For Quick Alerts
  ALLOW NOTIFICATIONS  
  For Daily Alerts

  ಅಬ್ಬಾ..! ತನ್ನ ಕನಸಿನ ಅರಮನೆ ನಿರ್ಮಾಣಕ್ಕೆ ಧನುಷ್ ಇಷ್ಟೊಂದು ಕೋಟಿ ಖರ್ಚು ಮಾಡುತ್ತಿದ್ದಾರಾ?

  |

  ತಮಿಳಿನ ಸ್ಟಾರ್ ನಟ ಧನುಷ್ ಹಲವು ಕಾರಣಗಳಿಗೆ ಸುದ್ದಿಯಲ್ಲಿರುತ್ತಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಧನುಷ್ ತಮಿಳು ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಬಹುಬೇಡಿಕೆ ಹೊಂದಿರುವ ಸ್ಟಾರ್. ತಮಿಳು, ಬಾಲಿವುಡ್ ಮತ್ತು ಹಾಲಿವುಡ್‌ಗಳಲ್ಲಿ ಬ್ಯುಸಿ ಇರುವ ಧನುಷ್ ಇತ್ತೀಚಿಗೆ ಸಂಭಾವನೆ ಹೆಚ್ಚಿಸಿಕೊಂಡಿರುವ ವಿಚಾರಕ್ಕೆ ಸುದ್ದಿಯಾಗಿದ್ದರು.

  ಇದೀಗ ಧನುಷ್ ತನ್ನ ಕನಸಿನ ಅರಮನೆ ನಿರ್ಮಾಣ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಧನುಷ್ ಹೊಸ ಮನೆ ನಿರ್ಮಾಣಕ್ಕೆ ಬರೋಬ್ಬರಿ 150 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ ಎನ್ನವ ಸುದ್ದಿ ಹಲವು ಕಡೆ ವರದಿಯಾಗಿದೆ. ಅಂದಹಾಗೆ ಹೊಸ ಮನೆ ನಿರ್ಮಾಣಕ್ಕೆ ಫೆಬ್ರವರಿಯಲ್ಲಿ ಭೂಮಿ ಪೂಜೆ ನಡೆಸಿದ್ದರು. ಈ ಪೂಜೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ದಂಪತಿ ಕೂಡ ಭಾಗಿಯಾಗಿದ್ದರು.

  ಧನುಷ್ ನಿರ್ಮಾಣ ಮಾಡುತ್ತಿರುವ ಮನೆ ಸುಮಾರು 19ಸಾವಿರ ಚದರ ಅಡಿ ಇರಲಿದೆಯಂತೆ. 150 ಕೋಟಿ ರೂ.ನಲ್ಲಿ ತಯಾರಾಗುತ್ತಿರುವ ಈ ಐಷಾರಾಮಿ ಬಂಗಲೆ 4 ಮಹಡಿ ಹೊಂದಿರಲಿದೆ. ಅಂದಹಾಗೆ ಧನುಷ್ ಅವರ ಈ ಕನಸಿನ ಮನೆ ಚೆನ್ನೈನ ಪೋಯಿಸ್ ಗಾರ್ಡನ್‌ನಲ್ಲಿ ನಿರ್ಮಾಣ ಆಗುತ್ತಿದೆ.

  ತಮಿಳಿನ ಹಲವು ಜನಪ್ರಿಯ ಕಲಾವಿದರ ಮನೆ ಇರುವುದು ಇದೇ ಪೋಯಿಸ್ ಗಾರ್ಡನ್‌ನಲ್ಲಿ. ಸೂಪರ್ ಸ್ಟಾರ್ ರಜನಿಕಾಂತ್ ಮನೆ ಇರುವುದು ಸಹ ಪೋಯಿಸ್ ಗಾರ್ಡನ್‌ನಲ್ಲಿ. ಇದೀಗ ಧುನುಷ್ ಮನೆ ಕೂಡ ಅಲ್ಲೇ ನಿರ್ಮಾಣವಾಗುತ್ತಿದ್ದು, ಕನಸಿನ ಅರಮನೆಗಾಗಿ ಧನುಷ್ ಕಾತರರಾಗಿದ್ದಾರೆ.

  ರೇವತಿ ಗರ್ಭಿಣಿಯಾಗಿರೋ ವಿಚಾರ ತಿಳಿದ ರಾಧಿಕಾ ಕುಮಾರಸ್ವಾಮಿ ಏನ್ ಮಾಡಿದ್ರು ನೋಡಿ | Filmibeat Kannada

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಧನುಷ್ ಸದ್ಯ ನೆಟ್ ಫ್ಲಿಕ್ಸ್ ಚಿತ್ರ 'ದಿ ಗ್ರೇ ಮ್ಯಾನ್' ಚಿತ್ರೀಕರಣಕ್ಕೆಂದು ಯು ಎಸ್ ನಲ್ಲಿದ್ದಾರೆ. ಈ ಸಿನಿಮಾ ಬಳಿಕ ಧನುಷ್ ನಿರ್ಮಾಪಕ ಕಾರ್ತಿಕ್ ನರೇನ್ ಅವರೊಂದಿಗೆ ಹೊಸ ಸಿನಿಮಾ ಪ್ರಾರಂಭ ಮಾಡಲಿದ್ದಾರೆ. ಜೊತೆಗೆ ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಜೊತೆ ಸಿನಿಮಾಗೆ ಸಹಿ ಮಾಡಿದ್ದಾರೆ. ಈ ಸಿನಿಮಾಗೆ ಧನುಷ್ ಬರೋಬ್ಬರಿ 50 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎನ್ನುವ ಮತು ಕೇಳಿಬರುತ್ತಿದೆ. ಬಾಲಿವುಡ್ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Tamil Actor Dhanush to spend Rs.150 crore for his new house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X