For Quick Alerts
  ALLOW NOTIFICATIONS  
  For Daily Alerts

  ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅತೀ ಹೆಚ್ಚು ಚಿನ್ನದ ಪದಕ ಗೆದ್ದ ಸ್ಟಾರ್ ನಟ ಅಜಿತ್

  |

  ತಮಿಳು ಸೂಪರ್ ಸ್ಟಾರ್ ತಲಾ ಅಜಿತ್ ಬಹುಮುಖ ಪ್ರತಿಭೆ. ಸಿನಿಮಾ ಮಾತ್ರವಲ್ಲದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಜಿತ್ ಗುತಿಸಿಕೊಂಡಿದ್ದಾರೆ. ಕಾರ್ ರೇಸ್, ಬೈಕ್ ರೇಸ್, ಸೈಕ್ಲಿಂಗ್ ಮತ್ತು ಸ್ಪೋರ್ಟ್ಸ್ ಎಂದರೇ ಅಜಿತ್ ಗೆ ತುಂಬಾ ಇಷ್ಟ.

  ಇತ್ತೀಚಿಗೆ ಚೆನ್ನೈನಲ್ಲಿ ನಡೆದ ತಮಿಳುನಾಡು ರಾಜ್ಯ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಟ ಅಜಿತ್ ಹಲವು ಚಿನ್ನದ ಪದಕಗಳನ್ನು ಗೆದ್ದು ಬೀಗಿದ್ದಾರೆ. ಹೌದು, ಇತ್ತೀಚಿಗೆ ನಡೆದ 46ನೇ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಜಿತ್ ಬರೋಬ್ಬರಿ 6 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಮುಂದೆ ಓದಿ..

  ಬೈಕ್ ರೈಡ್ ಬಳಿಕ ಸೈಕಲ್ ಏರಿ ಹೊರಟ ಅಜಿತ್: ಸ್ಟಾರ್ ನಟನ ಸೈಕಲ್ ಪ್ರೀತಿ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿಬೈಕ್ ರೈಡ್ ಬಳಿಕ ಸೈಕಲ್ ಏರಿ ಹೊರಟ ಅಜಿತ್: ಸ್ಟಾರ್ ನಟನ ಸೈಕಲ್ ಪ್ರೀತಿ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ

  ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರ

  ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರ

  ಸೆಲೆಬ್ರಿಟಿಗಳು ಸಾಮಾನ್ಯವಾಗಿ ಗೆಸ್ಟ್ ಆಗಿ ಕಾರ್ಯಕ್ರಮಗಳಿಗೆ ಎಂಟ್ರಿ ಕೊಡುತ್ತಾರೆ. ಆದರೆ ಅಜಿತ್ ತಾವೆ ಸ್ಪರ್ಧಿಸಿ ಗೆದ್ದಿರುವುದು ಅಭಿಮಾನಿಗಳಿಗೆ ಸಂತಸ ತಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ. ಇನ್ನು ಅಜಿತ್ ಮೆಡಲ್ ಪಡೆಯುತ್ತಿರುವ ಫೋಟೋಗಳನ್ನು ಅಭಿಮಾನಿಗಳು ಶೇರ್ ಮಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಸೈಕಲ್ ಸವಾರಿಯ ಫೋಟೋಗಳು ವೈರಲ್ ಆಗಿತ್ತು

  ಸೈಕಲ್ ಸವಾರಿಯ ಫೋಟೋಗಳು ವೈರಲ್ ಆಗಿತ್ತು

  ಇತ್ತೀಚಿಗಷ್ಟೆ ನಟ ಅಜಿತ್ ಸೈಕ್ಲಿಂಗ್ ಮಾಡುತ್ತಿರುವ ಫೋಟೋಗಳು ಹರಿದಾಡುತ್ತಿತ್ತು. ಬೈಕ್ ರೇಸ್ ಮುಗಿಯುತ್ತಿದ್ದಂತೆ ಸೈಕಲ್ ಸವಾರಿ ಹೊರಟಿದ್ದ ಅಜಿತ್ ಹೈದರಾಬಾದ್ ನ ರಸ್ತೆಯಲ್ಲಿ ಅಭಿಮಾನಿಗಳ ಕ್ಯಾಮರಾ ಸೆರೆಯಾಗಿದ್ದರು. ಅಜಿತ್ ಇದುವರೆಗೂ ಸುಮಾರು 30 ಸಾವಿರಕ್ಕೂ ಅಧಿಕ ಕಿಮೀ. ಸೈಕಲ್ ಸವಾರಿ ಮಾಡಿದ್ದಾರೆ.

  ಅಜಿತ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ ಸೂಪರ್ ಹಿಟ್ 'ಬಿಲ್ಲ'ಅಜಿತ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ ಸೂಪರ್ ಹಿಟ್ 'ಬಿಲ್ಲ'

  2019ರಲ್ಲಿ ಸ್ಪರ್ಧಿಸಿದ್ದರು

  2019ರಲ್ಲಿ ಸ್ಪರ್ಧಿಸಿದ್ದರು

  ಇತ್ತೀಚಿಗೆ ನಟ ಅಜಿತ್ ರೈಫಲ್ ಶೂಟಿಂಗ್ ಅಭ್ಯಾಸ ಮಾಡುತ್ತಿದ್ದರು. ರೈಫಲ್ ಕ್ಲಬ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಅಂದಹಾಗೆ ಅಜಿತ್ ಸ್ಪರ್ಧಿಸುತ್ತಿರುವುದು ಇದೇ ಮೊದಲೇನಲ್ಲ. 2019ರಲ್ಲೂ ಸ್ಪರ್ಧಿಸಿದ್ದರು.

  ದುನಿಯಾ ವಿಜಯ್ ನೋಡಲು ಬಂದ 10 ಸಾವಿರ ಅಭಿಮಾನಿಗಳು | Filmibeat Kannada
  ವಲಿಮೈ ಸಿನಿಮಾದಲ್ಲಿ ನಟನೆ

  ವಲಿಮೈ ಸಿನಿಮಾದಲ್ಲಿ ನಟನೆ

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಅಜಿತ್ ಸದ್ಯ ವಲಿಮೈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಎರಡು ವರ್ಷಗಳ ಹಿಂದೆಯೆ ಈ ಸಿನಿಮಾ ಅನೌನ್ಸ್ ಮಾಡಲಾಗಿತ್ತು. ಇನ್ನು ಚಿತ್ರೀಕರಣ ಮುಕ್ತಾಯವಾಗಿಲ್ಲ. ಬಹುತೇಕ ಚಿತ್ರೀಕರಣ ಮುಗಿಸಿದ್ದು, ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಲಿದೆ.

  English summary
  Actor Ajith won 6 gold medal in Tamilnadu state rifle shooting championship.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X