ಚಿತ್ರೀಕರಣದ ವೇಳೆ ತಮಿಳು ನಟ ಅಜಿತ್ ಕಾರು ಪಲ್ಟಿಯಾಗಿ ಅಪಘಾತ; ಬೆಚ್ಚಿಬಿದ್ದ ಫ್ಯಾನ್ಸ್

ಕಾರ್, ಬೈಕ್ ಏರಿ ರಿಸ್ಕಿ ಸ್ಟಂಟ್ ಮಾಡುವುದರಲ್ಲಿ ತಮಿಳು ನಟ ಅಜಿತ್ ಸದಾ ಮುಂದಿರುತ್ತಾರೆ. ಆದರೆ ಈ ರೀತಿ ಸ್ಟಂಟ್ ಮಾಡುವ ವೇಳೆ ಸಾಕಷ್ಟು ಬಾರಿ ಗಾಯಗೊಂಡಿದ್ದಾರೆ. 'ವಿದಾಮುಯರ್ಚಿ' ಚಿತ್ರದಲ್ಲಿ ಸದ್ಯ ಅಜಿತ್ ನಟಿಸುತ್ತಿದ್ದಾರೆ. ಈ ಸಿನಿಮಾ ಚಿತ್ರೀಕರಣದ ವೇಳೆ ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿದೆ.

ಸದ್ಯ 'ವಿದಾಮುಯರ್ಚಿ' ಚಿತ್ರದ ಈ ಮೇಕಿಂಗ್ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಏನಾಯ್ತು ಎಂದು ಗೊಂದಲಕ್ಕೀಡಾಗಿದ್ದಾರೆ. ಅಜೆರ್ಬೈಜಾನ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಕಾರ್‌ನಲ್ಲಿ ಅಜಿತ್ ಹಾಗೂ ಮತ್ತೊಬ್ಬ ನಟ ಆರವ್ ಕೂಡ ಇದ್ದರು. ಕಾರ್‌ ಸೀಟ್‌ಗೆ ಆರವ್‌ನನ್ನು ಕಟ್ಟಿ ಹಾಕಿದ್ದು ಆತನ ಕೈಗೆ ಬೇಡಿ ಕೂಡ ಹಾಕಲಾಗಿದೆ.

Actor Ajithkumar s Risky Accident Scene from Vidaa muyrachi Goes Viral now

ಚೇಸಿಂಗ್ ಸನ್ನಿವೇಶದಲ್ಲಿ ನಟ ಅಜಿತ್ ವೇಗವಾಗಿ ಕಾರು ಚಲಾಯಿಸುತ್ತಿದ್ದರು. ಬಳಿಕ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಕಾರ್ ನಿಯಂತ್ರಣಕ್ಕೆ ಸಿಗದೇ ಪಲ್ಟಿ ಹೊಡೆದಿದೆ. ಕಾರು ಬೀಳುತ್ತಿದ್ದಂತೆ ಅಜಿತ್ ಮಾತನಾಡಿರುವ ಮಾತುಗಳು ವೀಡಿಯೋದಲ್ಲಿ ಕೇಳಿಸುತ್ತದೆ. ಆರವ್ ನಿನಗೆ ಏನು ಆಗಿಲ್ಲ ತಾನೇ, ಆರಾಮಾಗಿ ಇದ್ದೀಯಾ ಅಲ್ವಾ? ಎಂದು ಕೇಳಿದ್ದಾರೆ. ಕೂಡಲೇ ಸೆಟ್‌ನಲ್ಲಿ ಇದ್ದ ಎಲ್ಲರೂ ಹೋಗಿ ಇಬ್ಬರನ್ನು ಕಾರ್‌ನಿಂದ ಹೊರಕ್ಕೆ ಕರೆತಂದಿದ್ದಾರೆ.

ಕಳೆದ ನವೆಂಬರ್‌ನಲ್ಲಿ 'ವಿದಾ ಮುಯರ್ಚಿ' ಚಿತ್ರದ ಚಿತ್ರೀಕರಣಕ್ಕಾಗಿ ಚಿತ್ರತಂಡ ಅಜೆರ್ಬೈಜಾನ್‌ ತೆರಳಿತ್ತು. ಆ ಸಮಯದಲ್ಲಿ ಈ ಘಟನೆ ನಡೆದಿತ್ತು. ಮಗಿಳ್ ತಿರುಮೇನಿ ಈ ಆಕ್ಷನ್ ಎಂಟರ್‌ಟೈನರ್ ಸಾರಥ್ಯ ವಹಿಸಿಕೊಂಡಿದ್ದಾರೆ. ಅಜಿತ್ ಜೊತೆಗೆ ಅರ್ಜುನ್ ಸರ್ಜಾ, ತ್ರಿಶಾ, ರೆಗಿನಾ ಕಸೆಂದ್ರಾ ನಟಿಸುತ್ತಿದ್ದಾರೆ. ಇದೀಗ ಖುದ್ದಿ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಈ ಅಪಘಾತ ಸನ್ನಿವೇಶದ ಮೇಕಿಂಗ್ ವೀಡಿಯೋ ಹಂಚಿಕೊಂಡಿದೆ.

