ನಿಮ್ಮೆಲ್ಲರ ಎದುರು ಬೆತ್ತಲಾಗಲು ನಾನು ಇಲ್ಲಿ ಬಂದಿಲ್ಲ ; ಕೆಂಡಾಮಂಡಲವಾದ ಬಿಗ್ ಬಾಸ್ ಸ್ಫರ್ಧಿ

ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಇನ್ನು ಈ ವೇದಿಕೆಯ ಮೂಲಕವೇ ಸಿನಿ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ.

ಆದರೆ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಸಾಕಷ್ಟು ಮಂದಿ ಒಂದು ಕಡೆ ಚಿತ್ರರಂಗದಲ್ಲಿನ ಮಹಿಳೆಯರಿಗೆ, ನಟಿಯರಿಗೆ ಲೈಂಗಿಕ ಶೋಷಣೆ, ಕಿರುಕುಳ ಕೊಡುವುದನ್ನೇ ವೃತ್ತಿಯನ್ನಾಗಿಸಿಕೊಂಡು ಸ್ತ್ರೀಯರ ಬಾಳಿಗೆ ಕಗ್ಗಂಟಾಗಿ ಉಳಿದಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆಯೇ ಅಭಿರಾಮಿ ವೆಂಕಟಾಚಲಂ ಅವರಿಗಾದ ಅನುಭವ.

Abhirami Venkatachalam Slams Subscribers Demanding Inappropriate Content

ಹೌದು, ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ''ಸಬ್‌ಸ್ಕ್ರಿಪ್ಷನ್'' ಫೀಚರ್ ಶುರುವಾಗಿದೆ. ಹಣ ನೀಡಿ ನೀವು ಚಂದಾದಾರರಾದರೆ ತಾರೆಯರು ಹಂಚಿಕೊಳ್ಳುವ ದಿನ ನಿತ್ಯದ ಫೋಟೊ ಮತ್ತು ವಿಡಿಯೋಗಳಲ್ಲದೇ ಅವರ ವಿಶೇಷ ಫೋಟೊ ಅಥವಾ ವಿಡಿಯೋವನ್ನು ಕೂಡ ಕಣ್ತುಂಬಿಕೊಳ್ಳಬಹುದು.

ಈಗಾಗಲೇ ನೇಹಾ ಶರ್ಮಾ.. ವಿಷ್ಣು ಪ್ರಿಯಾ ಅಂತಹ ಹಲವು ಚೆಲುವೆಯರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ''ಸಬ್‌ಸ್ಕ್ರಿಪ್ಷನ್'' ಭಾಗ್ಯವನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ. ಆಗಲೇ ಹಲವಾರು ಚಂದಾದಾರರನ್ನು ಕೂಡ ಪಡೆದಿದ್ದಾರೆ.

ಆ ಪೈಕಿ ಅಭಿರಾಮಿ ವೆಂಕಟಾಚಲಂ ಕೂಡ ಒಬ್ಬರು. ತಿಂಗಳಿಗೆ 399 ರೂಪಾಯಿ ನೀಡಿದರೆ ಬೇರೆ ಯಾರಿಗೂ ನೋಡಲು ಸಿಗದ ಅಭಿರಾಮಿ ಅವರ ವಿಶೇಷ ಕಂಟೆಂಟ್‌ನ ಇವರ ಚಂದಾದಾರರು ನೋಡಬಹುದು.

ಆದರೆ, ಸಮಸ್ಯೆ ಅಂದರೆ ಹೀಗೆ ತಮ್ಮ ಇಷ್ಟದ ನಟ ಅಥವಾ ನಟಿಯರಿಗೆ ತಾವು ಕಷ್ಟಪಟ್ಟು ದುಡಿದ ಹಣವನ್ನು ಇನ್‌ಸ್ಟಾಗ್ರಾಮ್‌ ಮೂಲಕ ನೀಡುತ್ತಿರುವ ಹಲವರು ಹಣ ಕೊಟ್ಟ ಮೇಲೆ ನಾವು ಕೇಳಿದ್ದನ್ನು ನೀವು ಮಾಡಲೇಬೇಕು ಎಂಬಂತೆ ವರ್ತಿಸಲು ಶುರು ಮಾಡಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಅಭಿರಾಮಿ ಅವರ ಎದುರು ಅಸಹ್ಯ- ಅಸಭ್ಯ ಬೇಡಿಕೆಗಳನ್ನು ಹಲವರು ಇಡುತ್ತಿದ್ದು ಸದ್ಯ ಅಭಿರಾಮಿ ಇದೇ ವಿಚಾರಕ್ಕೆ ಕೆರಳಿ ಕೆಂಡವಾಗಿದ್ದಾರೆ. ನೀವು ಹಣ ನೀಡಿದ್ದೀರಾ ಎಂದ ಮಾತ್ರಕ್ಕೆ ನಾನು ನಿಮ್ಮೆದುರು ಇಲ್ಲಿ ಬೆತ್ತಲೆಯಾಗಲು ಸಾಧ್ಯ ಇಲ್ಲ ಎಂದು ಕಿಡಿ ಕಾರಿದ್ದಾರೆ.

