ಇದು ನೋಡಲೇ ಬೇಕಾದ ಸಿನಿಮಾ: ನಟ ಧನುಶ್ ಮೆಚ್ಚಿದ ಸಿನಿಮಾ ಇದು

ತಮಿಳು ಚಿತ್ರರಂಗದ ಧನುಶ್ ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರು. ಅವರ ಸಿನಿಮಾ ಆಯ್ಕೆಯ ಬಗ್ಗೆಯೇ ಗಂಟೆಗಟ್ಟಲೆ ಮಾತನಾಡಬಹುದು. ಬಹಳ ಭಿನ್ನ ಸಿನಿಮಾಗಳನ್ನು ಧನುಶ್ ಆಯ್ದುಕೊಳ್ಳುತ್ತಾರೆ ಮತ್ತು ಅವುಗಳಲ್ಲಿ ಗೆಲ್ಲುತ್ತಾರೆ ಸಹ.

ಸ್ಟಾರ್‌ಗಿರಿಯುಳ್ಳ ತಮ್ಮದೇ ಸಮಕಾಲೀನ ನಟರು ಒಪ್ಪಿಕೊಳ್ಳಲು ಹಿಂಜರಿಯುವ ಪಾತ್ರಗಳನ್ನು ಒಪ್ಪಿ ಲೀಲಾಜಾಲವಾಗಿ ನಟಿಸಿ ಗೆದ್ದಿದ್ದಾರೆ ಧನುಶ್. ಅದರಲ್ಲಿಯೂ ತುಳಿತಕ್ಕೊಳಗಾದವರ ಕತೆಗಳಿಗೆ, ಆ ರೀತಿಯ ಪಾತ್ರಗಳಿಗೆ ಧನುಶ್ ಆದ್ಯತೆ ನೀಡುತ್ತಾರೆ.

ಸ್ವತಃ ಸಿನಿಮಾ ನಿರ್ಮಾಪಕರೂ ಆಗಿರುವ ಧನುಶ್ ಒಳ್ಳೆಯ ಕತೆಗಳಿಗೆ ಬಂಡವಾಳ ಹೂಡಿದ್ದಾರೆ. ಇದೀಗ ಸಿನಿಮಾ ಒಂದನ್ನು ನೋಡಿದ ಧನುಶ್ ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ನಟ ಧನುಶ್ ಹಿಂದಿಯ 'ಝುಂಡ್' ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾದ ವಿಶೇಷ ಶೋ ನೋಡಿರುವ ಧನುಶ್ ಸಿನಿಮಾ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ತಪ್ಪದೇ ನೋಡಬೇಕಾದ ಸಿನಿಮಾ ಎಂದಿದ್ದಾರೆ ನಟ ಧನುಶ್.

ನಾಗರಾಜ್ ಮಂಜುಳೆಯ 'ಧ್ವನಿ'ಯನ್ನು ಕೇಳಬೇಕಿದೆ: ಧನುಶ್

ನಾಗರಾಜ್ ಮಂಜುಳೆಯ 'ಧ್ವನಿ'ಯನ್ನು ಕೇಳಬೇಕಿದೆ: ಧನುಶ್

''ಎಲ್ಲಿಂದ ಪ್ರಾರಂಭಿಸಲಿ ಎಂಬುದು ತೋಚುತ್ತಿಲ್ಲ. ಇದೊಂದು ಅತ್ಯದ್ಭುತವಾದ ಸಿನಿಮಾ. ನಿರ್ದೇಶಕ ನಾಗರಾಜ್ ಮಂಜುಳೆಯ 'ಧ್ವನಿ'ಯನ್ನು ನಾವೆಲ್ಲರೂ ಕೇಳಬೇಕಿದೆ. ಈ ಸಿನಿಮಾ ಏಕೆ ಚೆನ್ನಾಗಿದೆ, ಎಲ್ಲಿ ಚೆನ್ನಾಗಿದೆ ಎಂದು ನಾನು ಸಾವಿರ ತಾಂತ್ರಿಕ ಕಾರಣಗಳನ್ನು ನೀಡಬಲ್ಲೆ ಆದರೆ ಈ ಸಿನಿಮಾ ಭಾವುಕವಾಗಿ ನಿಮ್ಮನ್ನು ನಾಟುತ್ತದೆಯಲ್ಲ ಅಲ್ಲಿ ಬಹಳ ಮುಖ್ಯವಾದುದು'' ಎಂದಿದ್ದಾರೆ ಧನುಶ್.

ಇದೊಂದು ಮಾಸ್ಟರ್ ಪೀಸ್: ಧನುಶ್

ಇದೊಂದು ಮಾಸ್ಟರ್ ಪೀಸ್: ಧನುಶ್

''ಈ ಸಿನಿಮಾ ಒಂದು ಅನುಭವ, ಇದೊಂದು ಮಾಸ್ಟರ್‌ ಪೀಸ್. ಹಲವರು ತಿರುಗಿ ನೋಡುವಂತೆ ಈ ಸಿನಿಮಾ ಮಾಡಲಿದೆ. ಈ ಸಿನಿಮಾ ನೋಡಿರುವುದು ನನಗೆ ಬಹಳ ಸಂತೋಷ ತಂದಿದೆ. ಸಿನಿಮಾದಲ್ಲಿ ನಟಿಸಿರುವ ಮಕ್ಕಳ ನಟನೆ ಅದ್ಭುತ. ಸಿನಿಮಾದಲ್ಲಿ ನಟಿಸಿರುವ ಮಕ್ಕಳು ನನ್ನ ಹೃದಯ ಗೆದ್ದಿದ್ದಾರೆ. ನನಗೆ ಮಾತೇ ಹೊರಡುತ್ತಿಲ್ಲ. ಇದೊಂದು ಅತ್ಯದ್ಭುತ ಸಿನಿಮಾ ಎಂದಷ್ಟೆ ನಾನು ಹೇಳಬಲ್ಲೆ'' ಎಂದಿದ್ದಾರೆ ಧನುಶ್.

