ಶಿವಣ್ಣನ ಮತ್ತೊಂದು ತಮಿಳು ಸಿನಿಮಾ ರಿಲೀಸ್ ಪೋಸ್ಟ್‌ಪೋನ್: ಹೊಸ ಡೇಟ್ ಯಾವುದು ಗೊತ್ತಾ?
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮಿಳು ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ವಾರ ಸ್ಕ್ರೀನ್ ಅಪಿಯರೆನ್ಸ್ ಕಂಡ ತಮಿಳು ಪ್ರೇಕ್ಷಕರು ಫಿದಾ ಆಗಿದ್ದು, ಮತ್ತಷ್ಟು ಸಿನಿಮಾಗಳಲ್ಲಿ ಅವರನ್ನು ನೋಡುವ ಆಸೆ ವ್ಯಕ್ತಪಡಿಸಿದ್ದರು. ಇದಾದ ಬೆನ್ನಲ್ಲೆ ಶಿವರಾಜ್ ಕುಮಾರ್ ಮತ್ತಷ್ಟು ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯಕ್ಕೆ ಶಿವಣ್ಣ ನಟ ಧನುಷ್ ನಟನೆಯ ಆಕ್ಷನ್ ಫಿಲಂ "ಕ್ಯಾಪ್ಟನ್ ಮಿಲ್ಲರ್"ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 15 ರಂದು ತೆರೆಗೆ ಬರಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ಡಿಸೆಂಬರ್ 15 ರಂದು ಶಿವಕಾರ್ತಿಕೇಯನ್ ಅವರ ಅಯಾಲನ್ ಮತ್ತು ಸುಂದರ್ ಸಿ ಅವರ ಅರಣ್ಮನೈ 4 ಬಿಡುಗಡೆಯಾಗುತ್ತಿವೆ.

ಸಂಕ್ರಾಂತಿಗೆ ಸಿಹಿ ಹಂಚಲಿದೆ ಕ್ಯಾಪ್ಟನ್ ಮಿಲ್ಲರ್
ಧನುಷ್, ಶಿವರಾಜ್‌ಕುಮಾರ್ ಅಭಿನಯದ ನಿರ್ದೇಶಕ ಅರುಣ್ ಮಾದೇಶ್ವರನ್ ಅವರ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಇದೀಗ 2024ರ ಸಂಕ್ರಾಂತಿ ಹಬ್ಬದ ಪ್ರಯುಕ್ತ (ಜನವರಿ 2ನೇ ವಾರ) ತೆರೆಗೆ ಬರಲಿದೆ. ಪೊಂಗಲ್ ಹಬ್ಬ ತಮಿಳುನಾಡು, ಆಂಧ್ರದಲ್ಲಿ ಪ್ರಮುಖವಾಗಿದ್ದು, ಆ ಸಮಯಕ್ಕೆ ಈಗಾಗಲೇ ದಕ್ಷಿಣ ಭಾರತದ ಹಲವು ಸಿನಿಮಾಗಳು ತೆರೆಗೆ ಬರಲು ತಯಾರಾಗಿವೆ. ಈಗ ಅವುಗಳ ಸಾಲಿಗೆ ಕ್ಯಾಪ್ಟನ್ ಮಿಲ್ಲರ್ ಕೂಡ ಸೇರಿಕೊಂಡಿದೆ.
ಅರುಣ್ ಮಾದೇಶ್ವರನ್ ನಿರ್ದೇಶನದ ಕ್ಯಾಪ್ಟನ್ ಮಿಲ್ಲರ್, ದೊಡ್ಡ ಬಜೆಟ್ ಸಿನಿಮಾವಾಗಿದೆ. ಇದು ಧನುಷ್ ಅವರ ವೃತ್ತಿಜೀವನದ ಅತ್ಯಂತ ಬಿಗ್ ಬಜೆಟ್ ಸಿನಿಮಾ. ಕಳೆದ ವರ್ಷ ಸೆಪ್ಟೆಂಬರ್‌ನಿಂದ ಚಿತ್ರೀಕರಣವಾಗುತ್ತಿದ್ದು, ಧನುಷ್ ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಬಿಡುಗಡೆಯಾದ ಟೀಸರ್ ಜನರಲ್ಲಿ ಸಿನಿಮಾ ಬಗ್ಗೆ ಹೆಚ್ಚು ಕುತೂಹಲ ಹುಟ್ಟುಹಾಕಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ 2024ರ ಸಂಕ್ರಾಂತಿಯಂದು ಬಿಡುಗಡೆಯಾಗಲಿದೆ.
ಕ್ಯಾಪ್ಟನ್ ಮಿಲ್ಲರ್ ಸಿನಿಮಾಗೆ ಸತ್ಯಜ್ಯೋತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಟಿ ಜಿ ತ್ಯಾಗರಾಜನ್, ಸೆಂಥಿಲ್ ತ್ಯಾಗರಾಜನ್ ಮತ್ತು ಅರ್ಜುನ್ ತ್ಯಾಗರಾಜನ್ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾಕ್ಕೆ ಜಿ ಸರವಣನ್ ಮತ್ತು ಸಾಯಿ ಸಿದ್ಧಾರ್ಥ್ ಸಹ ಹಣ ಹಾಕಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಅವರ ಸಂಗೀತ ಮತ್ತು ಸಿದ್ಧಾರ್ಥ ನುನಿ ಅವರ ಛಾಯಾಗ್ರಹಣ ಸಿನಿಮಾಕ್ಕಿದೆ.

