ಬೈಕ್ ರೈಡ್ ಬಳಿಕ ಸೈಕಲ್ ಏರಿ ಹೊರಟ ಅಜಿತ್: ಸ್ಟಾರ್ ನಟನ ಸೈಕಲ್ ಪ್ರೀತಿ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ

ಸ್ಟಾರ್ ಕಲಾವಿದರ ಬೈಕ್ ರೈಡ್, ಸೈಕ್ಲಿಂಗ್ ಕ್ರೇಜ್ ಬಗ್ಗೆ ಅಭಿಮಾನಿಗಳಿಗೆ ಗೊತ್ತಿದೆ. ದುಬಾರಿ ಕಾರುಗಳನ್ನು ಪಕ್ಕಕ್ಕೆ ಇಟ್ಟು, ಅಭಿಮಾನಿಗಳ ಕಣ್ಣಿಗೆ ಬೀಳದ ಹಾಗೆ ಸೈಲೆಂಟ್ ಆಗಿ ರೈಡ್ ಹೋಗುವ ಮೂಲಕ ಕಲಾವಿದರು ಸಖತ್ ಎಂಜಾಯ್ ಮಾಡುತ್ತಿರುತ್ತಾರೆ. ಸ್ಯಾಂಡಲ್ ವುಡ್ ನಲ್ಲಿ ನಟ ದಿಗಂತ್ ಮತ್ತು ಐಂದ್ರಿತಾ ರೇ ಸದಾ ಸೈಕ್ಲಿಂಗ್ ಮಾಡುತ್ತಿರುತ್ತಾರೆ. ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಅವರಿಗೂ ಸೈಕಲ್ ಸವಾರಿ ಎಂದರೆ ತುಂಬಾ ಪ್ರೀತಿ. ಇನ್ನೂ ಚಾಲೆಂಜಿಂಗ್ ದರ್ಶನ್ ಅವರ ಬೈಕ್ ಕ್ರೇಜ್ ಬಗ್ಗೆಯೂ ಹೇಳಬೇಕಾಗಿಲ್ಲ.

ಪಕ್ಕದ ತಮಿಳಿಗೆ ಹೋದರೆ ಖ್ಯಾತ ನಟ ತಲಾ ಅಜಿತ್ ಅವರಿಗೂ ಬೈಕ್ ರೈಡ್ ಮತ್ತು ಸೈಕಲ್ ಸವಾರಿ ಅಂದರೆ ಸಖತ್ ಕ್ರೇಸ್. ಚಿತ್ರೀಕರಣ ನಡುವೆಯೂ ಅಜಿತ್ ರೈಡ್ ಹೋಗುತ್ತಿರುತ್ತಾರೆ. ಅಜಿತ್ ಬೈಕ್ ರೈಡ್ ಮಾಡುವುದು ಮತ್ತು ವೀಲಿಂಗ್ ಮಾಡುವ ಫೋಟೋಗಳು ಆಗಾಗ ವೈರಲ್ ಆಗುತ್ತಿರುತ್ತೆ. ಇತ್ತೀಚಿಗಷ್ಟೆ ಸುಮಾರು 10 ಸಾವಿರ ಕಿಮೀ ಬೈಕ್ ರೈಡ್ ಮಾಡಿರುವ ಅಜಿತ್ ಉತ್ತರ ಭಾರತದ ಕಡೆ ಪಯಣ ಬೆಳೆಸಿದ್ದರು. ಮುಂದೆ ಓದಿ..

ಅಜಿತ್ ಸೈಕಲ್ ಸವಾರಿ ಫೋಟೋ ವೈರಲ್

ಅಜಿತ್ ಸೈಕಲ್ ಸವಾರಿ ಫೋಟೋ ವೈರಲ್

ಬೈಕ್ ರೈಡ್ ಮುಗಿಸಿ ವಾಪಸ್ ಆಗುತ್ತಿದ್ದಂತೆ ಇದೀಗ ಸೈಕಲ್ ಏರಿ ಹೊರಟಿದ್ದಾರೆ. ಹೌದು, ಅಜಿತ್ ಸೈಕ್ಲಿಂಗ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ರೆಂಡಿಂಗ್ ನಲ್ಲಿದೆ. ಸ್ಪೋರ್ಟ್ಸ್ ಉಡುಪು ಧರಿಸಿ, ಹೆಲ್ಮೆಟ್ ಹಾಕಿ ಸೈಕಲ್ ಜೊತೆ ಕುಳಿತಿರುವ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಹೈದರಾಬಾದ್ ನಲ್ಲಿ ಅಜಿತ್ ಸೈಕಲ್ ಸವಾರಿ

