ಧನುಷ್‌ಗಿಲ್ಲ ವಿಚ್ಛೇದನದ ಚಿಂತೆ: 'ಪುಷ್ಪ' ನಿರ್ದೇಶಕನೊಂದಿಗೆ ಹೊಸ ಚಿತ್ರಕ್ಕೆ ಸಹಿ!
ನಟ ಧನುಷ್ ಪತ್ನಿ ಐಶ್ವರ್ಯಾ ಅವರಿಂದ ವಿಚ್ಛೇದನ ಪಡೆದು ದೂರ ಆಗಿದ್ದಾರೆ. ವಿಚ್ಛೇನದದ ಸುದ್ದಿ ಜೊತೆ ಜೊತೆಗೆ, ನಿರ್ದೇಶಕ ಧನುಷ್ ಅವರ ಸಿನಿಮಾಗಳ ಸುದ್ದಿ ಕೂಡ ಹರಿದಾಡುತ್ತಿದೆ. ಧನುಷ್ ಅವರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಪ್ರಕಟ ಆಗುತ್ತಿವೆ.
ರಜನಿಕಾಂತ್ ಮೊದಲ ಮಗಳು ಐಶ್ವರ್ಯಾ ಜೊತೆಗೆ 18 ವರ್ಷದ ದಾಂಪತ್ಯಕ್ಕೆ ಪೂರ್ಣ ವಿರಾಮ ಇಟ್ಟಿದ್ದಾರೆ. ಇಬ್ಬರು ವಿಚ್ಛೇದನ ಪಡೆದು ದೂರ ಆಗಿದ್ದಾರೆ. ಇದು ಅವರ ಆಪ್ತರು ಮತ್ತು ಅಭಿಮಾನಿಗಳಿಗೆ ಬೇಸರ ತಂದಿದೆ. ಆದರೆ ನಟ ಧನುಷ್ ಮಾತ್ರ ಒಂದೊಂದೇ ಸಿನಿಮಾ ಸುದ್ದಿಗಳನ್ನು ಹರಿ ಬಿಡುತ್ತಾ ಇದ್ದಾರೆ.
ಇದೀಗ ಧನುಷ್ ಮತ್ತೊಬ್ಬ ಸ್ಟಾರ್ ನಿರ್ದೇಶಕನ ಜೊತೆಗೆ ಕೈ ಜೋಡಿಸುತ್ತಿದ್ದಾರೆ. ಅದು ಮತ್ಯಾರೂ ಅಲ್ಲ, ಪುಷ್ಪ ಚಿತ್ರ ಮಾಡಿ ಗೆದ್ದಿರುವ ಸುಕುಮಾರ್. ಈ ಸುದ್ದಿ ಸಿನಿಮಾ ಪ್ರೇಮಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

ಸುಕುಮಾರ್ ಧನುಷ್ ಕಾಂಬಿನೇಶನ್‌ನಲ್ಲಿ ಸಿನಿಮಾ ಹೇಗಿರಲಿದೆ?
ಈ ಸುದ್ದಿ ಹೊರ ಬೀಳುತ್ತಿದ್ದ ಹಾಗೆ ಸಾಕಷ್ಟು ನಿರೀಕ್ಷೆಗಳು ಅದಾಗಲೇ ಹುಟ್ಟಿಕೊಂಡಿವೆ. ಸದ್ಯ ಸುಕುಮಾರ್ ಪುಷ್ಪ ಸಿನಿಮಾ ಮಾಡಿ ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದಾರೆ. ತಾನೊಬ್ಬ ಉತ್ತಮ ನಿರ್ದೇಶಕ ಎನ್ನುವುದನ್ನು ಪುಷ್ಪ ಸಿನಿಮಾದ ಮೂಲಕ ಮತ್ತೊಮ್ಮೆ ತೋರಿಸಿ ಕೊಟ್ಟಿದ್ದಾರೆ. ಹಾಗಾಗಿ ಅವರ ಮುಂದಿನ ಸಿನಿಮಾದ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿದೆ. ಅದರಲ್ಲೂ ಧನುಷ್‌ಗೆ ಸಿನಿಮಾ ಮಾಡುತ್ತಿದ್ದಾರೆ ಅಂದರೆ ಅಲ್ಲಿ ಹೊಸತನ, ವಿಶೇಷತೆಗೆ ಕೊರತೆ ಇರುವುದಿಲ್ಲ ಎನ್ನುವ ಭರವಸೆ ಇದೆ.

