ವೈರಲ್ ವಿಡಿಯೋ: ಆಟೋದಲ್ಲಿ ಓಡಾಡುತ್ತಿರುವ ನಟ ಅಜಿತ್ ಸರಳತೆಗೆ ಅಭಿಮಾನಿಗಳು ಫಿದಾ
ತಮಿಳು ಸಿನಿಮಾರಂಗದ ಖ್ಯಾತ ನಟ ಅಜಿತ್ ಸಿನಿಮಾಗಳಿಂತ ಹೆಚ್ಚಾಗಿ, ಸರಳತೆ ಮತ್ತು ಮಾನವೀಯ ಕೆಲಸಗಳನ್ನು ಮಾಡುವ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಅಜಿತ್ ಇತ್ತೀಚಿಗೆ ಚೆನ್ನೈನಲ್ಲಿ ನಡೆದ ತಮಿಳುನಾಡು ರಾಜ್ಯ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಚಿನ್ನದ ಪದಕಗಳನ್ನು ಗೆದ್ದಿದ್ದರು.
Recommended Video
ಸೈಕಲ್ ಸವಾರಿ, ಬೈಕ್ ರೈಡಿಂಗ್ ಅಂತ ಊರೂರು ಸುತ್ತಾಡುತ್ತಿರುವ ನಟ ಅಜಿತ್ ಈಗ ಆಟೋದಲ್ಲಿ ಓಡಾಡುತ್ತಿದ್ದಾರೆ. ಸ್ಟಾರ್ ನಟರಾಗಿದ್ದರೂ ಸಾಮಾನ್ಯ ಮನುಷ್ಯನಂತೆ ಆಟೋದಲ್ಲಿ ಓಡಾಡುತ್ತಿರುವ ತಲಾ ಅಜಿತ್ ನೋಡಿ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ.
ದುಬಾರಿ ಕಾರುಗಳಿದ್ದರೂ ಸಹ ಅಜಿತ್ ಆಟೋದಲ್ಲಿ ಸಿಟಿ ಸುತ್ತಾಡುತ್ತಿದ್ದಾರೆ. ಅಜಿತ್ ಅವರ ಸರಳತೆ ಮತ್ತು ವಿನಮ್ರ ಸ್ವಭಾವಕ್ಕಾಗಿ ಟ್ವಿಟ್ಟರ್ ನಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಜಿತ್ ಆಟೋದಲ್ಲಿ ಓಡಾಡುತ್ತಿರುವ ವಿಡಿಯೋವನ್ನು ಅಭಿಮಾನಿಗಳು ಶೇರ್ ಮಾಡಿ, ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ.

ಇತ್ತೀಚಿಗೆ ನಡೆದ 46ನೇ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಜಿತ್ ಬರೋಬ್ಬರಿ 6 ಚಿನ್ನದ ಪದಕಗಳನ್ನು ಗೆದ್ದಿದ್ದರು. ಅಜಿತ್ ಸಾಧನೆಗೆ ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರವೇ ಹರಿದುಬಂದಿತ್ತು.
ಇತ್ತೀಚಿಗೆ ಹೈದರಾಬಾದ್ ನ ರಸ್ತೆಯಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದ ಅಜಿತ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದುವರೆಗೂ ಅಜಿತ್ ಸುಮಾರು 30 ಸಾವಿರಕ್ಕೂ ಅಧಿಕ ಕಿಮೀ ಸೈಕಲ್ ಸವಾರಿ ಮಾಡಿದ್ದು, ಇನ್ನೂ ಸಾಕಷ್ಟು ಕಿಮೀ ಸವಾರಿ ಮಾಡುವ ಪ್ಲಾನ್ ಹಾಕಿಕೊಂಡಿದ್ದಾರೆ.
ಸಿನಿಮಾಗಳಿಂದ ಹೆಚ್ಚಾಗಿ ಅಜಿತ್ ಬೇರೆ ಬೇರೆ ವಿಚಾರಗಳಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಅಜಿತ್ ಸದ್ಯ ವಲಿಮೈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಎರಡು ವರ್ಷಗಳಿಂದ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಇನ್ನೂ ಕೆಲವು ಭಾಗದ ಚಿತ್ರೀಕರಣ ಬಾಕಿ ಇದೆ.


Click it and Unblock the Notifications











