For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ಶಂಕರ್ ಮತ್ತು ರಣ್ವೀರ್ ಸಿಂಗ್ ಚಿತ್ರಕ್ಕೆ ಆರಂಭದಲ್ಲೇ ವಿಘ್ನ

  |

  ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಶಂಕರ್ ಮತ್ತು ಬಾಲಿವುಡ್ ನಟ ರಣ್ವೀರ್ ಸಿಂಗ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಶುರುವಾಗಿದ್ದು, ನಿನ್ನೆಯಷ್ಟೇ (ಏಪ್ರಿಲ್ 14) ಈ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಿತ್ತು. ಅಷ್ಟರಲ್ಲೇ ಚಿತ್ರಕ್ಕೆ ವಿಘ್ನ ಎದುರಾಗಿದೆ.

  ಶಂಕರ್ ಮತ್ತು ರಣ್ವೀರ್ ಸಿಂಗ್ ಇಬ್ಬರು ಭೇಟಿಯಾಗಿ ಚರ್ಚೆ ಮಾಡುತ್ತಿರುವ ಫೋಟೋಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದರು. ಇದು 2005ರಲ್ಲಿ ತೆರೆಕಂಡಿದ್ದ ತಮಿಳು ಸೂಪರ್ ಹಿಟ್ ಸಿನಿಮಾ ಅನ್ನಿಯನ್ ಹಿಂದಿಯ ರಿಮೇಕ್ ಎಂದು ಬಹಿರಂಗವಾಗಿತ್ತು. ಶಂಕರ್-ರಣ್ವೀರ್ ಜೋಡಿಯಿಂದ ಒಂದೊಳ್ಳೆ ಸಿನಿಮಾ ಬರಲಿದೆ ಎಂದು ಅಭಿಮಾನಿಗಳು ಖುಷಿ ಪಡುತ್ತಿರುವ ಸಮಯದಲ್ಲೇ ನಿರ್ಮಾಪಕ ವಿಶ್ವನಾಥ್ ರವಿಚಂದ್ರನ್ (ಆಸ್ಕರ್ ರವಿಚಂದ್ರನ್) ಇದಕ್ಕೆ ಅಡ್ಡಿಯಾಗಿದ್ದಾರೆ. ಅಷ್ಟಕ್ಕೂ, ಶಂಕರ್-ರಣ್ವೀರ್ ಪ್ರಾಜೆಕ್ಟ್‌ಗೆ ಎದುರಾದ ತೊಂದರೆ ಏನು? ಮುಂದೆ ಓದಿ...

  ಸಿನಿಮಾ ಕೂಡಲೇ ನಿಲ್ಲಿಸಬೇಕು

  ಸಿನಿಮಾ ಕೂಡಲೇ ನಿಲ್ಲಿಸಬೇಕು

  'ಅನ್ನಿಯನ್' ಚಿತ್ರದ ಮೂಲ ನಿರ್ಮಾಪಕ ವಿಶ್ವನಾಥ್ ರವಿಚಂದ್ರನ್ (ಆಸ್ಕರ್ ರವಿಚಂದ್ರನ್) ಅವರು ನಿರ್ದೇಶಕ ಶಂಕರ್ ಅವರಿಗೆ ಪತ್ರದ ಬರೆದಿದ್ದು, ಕೂಡಲೇ ಈ ಪ್ರಾಜೆಕ್ಟ್ ನಿಲ್ಲಿಸಬೇಕು ಎಂದು ಸೂಚಿಸಿದ್ದಾರೆ. ''ಹಿಂದಿ ರಿಮೇಕ್ ಮಾಡಲು ನಿಮಗೆ ಹಕ್ಕಿಲ್ಲ, ಇದು ಕಾಪಿರೈಟ್ ಉಲ್ಲಂಘನೆ ಆಗುತ್ತದೆ'' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

  ಬಾಲಿವುಡ್ ಸ್ಟಾರ್ ಜೊತೆ ಸಿನಿಮಾ ಘೋಷಿಸಿದ ಶಂಕರ್: ಚಿರು ಪುತ್ರನ ಚಿತ್ರ ಏನಾಯ್ತು?ಬಾಲಿವುಡ್ ಸ್ಟಾರ್ ಜೊತೆ ಸಿನಿಮಾ ಘೋಷಿಸಿದ ಶಂಕರ್: ಚಿರು ಪುತ್ರನ ಚಿತ್ರ ಏನಾಯ್ತು?

