For Quick Alerts
  ALLOW NOTIFICATIONS  
  For Daily Alerts

  ರಜನೀಕಾಂತ್ ಮಗಳನ್ನು ಧನುಶ್ ಮದುವೆಯಾಗಿದ್ದು ಹೇಗೆ?

  |

  ರಜನೀಕಾಂತ್ ಹಿರಿಯ ಮಗಳು ಐಶ್ವರ್ಯಾ ಮತ್ತು ನಟ ಧನುಶ್ ಮದುವೆಯಾಗಿ 17 ವರ್ಷವಾಯಿತು. ಇಬ್ಬರಿಗೂ ಎರಡು ಗಂಡು ಮಕ್ಕಳಿದ್ದಾರೆ.

  ತಮ್ಮ ಕನಸಿನ ಚಿತ್ರಕ್ಕೆ ರಶ್ಮಿಕಾ ಬೇಕು ಅಂದ್ರು ಚಿರಂಜೀವಿ | Chiranjeevi | Rashmika mandanna

  ಈಗ ಧನುಶ್ ದೊಡ್ಡ ಸ್ಟಾರ್. ತಮಿಳು ಮಾತ್ರವಲ್ಲ ಹಿಂದಿಯಲ್ಲೂ ಸಹ ದೊಡ್ಡ-ದೊಡ್ಡ ನಟರೊಂದಿಗೆ ನಟಿಸಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

  ಆದರೆ ಧನುಶ್ ರಜನೀಕಾಂತ್ ಮಗಳು ಐಶ್ವರ್ಯಾ ಅವರನ್ನು ಮದುವೆಯಾದಾಗ ಅಷ್ಟೇನೂ ದೊಡ್ಡ ಸ್ಟಾರ್ ಅಲ್ಲ. ಧನುಶ್ ಐಶ್ವರ್ಯಾ ಅವರನ್ನು ಭೇಟಿಯಾದಾಗ ಕೇವಲ ಎರಡು ಸಿನಿಮಾ ಮಾಡಿದ್ದರಷ್ಟೆ.

  ಧನುಶ್ ಮತ್ತು ಐಶ್ವರ್ಯಾ ರಜನೀಕಾಂತ್ ಲವ್ ಸ್ಟೋರಿಯನ್ನು ಸ್ವತಃ ಅವರೇ ಹೇಳಿದ್ದಾರೆ...

  ಮೊದಲ ಭೇಟಿಯಲ್ಲಿ ಹಾಯ್ ಮಾತ್ರವೇ ಹೇಳಿದ್ದರು

  ಮೊದಲ ಭೇಟಿಯಲ್ಲಿ ಹಾಯ್ ಮಾತ್ರವೇ ಹೇಳಿದ್ದರು

  ಧನುಶ್ ಅವರ ಎರಡನೇ ಚಿತ್ರ ಕಾದಲ್ ಕೊಂಡೇನ್ ಸಿನಿಮಾ ಬಿಡುಗಡೆ ಆದಾಗ ಮೊದಲ ಬಾರಿಗೆ ಐಶ್ವರ್ಯಾ ರಜನೀಕಾಂತ್ ಅವರನ್ನು ಭೇಟಿ ಮಾಡಿದ್ದರಂತೆ ಧನುಶ್. ಅಂದು ಕೇವಲ 'ಹಾಯ್' ಮಾತ್ರವೇ ಹೇಳಿ ಹೊರಟುಹೋಗಿದ್ದರಂತೆ ಧನುಶ್.

  ಹೂಗುಚ್ಛ ಕಳಿಸಿದ್ದ ಐಶ್ವರ್ಯಾ ರಜನಿಕಾಂತ್

  ಹೂಗುಚ್ಛ ಕಳಿಸಿದ್ದ ಐಶ್ವರ್ಯಾ ರಜನಿಕಾಂತ್

  ಆದರೆ ಸಿನಿಮಾ ನೋಡಿದ್ದ ಐಶ್ವರ್ಯಾ ಧನುಶ್‌ ಗಾಗಿ ಹೂಗುಚ್ಛವೊಂದನ್ನು ಕಳಿಸಿ, 'ಚೆನ್ನಾಗಿ ನಟಿಸಿದ್ದೀರಿ. ಯಶಸ್ಸು ಸಿಗಲಿ, ಸಂಪರ್ಕದಲ್ಲಿರೋಣ' ಎಂದು ಪತ್ರವೊಂದನ್ನು ಬರೆದಿದ್ದರಂತೆ.