Abhirami Venkatachalam Slams Subscribers Demanding Inappropriate Content

ಈ ಕುರಿತು ತಮ್ಮ ಆಕ್ರೋಶವನ್ನು ಹೊರ ಹಾಕಿರುವ ಅಭಿರಾಮಿ ವೆಂಕಟಾಚಲಂ ನನ್ನನ್ನು ಪ್ರೀತಿಸುವ ಮತ್ತು ಗೌರವಿಸುವ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ. ನನ್ನಲ್ಲಿನ ಕಲೆಯನ್ನು ಪ್ರದರ್ಶಿಸಲು, ನಾನು ಇಲ್ಲಿಯವರೆಗೆ ಎಲ್ಲಿಯೂ ಹಂಚಿಕೊಳ್ಳದ ಮತ್ತು ಹೊಸತನದಿಂದ ಕೂಡಿದ ಫೋಟೊಗಳನ್ನು ಹಂಚಿಕೊಳ್ಳಲು ಈ ಪ್ಲಾಟ್‌ಫಾರ್ಮ್‌ ಶುರು ಮಾಡಿದೆ ಎಂದು ಹೇಳಿರುವ ಅಭಿರಾಮಿ, ನೀವು ಹಣ ಕೊಟ್ಟಿದ್ದೀರಾ ಎಂಬ ಕಾರಣಕ್ಕೆ ನಾನು ಇಲ್ಲಿ ಬಂದು ನಿಮ್ಮೆದುರು ಬೆ*ತ್ತಲಾಗಿ ನಿಲ್ಲುತ್ತೇನೆ ಎಂದು ಯಾರಾದರೂ ಅಂದುಕೊಂಡಿದ್ದರೆ, ದಯವಿಟ್ಟು ಈಗಲೇ ಅನ್‌ಸಬ್‌ಸ್ಕ್ರೈಬ್ ಮಾಡಿ ಹೋಗಿ ಎಂದು ಹೇಳಿದ್ದಾರೆ. ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಮುಂದುವರೆದು ನಾನು ಇಲ್ಲಿ ಯಾವ ಪೋಸ್ಟ್ ಹಂಚಿಕೊಳ್ಳಬೇಕು, ಯಾವುದು ಹಂಚಿಕೊಳ್ಳಬಾರದು ಎಂದು ಹೇಳಲು ನನಗೆ ನೀವು ಯಾರು ಅಲ್ಲ, ಆ ಅಧಿಕಾರ ನಿಮಗೆ ಇಲ್ಲ ಎಂದು ಹೇಳಿರುವ ಅಭಿರಾಮಿ ನನ್ನ ಕ್ರಿಯೇಟಿವಿಟಿಯನ್ನು ಮೆಚ್ಚುವವರಿಗೆ, ನನ್ನ ಕಲೆಯನ್ನು ಗೌರವಿಸೋರಿಗೆ ಇಲ್ಲಿ ಯಾವಾಗಲೂ ಸ್ವಾಗತ ಎಂದು ಹೇಳಿದ್ಧಾರೆ. ಇದು ಪೋ*ರ್ನ್ ಸೈಟ್ ಅಲ್ಲ ಎಂದು ಕಿಡಿ ಕಾರಿದ್ದಾರೆ.

ಸದ್ಯ ಅಭಿರಾಮಿ ವೆಂಕಟಾಚಲಂ ಅವರ ಈ ಅನುಭವದ ಮಾತುಗಳ ಕುರಿತು ಪರ - ವಿರೋಧ ಚರ್ಚೆ ಶುರುವಾಗಿದೆ. ಅಂದ್ಹಾಗೇ ಅಭಿರಾಮಿ ವಿಜಯ್ ದೇವರಕೊಂಡ ಅಭಿನಯದ ''ನೋಟ''.. ಅಜಿತ್ ಅಭಿನಯದ ''ನೇರ್ಕೊಂಡ ಪಾರ್ವೈ''.. ವಿಕ್ರಮ್ ಅಭಿನಯದ ''ಧ್ರುವ ನಚ್ಚತ್ತಿರಂ'' ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ಧಾರೆ. ವೆಬ್ ಸರಣಿ ಮತ್ತು ಕಿರುಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ಧಾರೆ.

ಭರತನಾಟ್ಯದಲ್ಲಿ ಪರಿಣಿತಿಯನ್ನು ಹೊಂದಿರುವ ಅಭಿರಾಮಿ ತಮಿಳಿನ ''ಬಿಗ್ ಬಾಸ್'' ಮೂರನೇ ಸೀಸನ್‌ನಲ್ಲಿ ಸ್ಫರ್ಧಿಯಾಗಿ ಭಾಗವಹಿಸಿದ್ದರು. ಓಟಿಟಿಯಲ್ಲಿ ''ಬಿಗ್ ಬಾಸ್‌'' ಪ್ರಸಾರವಾದಾಗಲೂ ಖೂಡ ಕಣಕ್ಕಿಳಿದಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇವರಿಗೆ ಇದ್ದಾರೆ.

abhirami-venkatachalam-slams-subscribers-demanding-inappropriate-content

More from Filmibeat

English summary
"My creativity is not your commodity." Abhirami Venkatachalam slams disrespectful followers and stands firm on her artistic integrity. Read her viral statement here.
Read more about: biggboss social media kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X