Tamil Nadu Election 2026: ಮತ ಚಲಾಯಿಸುವ ವೇಳೆ ಗೊಂದಲಕ್ಕೀಡಾದ ನಟ ಅಜಿತ್, ಮತ್ತೆ ವಾಪಸ್ ಹೋಗಿದ್ದೇಕೆ?

ಸಿನಿಮಾ ಹಾಗೂ ರಾಜಕೀಯರಂಗಕ್ಕೆ ಬಿಡಿಸಲಾಗದ ನಂಟು. ಪಂಚರಾಜ್ಯ ಚುನಾವಣೆ ಈಗ ಎಲ್ಲರ ಗಮನ ಸೆಳೆದಿದೆ. ಕೆಲ ಸಿನಿಮಾ ತಾರೆಯರು ಕೂಡ ಚುನಾವನೆ ಕಣದಲ್ಲಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆ ಮತದಾನ ಇಂದು(ಏಪ್ರಿಲ್ 23) ನಡೆಯಲಿದೆ. ನಟ ವಿಜಯ್ ಟಿವಿಕೆ ಪಕ್ಷ ಸ್ಥಾಪಿಸಿ ಅಖಾಡಕ್ಕೆ ಇಳಿದಿದ್ದಾರೆ.

ಜಯಲಲಿತಾ ಹಾಗೂ ಕರುಣಾನಿಧಿ ಅಗಲಿಕೆ ಬಳಿಕ ತಮಿಳುನಾಡು ರಾಜಕೀಯರಂಗದಲ್ಲಿ ಮಾಸ್ ಲೀಡರ್ ಅನುಪಸ್ಥಿತಿ ಎದ್ದು ಕಾಣ್ತಿದೆ. ಇದರ ಲಾಭ ಪಡೆಯಲು ಖ್ಯಾತ ನಟ ವಿಜಯ್ ಮುಂದಾಗಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಿ 234 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಡಿಎಂಕೆ ಹಾಗೂ ಎಐಎಡಿಎಂಕೆ ವಿರುದ್ಧ ಗೆದ್ದು ಬೀಗುವ ಉತ್ಸಾಹದಲ್ಲಿದ್ದಾರೆ. ವಿಜಯ್ ಬಗ್ಗೆ ಮತದಾರರು ಭರವಸೆ ಹೊಂದಿದ್ದಾರೆ. ಹಾಗಾಗಿ ಟಿವಿಕೆ ಪಕ್ಷ ಈ ಬಾರಿ ಚುನಾವಣೆಯಲ್ಲಿ ದೊಡ್ಡ ಕ್ರಾಂತಿ ಮಾಡುವ ಲೆಕ್ಕಾಚಾರ ಶುರುವಾಗಿದೆ.

Actor Ajith Casts Vote Amid Buzz as Vijay s TVK Enters TamilNadu Elections 2026

ವಿದೇಶಗಳಿಂದ ಕೂಡ ಕೆಲವರು ತಾಯ್ನಾಡಿಗೆ ವಾಪಸ್ ಬಂದು ತಮ್ಮ ಹಕ್ಕು ಚಲಾಯಿಸಲು ಮುಂದಾಗಿದ್ದಾರೆ. ಸಿನಿಮಾ ತಾರೆಯರು ಎಲ್ಲಿ ಮತ ಚಲಾಯಿಸುತ್ತಾರೆ ಎನ್ನುವ ನಿರೀಕ್ಷೆ ಕೆಲವರಲ್ಲಿದೆ. ಪ್ರತಿ ಬಾರಿ ಮತ ಚಲಾಯಿಸುವ ಮತಗಟ್ಟೆಗಳಲ್ಲೇ ಈ ಬಾರಿ ಕೂಡ ತಾರೆಯರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಬೆಳ್ಳಂ ಬೆಳಗ್ಗೆ ತಾರೆಯರು ಮತ ಚಲಾಯಿಸಲು ಮುಂದಾಗಿದ್ದಾರೆ. ಚೆನ್ನೈn ತಿರುವನ್ಮಿಯೂರ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯಲ್ಲಿ ನಟ ಅಜಿತ್ ಮತ ಚಲಾಯಿಸಿದರು.

ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮತಗಟ್ಟೆ ಬಳಿ ಜಮಾಯಿಸಿದ್ದರು. ವೈಟ್ ಅಂಡ್ ವೈಟ್‌ನಲ್ಲಿ ಬಂದಿದ್ದ ಅಜಿತ್ ಬೇಗ ಮತ ಚಲಾಯಿಸಿ ಹೊರ ಬಂದರು. ಆದರೆ ಇವಿಎಂ ಮಿಷಿನ್ ಬಳಿಕ ಹೋಗಿ ಮತ ಚಲಾಯಿಸಿ ಬಂದ ಅಜಿತ್ ಒಂದು ಕ್ಷಣ ಕನ್‌ಫ್ಯೂಸ್ ಆಗಿಬಿಟ್ಟರು. ಮತ್ತೆ ವಾಪಸ್ ತೆರಳಿ ತಾನು ಮತ ಚಲಾಯಿಸಿದ್ದೀನೋ ಇಲ್ಲವೋ ಎಂದು ಖಚಿತಪಡಿಸಿಕೊಂಡರು.

ಬೆಳಗ್ಗೆ 7 ಗಂಟೆಗೂ ಮುನ್ನ ನಟ ಅಜಿತ್ ಬಂದು ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ ಮೊದಲ ಮತದಾರ ಎನಿಸಿಕೊಂಡಿದ್ದಾರೆ. ಡಿಎಂಕೆ ಪಕ್ಷಕ್ಕೆ ಆಪ್ತರಾಗಿ ಅಜಿತ್ ಗುರ್ತಿಸಿಕೊಂಡಿದ್ದಾರೆ. ವಿಜಯ್ ರಾಜಕೀಯರಂಗಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಅಜಿತ್ ಡಿಎಂಕೆ ಪರ ಅಖಾಡಕ್ಕೆ ಇಳಿಯುತ್ತಾರೆ ಎಂದು ಕೆಲವರು ಭಾವಿಸಿದ್ದರು. ಆದರೆ ಅದು ಸುಳ್ಳಾಯಿತು.

ಸಿನಿಮಾ ಹಾಗೂ ಕಾರ್ ರೇಸ್ ಎಂದು ಅಜಿತ್ ಸದಾ ಬ್ಯುಸಿಯಾಗಿರುತ್ತಾರೆ. ಕಾರ್ ರೇಸ್ ಕಾರಣಕ್ಕೆ ಚೆನ್ನೈಯಿಂದ ದೂರ ಹೋಗಿದ್ದ ಮತ ಚಲಾಯಿಸುವ ಸಲುವಾಗಿ ವಾಪಸ್ ಬಂದಿದ್ದರು. ಮತ ಚಲಾಯಿಸಿ ಹೊರಬಂದ ಬಳಿಕ ಅಭಿಮಾನಿಗಳು, ಮಾಧ್ಯಮ ಛಾಯಾಗ್ರಾಹಕರು ಮುತ್ತಿಕೊಂಡರು. ಈ ವೇಳೆ ಜೇಬಿನಲ್ಲಿದ್ದ ಮೊಬೈಲ್ ಫೋನ್ ತೆಗೆದು ವಿಡಿಯೋ, ಫೋಟೊ ಕ್ಲಿಕ್ಕಿಸಿದ ಅಜಿತ್ ಅಲ್ಲಿಂದ ಕಾರ್ ಏರಿ ಹೊರಟರು.

ಅಜಿತ್ ಮತಗಟ್ಟೆಗೆ ಬಂದು ಮತ ಚಲಾಯಿಸಿ ಹೋದ ಫೋಟೊ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಳೆದ ವರ್ಷ ಅಜಿತ್ ನಟಿಸಿದ ಎರಡು ಸಿನಿಮಾಗಳು ಬಿಡುಗಡೆ ಆಗಿತ್ತು. ಆದರೆ ಸದ್ಯ ಯಾವುದೇ ಸಿನಿಮಾ ಚಿತ್ರೀಕರಣ ಆರಂಭಿಸಿಲ್ಲ. ಮತ್ತೆ ತೆರೆಮೇಲೆ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ತಮಿಳುನಾಡಿನಲ್ಲಿ ರಜನಿಕಾಂತ್, ವಿಜಯ್ ಬಳಿಕ ಭಾರೀ ಜನಪ್ರಿಯತೆ ಇರುವ ನಟ ಅಜಿತ್. ಹಾಗಾಗಿ ರಾಜಕೀಯ ಪಕ್ಷಗಳು ಅವರನ್ನು ಸೆಳೆಯುವ ಪ್ರಯತ್ನ ಮಾಡುತ್ತಲೇ ಇವೆ. ಅವರು ಮಾತ್ರ ಯಾವುದೇ ಪಕ್ಷದ ಜೊತೆ ಬಹಿರಂಗವಾಗಿ ಗುರ್ತಿಸಿಕೊಳ್ಳಲು ಸಿದ್ಧರಿಲ್ಲ.

Read more about: ajith vijay politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X