''ಅದ್ಭುತ ಸಿನಿಮಾವನ್ನು ನಾಗರಾಜ್ ಮಂಜುಳೆ ನೀಡಿದ್ದಾರೆ''

''ಅದ್ಭುತ ಸಿನಿಮಾವನ್ನು ನಾಗರಾಜ್ ಮಂಜುಳೆ ನೀಡಿದ್ದಾರೆ''

''ಅಮಿತ್ ಜೀ, ನಂಬಲಸಾಧ್ಯವಾದ ಅತ್ಯದ್ಭುತವಾದ ಕೆಲಸವನ್ನು ಈ ಸಿನಿಮಾದಲ್ಲಿ ಮಾಡಿದ್ದಾರೆ. ಇಡೀ ಚಿತ್ರರಂಗದ ಬಗ್ಗೆ ನನಗೆ ಖುಷಿ ಇದೆ. ಇಂಥಹಾ ಒಂದು ಅತ್ಯದ್ಭುತ ಸಿನಿಮಾ ಕೊಟ್ಟಿದ್ದಕ್ಕೆ ನಾಗರಾಜ್ ಮಂಜುಳೆಗೆ ನಾನು ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತೇನೆ. ಸಿನಿಮಾದ ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಸಂಗೀತ ನೀಡಿರುವ ಅತುಲ್-ಅಜಯ್, ನಿರ್ಮಾಪಕ ಭೂಷಣ್ ಕುಮಾರ್, ಸಿನಿಮಾದ ಎಲ್ಲ ನಟರು ಎಲ್ಲರಿಗೂ ಶುಭವಾಗಲಿ'' ಎಂದಿದ್ದಾರೆ ಧನುಶ್.

ಸಿನಿಮಾ ಮೆಚ್ಚಿದ ಅಮೀರ್ ಖಾನ್

ಸಿನಿಮಾ ಮೆಚ್ಚಿದ ಅಮೀರ್ ಖಾನ್

'ಝುಂಡ್' ಸಿನಿಮಾ ಬಗ್ಗೆ ಧನುಶ್ ಮಾತ್ರವಲ್ಲ ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಸಹ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ನನಗೆ ಏನು ಹೇಳಬೇಕೆಂಬುದು ಗೊತ್ತಾಗುತ್ತಿಲ್ಲ. ನೀವು ಭಾರತದ ಯುವಕ-ಯುವತಿಯರ ಭಾವನೆಗಳನ್ನು ಹಿಡಿದು ತೋರಿಸುವ ರೀತಿ ಅತ್ಯದ್ಭುತ. ಸಿನಿಮಾದಲ್ಲಿ ನಟಿಸಿರುವ ಆ ಮಕ್ಕಳಂತೂ ಅದ್ಭುತ. ಬಹಳ ಚೆನ್ನಾಗಿ ಅವರು ನಟಿಸಿದ್ದಾರೆ. ಎಂಥ ಅದ್ಭುತವಾದ ಸಿನಿಮಾ ಮಾಡಿಬಿಟ್ಟಿದ್ದೀಯ. ಇದೊಂದು ಅತ್ಯದ್ಭುತವಾದ ಸಿನಿಮಾ. ಅದು ಹೇಗೆ ಈ ಸಿನಿಮಾ ಆಗಿದೆಯೋ ಗೊತ್ತಿಲ್ಲ ಸಿನಿಮಾದಲ್ಲಿ ಹಿಡಿದಿರುವ ಸ್ಪೂರ್ತಿಯಂತೂ ಅತ್ಯದ್ಭುತ. ಸಿನಿಮಾ ನೋಡುವ ನಾನು ಅದೇ ಸ್ಪೂರ್ತಿಯೊಂದಿಗೆ ಏಳುತ್ತೇನೆ'' ಎಂದು ನಿರ್ದೇಶಕ ನಾಗರಾಜ್ ಮಂಜುಳೆಯನ್ನು ಹೊಗಳಿದ್ದಾರೆ ಅಮೀರ್ ಖಾನ್. ಸಿನಿಮಾ ನೋಡಿದ ಬಳಿಕ ಇಡೀ ತಂಡವನ್ನು ತಮ್ಮ ನಿವಾಸಕ್ಕೆ ಕರೆದುಕೊಂಡು ಹೋಗಿ ಆತಿಥ್ಯ ನೀಡಿದ್ದಾರೆ ಅಮೀರ್. 'ಝುಂಡ್' ಸಿನಿಮಾವು ಮಾರ್ಚ್ 04 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.

More from Filmibeat

English summary
Actor Dhanush Praised Amitabh Bachchan starer, Nagaraj Manjule directed movie Jhund. Movie is releasing on March 04.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X