ಹೈದರಾಬಾದ್ ನಲ್ಲಿ ಅಜಿತ್ ಸೈಕಲ್ ಸವಾರಿ

ಅಜಿತ್ ಸೈಕಲ್ ಏರಿ ಹೊರಟಿದ್ದು ಹೈದರಾಬಾದ್ ನಲ್ಲಿ. ಹೈದರಾಬಾದ್ ನಿಂದ ಅಜಿತ್ ಪಯಣ ಯಾವ ಕಡೆ ಎನ್ನುವುದು ಬಹಿರಂಗವಾಗಿಲ್ಲ. ಅಜಿತ್ ಸೈಕಲ್ ಪ್ರೀತಿಯ ಬಗ್ಗೆ ಅಜಿತ್ ಸ್ನೇಹಿತ ಸುರೇಶ್ ಕುಮಾರ್ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಕೂರ್ಗ್ ಕಡೆಯೂ ಸೈಕಲ್ ಏರಿ ಬಂದಿದ್ದರು ಅಜಿತ್

ಕೂರ್ಗ್ ಕಡೆಯೂ ಸೈಕಲ್ ಏರಿ ಬಂದಿದ್ದರು ಅಜಿತ್

ಸುರೇಶ್ ಅವರು ಸುಮಾರು 15 ವರ್ಷಗಳಿಂದ ಅಜಿತ್ ಜೊತೆ ಸೈಕಲ್ ಸವಾರಿ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸೈಕ್ಲಿಂಗ್ ಅವರ ನೆಚ್ಚಿನ ಹವ್ಯಾಸ ಎಂದು ಹೇಳಿದ್ದಾರೆ. ಸ್ಪೋರ್ಟ್ಸ್ ಎಂದರೆ ತುಂಬಾ ಇಷ್ಟ ಪಡುವ ಅಜಿತ್ ಸೈಕಲ್ ಏರಿ ದೇಶದ ಅನೇಕ ಭಾಗಗಳನ್ನು ಸುತ್ತಾಡಿದ್ದಾರೆ. ಹೈದರಾಬಾದ್, ವೈಜಾಕ್, ಕೊಯಂಬತ್ತೂರು, ಕೂರ್ಗ್, ತಿರುಪತಿ ಸೇರಿದಂತೆ ಸಾಕಷ್ಟು ಸುತ್ತಾಡಿದ್ದಾರೆ ಎಂದು ಹೇಳಿದ್ದಾರೆ.

Recommended Video

ಮೊದಲ ಬಾರಿಗೆ ಪೊಗರು ಚಿತ್ರದ ಬಜೆಟ್ ಬಗ್ಗೆ ಮಾತನಾಡಿದ್ರು ಧ್ರುವ ಸರ್ಜಾ | Pogaru | DhruvaSarja PressMeet
30 ಸಾವಿರಕ್ಕೂ ಅಧಿಕ ಕಿಮೀ ಸೈಕಲ್ ಸವಾರಿ ಮಾಡಿರುವ ಅಜಿತ್

30 ಸಾವಿರಕ್ಕೂ ಅಧಿಕ ಕಿಮೀ ಸೈಕಲ್ ಸವಾರಿ ಮಾಡಿರುವ ಅಜಿತ್

ಸುರೇಶ್ ಮತ್ತು ಅಜಿತ್ ಇಬ್ಬರು ಸುಮಾರು 30 ಸಾವಿರಕ್ಕೂ ಅಧಿಕ ಕಿಮೀ ಸೈಕಲ್ ಸವಾರಿ ಮಾಡಿದ್ದಾರೆ. ಇನ್ನೂ ಸಾವಿರಾರು ಕಿಮೀ ಸುತ್ತಾಡುವ ಯೋಜನೆ ಹಾಕಿಕೊಂಡಿರುವುದಾಗಿ ಹೇಳಿದ್ದಾರೆ. ಅಜಿತ್ ಅವರಿಗೆ ಸೈಕ್ಲಿಂಗ್ ಎಂದರೆ ಎಷ್ಟು ಪ್ರೀತಿ ಮತ್ತು ಆಸಕ್ತಿ ಬಗ್ಗೆ ಸುರೇಶ್ ದೀರ್ಘವಾಗಿ ಬರೆದುಕೊಂಡಿದ್ದಾರೆ.

More from Filmibeat

English summary
Tamil Actor Ajith Kumar cycling photo goes viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X