ಬಹುನಿರೀಕ್ಷಿತ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾವನ್ನು 1930-40ರ ಬ್ಯಾಕ್‌ಡ್ರಾಪ್‌ನಲ್ಲಿ ಚಿತ್ರೀಕರಿಸಲಾಗಿದೆ. ಜೈಲರ್ ಬಳಿಕ ಡಾ ಶಿವರಾಜ್‌ಕುಮಾರ್ ನಟಿಸಿರುವ ಎರಡನೇ ತಮಿಳು ಸಿನಿಮಾ ಇದಾಗಿದೆ. ಚಿತ್ರದಲ್ಲಿ ಸಂದೀಪ್ ಕಿಶನ್, ಪ್ರಿಯಾಂಕಾ ಅರುಳ್ ಮೋಹನ್, ನಿವೇದಿತಾ ಸತೀಶ್, ಸಂದೀಪ್ ಕಿಶನ್ ಮತ್ತು ಜಾನ್ ಕೊಕ್ಕೆನ್ ಮುಂತಾದವರು ನಟಿಸಿದ್ದಾರೆ.
ವಿಶೇಷವೆಂದರೆ, ಕ್ಯಾಪ್ಟನ್ ಮಿಲ್ಲರ್ ನಂತರ, ಧನುಷ್ ಮತ್ತೊಮ್ಮೆ ಅರುಣ್ ಮಾದೇಶ್ವರನ್ ಜೊತೆ ಮತ್ತೊಂದು ಸಿನಿಮಾಗೆ ಜೊತೆಯಾಗಲಿದ್ದಾರೆ. ಇನ್ನು, ಧನುಷ್ ಸೂಪರ್ ಹಿಟ್ ಕರ್ಣನ್ ಸಿನಿಮಾ ನಿರ್ದೇಶಕ ಮಾರಿ ಸೆಲ್ವರಾಜ್ ಅವರೊಂದಿಗೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ರಶ್ಮಿಕಾ ಮಂದಣ್ಣ ಜೊತೆಯಲ್ಲಿ ನಟಿಸಿರುವ ಶೇಖರ್ ಕಮ್ಮುಲ್ ಅವರ ಎರಡನೇ ನಿರ್ದೇಶನದ ಡಿ 50 ಮತ್ತು ಆನಂದ್ ಎಲ್ ರೈ ಅವರ ತೇರೆ ಇಷ್ಕ್ ಮೇ ಸಿನಿಮಾಗಳು ಧನುಷ್ ಕೈಯಲ್ಲಿವೆ.


Click it and Unblock the Notifications