"ಶೌರ್ಯಕ್ಕೆ ಯಾವುದೇ ಮಿತಿಯಿಲ್ಲ. ಯಾವುದೇ ಡ್ಯೂಪ್ ಇಲ್ಲದೇ 'ವಿದಾ ಮುಯರ್ಚಿ' ಚಿತ್ರದಲ್ಲಿ ಅಜಿತ್ ಸ್ಟಂಟ್ ಮಾಡಿದ್ದಾರೆ. ನಟನ ನಿರ್ಭೀತ ಸಮರ್ಪಣೆಗೆ ಇದು ಸಾಕ್ಷಿ" ಎಂದು ಬರೆದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಸದ್ಯ ಅಭಿಮಾನಿಗಳು ಈ ವಿಡಿಯೋ ನೋಡಿ ಹುಬ್ಬೇರಿಸಿದ್ದಾರೆ. ಸಿನಿಮಾ ಚಿತ್ರೀಕರಣದ ವೇಳೆ ಕೊಂಚ ಎಚ್ಚರಿಕೆ ವಹಿಸಿ ಸರ್ ಎಂದು ಮನವಿ ಮಾಡುತ್ತಿದ್ದಾರೆ.

'ವಾಲಿಮೈ' ಸಿನಿಮಾ ಚಿತ್ರೀಕರಣದ ವೇಳೆಯೂ ಅಜಿತ್ ಇದೇ ರೀತಿ ರಿಸ್ಕ್ ಸ್ಟಂಟ್ ಮಾಡುವ ವೇಳೆ ಆಯತಪ್ಪಿ ಬೈಕ್‌ನಿಂದ ಬಿದ್ದಿದ್ದರು. ಬೈಕ್ ಚೇಸಿಂಗ್ ಸನ್ನಿವೇಶದಲ್ಲಿ ಯಾವುದೇ ಡ್ಯೂಪ್ ಇಲ್ಲದೇ ಕಾಣಿಸಿಕೊಂಡಿದ್ದರು. ವೇಗವಾಗಿ ಚಲಾಯಿಸುತ್ತಿದ್ದ ಬೈಕ್‌ನಿಂದ ಬಿದ್ದಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಬಳಿಕ ಕೊಂಚ ವಿರಾಮ ಪಡೆದು ಚಿತ್ರೀಕರಣ ಮುಗಿಸಿ ಆ ನಂತರ ಚಿಕಿತ್ಸೆ ಪಡೆದಿದ್ದರು.

ನಟ ಅಜಿತ್‌ಗೆ ಮೊದಲಿನಿಂದಲೂ ಕಾರ್, ಬೈಕ್ ಕ್ರೇಜ್ ಜಾಸ್ತಿ. ರೇಸಿಂಗ್ ಕಾರ್‌ಗಳನ್ನು ಕೂಡ ಚಲಾಯಿಸಿದ್ದಾರೆ. ರೇಸ್‌ಗಳಲ್ಲಿ ಕೂಡ ಭಾಗವಹಿಸಿದ್ದಾರೆ. ಇದೇ ಕಾರಣಕ್ಕೆ ತಮ್ಮ ಸಿನಿಮಾಗಳಲ್ಲಿ ಕಾರ್, ಬೈಕ್ ಸನ್ನಿವೇಶಗಳಲ್ಲಿ ಯಾವುದೇ ಡ್ಯೂಪ್ ಇಲ್ಲದೇ ತಾವೇ ನಟಿಸುತ್ತಾರೆ. ಈ ರೀತಿ ನಟಿಸುವ ವೇಳೆ ಸಣ್ಣ ಪುಟ್ಟ ಅವಘಡಗಳು ಸಂಭವಿಸಿವೆ. ಪೈಲೆಟ್ ಆಗಿ ತರಬೇತಿ ಪಡೆದಿರುವ ಅಜಿತ್ ಬಳಿ ಕಮರ್ಷಿಯಲ್ ಪೈಲೆಟ್ ಲೈಸೆನ್ಸ್ ಸಹ ಇದೆ.

Actor Ajithkumar s Risky Accident Scene from Vidaa muyrachi Goes Viral now

ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಜಿತ್ ನಟಿಸಿದ್ದಾರೆ. ಕಾಲಿವುಡ್‌ನಲ್ಲಿ ರಜನಿಕಾಂತ್, ದಳಪತಿ ವಿಜಯ್ ಬಳಿಕ ಅತಿ ಹೆಚ್ಚು ಅಭಿಮಾನಿಗಳು ಥಲಾಗೆ ಇದ್ದಾರೆ. ಇನ್ನು ಆಗಾಗ್ಗೆ ಬೈಕ್ ಏರಿ ಅಜಿತ್ ಪ್ರಪಂಚ ಪರ್ಯಟನೆಗೆ ಹೋಗುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಭಾರತ, ಭೂತಾನ್, ನೇಪಾಳ ದೇಶಗಳನ್ನು ಬೈಕ್‌ನಲ್ಲಿ ಸುತ್ತಾಡಿ ಬಂದಿದ್ದರು. 'ವಿದಾ ಮುಯರ್ಚಿ' ಚಿತ್ರೀಕರಣ ಬಳಿಕ ಮತ್ತೆ ಬೈಕ್ ಪ್ರವಾಸಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ.

More from Filmibeat

English summary
Vidaa Muyarchi film stunts, actor ajith risky car chasing BTS video goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X