  ಅನುಮತಿ ಇಲ್ಲದೇ ಸಿನಿಮಾ ಮಾಡಲು ಸಾಧ್ಯವಿಲ್ಲ

  ಅನುಮತಿ ಇಲ್ಲದೇ ಸಿನಿಮಾ ಮಾಡಲು ಸಾಧ್ಯವಿಲ್ಲ

  ''ಅನ್ನಿಯನ್ ಚಿತ್ರದ ಕಥೆಯನ್ನು ಆಧರಿಸಿ ಹಿಂದಿಯಲ್ಲಿ ಸಿನಿಮಾ ಮಾಡುವ ಸಾಧ್ಯತೆ ಎಂದು ಹೇಳಿರುವುದು ನನಗೆ ಆಘಾತ ತಂದಿದೆ. ನಾನು ಮೂಲ ಚಿತ್ರದ ನಿರ್ಮಾಪಕ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಬರಹಗಾರ ಸುಜಾತಾ ಅವರಿಗೆ ಪೂರ್ತಿ ಸಂಭಾವನೆ ನೀಡಿ ಸಂಪೂರ್ಣ ಕಥೆಯನ್ನು ನಾನು ಖರೀದಿಸಿದೆ. ಆ ಕಥೆಗೆ ಏಕಮಾತ್ರ ಹಕ್ಕುದಾರ ನಾನು. ರಿಮೇಕ್, ಸ್ಫೂರ್ತಿಯಾಗಿಸಿ ಅಥವಾ ಆಧರಿಸಿ ಸಿನಿಮಾ ಮಾಡುವುದು ಸಂಪೂರ್ಣವಾಗಿ ಕಾನೂನುಬಾಹಿರ'' ಎಂದು ವಿಶ್ವನಾಥ್ ರವಿಚಂದ್ರನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  ಲೀಗಲ್ ನೋಟಿಸ್ ನೀಡಲಾಗುವುದು

  ಲೀಗಲ್ ನೋಟಿಸ್ ನೀಡಲಾಗುವುದು

  ''ಕೂಡಲೇ ಈ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಕೆಲಸ ಮಾಡುವುದು ನಿಲ್ಲಿಸಿ. ಈ ಪತ್ರದ ಹಿಂದೆಯೇ ಲೀಗಲ್ ನೋಟಿಸ್ ಕಳುಹಿಸಲಾಗುವುದು'' ಎಂದು ತಿಳಿಸಿದ್ದಾರೆ. ಅಂದ್ಹಾಗೆ, ಹಿಂದಿಯಲ್ಲಿ ಈ ಚಿತ್ರವನ್ನು ಪೆನ್ ಸ್ಟುಡಿಯೋ ಸಂಸ್ಥೆ ನಿರ್ಮಾಣ ಮಾಡಲು ಮುಂದಾಗಿದೆ.

  ಮೂರು ವಿಭಿನ್ನ ಶೇಡ್‌ನಲ್ಲಿ ವಿಕ್ರಂ ನಟಿಸಿದ್ದರು

  ಮೂರು ವಿಭಿನ್ನ ಶೇಡ್‌ನಲ್ಲಿ ವಿಕ್ರಂ ನಟಿಸಿದ್ದರು

  ಅನ್ನಿಯನ್ ಸಿನಿಮಾ 2005ರಲ್ಲಿ ತೆರೆಕಂಡಿತ್ತು. ಶಂಕರ್ ನಿರ್ದೇಶಿಸಿದ್ದ ಈ ಚಿತ್ರವನ್ನು ವಿಶ್ವನಾಥ್ ರವಿಚಂದ್ರನ್ (ಆಸ್ಕರ್ ರವಿಚಂದ್ರನ್) ನಿರ್ಮಾಣ ಮಾಡಿದ್ದರು. ಮೂಲ ಚಿತ್ರದಲ್ಲಿ ವಿಕ್ರಂ ನಟಿಸಿದ್ದರು. ಸೈಕೋಲಾಜಿಕಲ್ ಆಕ್ಷನ್ ಥ್ರಿಲ್ಲರ್ ಕಥೆಯಲ್ಲಿ ಅಂಬಿ, ರೆಮೋ, ಅನ್ನಿಯನ್ ಎಂಬ ಮೂರು ವಿಭಿನ್ನ ಪಾತ್ರಗಳನ್ನು ವಿಕ್ರಂ ನಿರ್ವಹಿಸಿದ್ದರು.

  English summary
  Anniyan Tamil Producer Aascar Ravichandran asks Director Shankar to stop the Hindi remake as he has the rights.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X