ಅಸುರನ್, ಕರ್ಣನ್ ಬಳಿಕ ಧನುಷ್ ಮೇಲೆ ಹೆಚ್ಚಿದ ನಿರೀಕ್ಷೆ!
ನಟ ಧನುಷ್ ನಾನಾ ವಿಧವಾದ ಕಥೆಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಅಸುರನ್ ಮತ್ತು ಕರ್ಣನ್ ಚಿತ್ರಗಳು ಬಂದ ಬಳಿಕ ಧನುಷ್ ಸಿನಿಮಾಗಳ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಜೊತೆಗೆ ಧನುಷ್ ಸಿನಿಮಾಗಳಿಂದ ಪ್ರೇಕ್ಷಕರು ವಿಶೇಷವಾದದನ್ನು ಅಪೇಕ್ಷೆ ಪಡುವಂತೆ ಆಗಿದೆ. ಹಾಗಾಗಿ ಧನುಷ್ ಸಿನಿಮಾಗಳನ್ನು ಎಚ್ಚರಿಕೆ ಇಂದ ಆಯ್ಕೆ ಮಾಡಿಕೊಳ್ಳವ ಅನಿವಾರ್ಯತೆ ಇದೆ. ಈಗ ಸುಕುಮಾರ್ ಕಥೆ ಇದೆ ಅಂದರೆ ಅದು ಸಹಜವಾಗಿಯೇ ನಿರೀಕ್ಷೆ ಹುಟ್ಟು ಹಾಕಿದೆ.

'ಸರ್' ಚಿತ್ರದ ಶೂಟಿಂಗ್‌ನಲ್ಲಿ ಧನುಷ್: ಸದ್ಯದಲ್ಲೇ ಸುಕುಮಾರ್ ಸಿನಿಮಾ ಶುರು!
ಸದ್ಯಕ್ಕೆ ನಟ ಧನುಷ್ 'ವಾತಿ' ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಈ ಚಿತ್ರಕ್ಕೆ ತೆಲುಗಿನಲ್ಲಿ 'ಸರ್' ಎಂದು ಹೆಸರಿಡಲಾಗಿದೆ. ಇನ್ನು ಅತ್ತ ಸುಕುಮಾರ್ ಅವರ ಸಿನಿಮಾಗೆ ಧನುಷ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇದೇ ವರ್ಷದಲ್ಲಿ ಧನುಷ್, ಸುಕುಮಾರ್ ಸಿನಿಮಾ ಸೆಟ್ಟೆರಲಿದೆಯಂತೆ. ಆ ಚಿತ್ರವೂ ಕೂಡ ತಮಿಳು ಮತ್ತು ತೆಲುಗು ಎರಡು ಭಾಷೆಗಳಲ್ಲಿ ನಿರ್ಮಾಣ ಆಗಿ ರಿಲೀಸ್ ಆಗಲಿದೆ. ಈ ಬಗ್ಗೆ ಸದ್ಯದಲ್ಲಿಯೇ ಮತ್ತಷ್ಟು ಮಾಹಿತಿ ನೀಡಲಿದೆ ಚಿತ್ರ ತಂಡ.

ವಿಚ್ಛೇದನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಧನುಷ್!
ಇನ್ನು ಧನುಷ್ ತಮ್ಮ ವಿಚ್ಛೇದನದ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ತಮ್ಮ ಸಿನಿಮಾ ಕೆಲಸಗಳನ್ನು ಆರಂಭಿಸಿದ್ದಾರೆ. ಜೊತೆಗೆ ಹೊಸ ಸಿನಿಮಾಗಳನ್ನು ಒಪ್ಪಿ ಪ್ರಕಟ ಮಾಡುತ್ತಿದ್ದಾರೆ. ಹಾಗಾಗಿ ಇವರ ವಿಚ್ಛೇದನಕ್ಕೆ ಸಿನಮಾಗಳು, ಧನುಷ್ ಕೆಲಸವೇ ಕಾರಣ ಎನ್ನುವಂತಾಗಿದೆ. ಅದು ಸತ್ಯ ಎನ್ನುವ ಚರ್ಚೆಗಳು ಕೂಡ ಆರಂಭ ಆಗಿವೆ.


Click it and Unblock the Notifications