  ಐಶ್ವರ್ಯಾ ಮಾತು ಗಂಭೀರವಾಗಿ ಪರಿಗಣಿಸಿದ ಧನುಶ್

  ಐಶ್ವರ್ಯಾ ಮಾತು ಗಂಭೀರವಾಗಿ ಪರಿಗಣಿಸಿದ ಧನುಶ್

  ಐಶ್ವರ್ಯಾ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿದ ಧನುಶ್, ಪದೇ-ಪದೇ ಐಶ್ವರ್ಯಾ ಅವರಿಗೆ ಕರೆ ಮಾಡಿ ಮಾತನಾಡುತ್ತಿದ್ದರಂತೆ. ಭೇಟಿ ಆಗುತ್ತಿದ್ದರಂತೆ. ಈ ಇಬ್ಬರೂ ಪ್ರೇಮದಲ್ಲಿದ್ದಾರೆ ಎಂಬ ಗಾಸಿಪ್ಪು ಆಗ ಶುರುವಾಗಿತ್ತಂತೆ. ಆಗಿನ್ನೂ ಈ ಇಬ್ಬರೂ ಮದುವೆ ಆಗುವ ನಿರ್ಣಯಕ್ಕೆ ಬಂದಿರಲಿಲ್ಲ.

  ತಂಗಿಯ ಗೆಳತಿಯಷ್ಟೆ ಎಂದಿದ್ದ ಧನುಶ್

  ತಂಗಿಯ ಗೆಳತಿಯಷ್ಟೆ ಎಂದಿದ್ದ ಧನುಶ್

  ಧನುಶ್ ಸಹ ಐಶ್ವರ್ಯಾ ನನ್ನ ತಂಗಿಯ ಒಳ್ಳೆಯ ಗೆಳತಿ ಎಂದಷ್ಟೆ ಮಾಧ್ಯಮಗಳಿಗೆ ಹೇಳಿದ್ದರು. ಐಶ್ವರ್ಯಾ ಧನುಶ್‌ ಗಿಂತಲೂ ಎರಡು ವರ್ಷ ದೊಡ್ಡವರು. ಆದರೂ ಇಬ್ಬರೂ ಮದುವೆಯಾಗುವ ನಿರ್ಣಯಕ್ಕೆ ಬಂದು, ನಿರ್ಣಯವನ್ನು ಕುಟುಂಬಗಳ ಮುಂದೆ ಇಟ್ಟಾಗ ಅವರು ಸಂತೋಶದಿಂದ ಒಪ್ಪಿಕೊಂಡರಂತೆ.

  ಅದ್ದೂರಿಯಾಗಿ ನಡೆದ ಮದುವೆ

  ಅದ್ದೂರಿಯಾಗಿ ನಡೆದ ಮದುವೆ

  2003 ರಲ್ಲಿ ಮೊದಲ ಬಾರಿಗೆ ಭೇಟಿಯಾದ ಧನುಶ್-ಐಶ್ವರ್ಯಾ 2004 ನವೆಂಬರ್‌ನಲ್ಲಿ ಮದುವೆಯಾದರು. ಭಾರಿ ಅದ್ದೂರಿಯಾಗಿ ನಡೆದ ಮದುವೆಗೆ ಬಾಲಿವುಡ್ ಸೆಲೆಬ್ರಿಟಿಗಳು, ರಾಜ್ಯ, ರಾಷ್ಟ್ರದ ರಾಜಕಾರಣಿಗಳು ಸಹ ಆಗಮಿಸಿದ್ದರು.

  English summary
  Actor Dhanush and Rajinikanth's elder daughter Aishwarya happily married for 17 years. Here is Dhanush talks about their love story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X