ಧನುಷ್- ಮಾಜಿ ಪತ್ನಿ ಐಶ್ವರ್ಯಾ ರಜನಿಕಾಂತ್ ಪುತ್ರ ಯಾತ್ರಾಗೆ ದಂಡ ಹಾಕಿದ ಪೊಲೀಸರು!

ಇಷ್ಟು ದಿನ ನಟ ಧನುಷ್, ಅವರ ಮಾಜಿ ಪತ್ನಿ ಐಶ್ವರ್ಯಾ ರಜನಿಕಾಂತ್ ಅವರು ಸುದ್ದಿಯಲ್ಲಿರುತ್ತಿದ್ದರು. ಈಗ ಅವರ ಮಗ ಯಾತ್ರಾ ಸುದ್ದಿಯಲ್ಲಿದ್ದಾರೆ. ಅದು ಒಳ್ಳೆಯ ವಿಷಯಕ್ಕೆ ಅಲ್ಲ. ಧನುಷ್ ಅವರ ಹಿರಿಯ ಪುತ್ರ ಯಾತ್ರಾ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ದಂಡ ವಿಧಿಸಿದ್ದಾರೆ.

ಚೆನ್ನೈನ ಪೋಯಸ್ ಗಾರ್ಡನ್ ಪ್ರದೇಶದಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಧನುಷ್ ಪುತ್ರ ಯಾತ್ರಾ ಸೂಪರ್ ಬೈಕ್ ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಬೈಕ್ ನಂಬರ್ ಪ್ಲೇಟ್ ಕಾಣಿಸದ ಕಾರಣ ಸಂಚಾರ ಪೊಲೀಸರು ಯಾತ್ರಾ ತಾಯಿ ಐಶ್ವರ್ಯಾ ರಜನಿಕಾಂತ್ ಅವರೊಂದಿಗೆ ವಿಚಾರಣೆ ನಡೆಸಿದ್ದಾರೆ.

-dhanush-aishwaryas-elder-son-yatra

ಯಾತ್ರಾ ಬೈಕ್ ಸವಾರಿ ಕ್ಯಾಮರಾದಲ್ಲಿ ಸೆರೆ

ವಿಡಿಯೋ ವೈರಲ್ ಆಗುತ್ತಿದ್ದಂತೆ ಪೋಯಸ್ ಗಾರ್ಡನ್ ಸಂಚಾರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಯಾತ್ರಾ ಅವರಿಗೆ ಇನ್ನು 17 ವರ್ಷ ವಯಸ್ಸಾಗಿರುವುದರಿಂದ ಕಾನೂನುಬದ್ಧವಾಗಿ ವಾಹನ ಚಲಾಯಿಸುವಂತಿಲ್ಲ. ಇದರ ಬೆನ್ನಲ್ಲೆ ಯಾತ್ರಾ ಬೈಕ್ ಚಲಾಯಿಸುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ದ್ವಿಚಕ್ರ ವಾಹನವನ್ನು ಹೇಗೆ ಓಡಿಸಬೇಕೆಂದು ಯಾತ್ರಾ ತರಬೇತುದಾರ ಕಲಿಸುತ್ತಿರುವುದು ಕೂಡ ಇದರಲ್ಲಿ ರೆಕಾರ್ಡ್ ಆಗಿದೆ.

ಧನುಷ್ ಪುತ್ರ ಯಾತ್ರಾಗೆ ಟ್ರಾಫಿಕ್ ಪೊಲೀಸರ ದಂಡ

ವೈರಲ್ ವಿಡಿಯೋದಲ್ಲಿ ಬೈಕ್‌ನ ನಂಬರ್ ಪ್ಲೇಟ್ ಕಾಣಿಸದ ಕಾರಣ ಮತ್ತು ಯಾತ್ರಾ ಮಾಸ್ಕ್ ಧರಿಸಿದ್ದರಿಂದ ಪೊಲೀಸರು ಐಶ್ವರ್ಯಾ ರಜನಿಕಾಂತ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯ ನಂತರ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಮತ್ತು ಪರವಾನಗಿ ಇಲ್ಲದೆ ಸವಾರಿ ಮಾಡಿದ್ದಕ್ಕಾಗಿ ಯಾತ್ರಾ ಅವರಿಗೆ ದಂಡ ವಿಧಿಸಲಾಗಿದೆ.

ಯಾತ್ರಾ ಬಗ್ಗೆ ಕೆಲವು ಮಾಹಿತಿ

ಯಾತ್ರಾ ನಟ ಧನುಷ್ ಮತ್ತು ಅವರ ಮಾಜಿ ಪತ್ನಿ ಐಶ್ವರ್ಯಾ ರಜನಿಕಾಂತ್ ಅವರ ಹಿರಿಯ ಮಗ. ಈ ವರ್ಷದ ಜುಲೈನಲ್ಲಿ, ಧನುಷ್ ಯಾತ್ರಾ ಮತ್ತು ಅವರ ಕಿರಿಯ ಮಗ ಲಿಂಗ ಅವರೊಂದಿಗೆ ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಸ್ಥಾನದಲ್ಲಿ ಮೂವರು ತಲೆ ಬೋಳಿಸಿಕೊಂಡಿದ್ದು, ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

-dhanush-aishwaryas-elder-son-yatra

ಕಳೆದ ವರ್ಷ ಧನುಷ್ ಮತ್ತು ಐಶ್ವರ್ಯ ಇಬ್ಬರೂ ಯಾತ್ರಾ ಶಾಲೆಯ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಪುತ್ರರೊಂದಿಗೆ ಫೋಟೋಗೆ ಪೋಸ್ ಕೂಡ ನೀಡಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ಧನುಷ್ ಮತ್ತು ಐಶ್ವರ್ಯಾ ತಮ್ಮ ವಿಚ್ಛೇದನ ಘೋಷಿಸಿದ್ದರು.

2004 ರಲ್ಲಿ ನಟ ನುಷ್ ಮತ್ತು ರಜನಿಕಾಂತ್ ಅವರ ಮಗಳು ಐಶ್ವರ್ಯ ಮದುವೆಯಾಗಿದ್ದರು. 2006 ರಲ್ಲಿ ಯಾತ್ರಾಗೆ ಐಶ್ವರ್ಯಾ ಜನ್ಮ ನೀಡಿದ್ದರು. 2010 ರಲ್ಲಿ ಎರಡನೇ ಮಗವಿಗೆ ಪೋಷಕರಾಗಿದ್ದರು. ಯಾತ್ರಾ ಇತ್ತೀಚೆಗೆ ತನ್ನ ತಾಯಿ ಮತ್ತು ಅಜ್ಜ ರಜನಿಕಾಂತ್ ಅವರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು. ಅವರ ದೀಪಾವಳಿ ಆಚರಣೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಇನ್ನು, ನಟ ಧನುಷ್ ತಮ್ಮ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಬರೋಪಿಕ್‌ನಲ್ಲಿ ನಟಿಸಲು ನಟ ಧನುಷ್ ಸಿದ್ಧರಾಗಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾ ಅಕ್ಟೋಬರ್ 2024 ರಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದು, 2025 ರ ಮಧ್ಯದಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿಯಿದೆ.

More from Filmibeat

English summary
Dhanush-Aishwarya's son Yatra fined for violating traffic rules.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X