೊತೆ ನೆಲೆಸಿದ್ದಾರೆ. ಅವರ ಮನೆಯಲ್ಲೇ ಆಮೀರ್ ಖಾನ್ ಕೂಡ ಇದ್ದರು ಎನ್ನಲಾಗುತ್ತಿದೆ. 24 ಗಂಟೆಗಳ ಕಾಲ ವಿದ್ಯುತ್ ಸಂಪರ್ಕ, ಫೋನ್ ಸಿಗ್ನಲ್ ಸಿಗದೇ ಸಂಕಷ್ಟ ಸಿಲುಕಿದಿದ್ದರು. ರಕ್ಷಣಾ ಸಿಬ್ಬಂದಿ ತಮ್ಮನ್ನು ರಕ್ಷಿಸಿರುವ ಬಗ್ಗೆ ನಟ ವಿಷ್ಣು ವಿಶಾಲ್ ಪೋಸ್ಟ್ ಮಾಡಿದ್ದಾರೆ.
"ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ನಮ್ಮಂತಹ ಜನರಿಗೆ ಸಹಾಯ ಮಾಡಿದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗೆ ಧನ್ಯವಾದಗಳು. ಕರಪಾಕ್ಕಂನಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಈಗಾಗಲೇ 3 ಬೋಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಪರೀಕ್ಷೆಯ ಸಮಯದಲ್ಲಿ ತಮಿಳುನಾಡು ಸರ್ಕಾರದಿಂದ ಉತ್ತಮ ಕೆಲಸವಾಗುತ್ತಿದೆ. ಅವಿರತವಾಗಿ ಕೆಲಸ ಮಾಡುತ್ತಿರುವ ಎಲ್ಲಾ ಆಡಳಿತ ವರ್ಗದವರಿಗೆ ಧನ್ಯವಾದಗಳು." ಎಂದು ಬರೆದುಕೊಂಡಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ಅಮೀರ್ ಖಾನ್ ಶೀಘ್ರದಲ್ಲೇ 'ಸಿತಾರೆ ಜಮೀನ್ ಪರ್' ಎನ್ನುವ ಸಿನಿಮಾದಲ್ಲಿ ನಟಿಸಲಿದ್ದಾರೆ. ಚಿತ್ರದ ಥೀಮ್ 'ತಾರೆ ಜಮೀನ್ ಪರ್' ಅನ್ನು ಹೋಲುತ್ತದೆ ಎಂದು ನಟ ಬಾಲಿವುಡ್ ಪರ್ಫೆಕ್ಷನಿಸ್ಟ್ ಹೇಳಿದ್ದರು. ಬಾಲಿವುಡ್ ಖಾನ್‌ತ್ರಯರಲ್ಲಿ ಆಮೀರ್ ಖಾನ ಸೈಲೆಂಟ್ ಆಗಿಬಿಟ್ಟಿದ್ದಾರೆ.
ಒಂದ್ಕಾಲದಲ್ಲಿ ಆಮೀರ್ ಖಾನ್ ಅದ್ಭುತ ಸಿನಿಮಾಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಬಾಲಿವುಡ್ ಮಿಸ್ಟರ್ ಪರ್ಫೆಕ್ಷನ್‌ನಿಷ್ಟ್ ಎನಿಸಿಕೊಂಡಿದ್ದರು. ಆದರೆ ಆ ಮ್ಯಾಜಿಕ್ ಈಗ ನಡೀತಿಲ್ಲ. ಆಮೀರ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತಿವೆ. ಭಾರೀ ನಿರೀಕ್ಷೆ ಮೂಡಿಸಿದ್ದ 'ಲಾಲ್ ಸಿಂಗ್ ಛಡ್ಡಾ' ಕೂಡ ಸೋತು ಸುಣ್ಣವಾಗಿತ್ತು. ಶಾರುಖ್ ಖಾನ್ ಎರಡು ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟು ಸಂಚಲನ ಸೃಷ್ಟಿಸಿದ್ದಾರೆ. ಸಲ್ಮಾನ್ ಖಾನ್ ಕೂಡ 'ಟೈಗರ್' ಆಗಿ ಒಂದು ಮಟ್ಟಿಗೆ ಗೆದ್ದಿದ್ದಾರೆ. ಆದರೆ ಆಮೀರ್ ಖಾನ್ ಆರ್ಭಟ ಮಾತ್ರ ನಡೀತಿಲ್ಲ.
'ಲಾಲ್ ಸಿಂಗ್ ಛಡ್ಡಾ' ಚಿತ್ರಕ್ಕೂ ಮುನ್ನ ಬಂದಿದ್ದ 'ಥಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾ ಕೂಡ ಮುಗ್ಗರಿಸಿತ್ತು. ಫಸ್ಟ್ ಡೇ ಬಾಕ್ಸಾಫೀಸ್ ಕೊಳ್ಳೆ ಹೊಡೆದರೂ ಬಳಿಕ ಹೇಳ ಹೆಸರಿಲ್ಲದಂತೆ ನೆಲ ಕಚ್ಚಿತ್ತು. ಬಳಿಕ ಹಾಲಿವುಡ್‌ನ 'ಫಾರೆಸ್ಟ್ ಗಂಪ್' ಸಿನಿಮಾ ರೀಮೆಕ್ ಮಾಡಿದರೂ ಯಶಸ್ಸು ಸಿಗಲಿಲ್ಲ.


Click it and Unblock the Notifications











