ಪತ್ನಿಗೆ ಡಿವೋರ್ಸ್ ಕೊಟ್ಟು ಗಾಯಕಿ ಜೊತೆ ಕೈಕೈ ಹಿಡಿದು ಜಯಂ ರವಿ ಸುತ್ತಾಟ!
ಇತ್ತೀಚಿನ ವರ್ಷಗಳಲ್ಲಿ ಎಷ್ಟು ಬೇಗ ಪ್ರೀತಿ ಹುಟ್ಟುತ್ತದೋ, ಮದುವೆ ನಡೆಯುತ್ತದೋ ಅಷ್ಟೇ ಬೇಗ ಭಿನ್ನಾಭಿಪ್ರಾಯ ಮೂಡಿ ದೂರಾಗುತ್ತಿದ್ದಾರೆ. ಡಿವೋರ್ಸ್ ಸಂಖ್ಯೆ ಹೆಚ್ಚುತ್ತಿದೆ. ಸಣ್ಣಪುಟ್ಟ ಕಾರಣಗಳಿಗೆ ಗಂಡ-ಹೆಂಡತಿ ದೂರಾಗುತ್ತಿದ್ದಾರೆ. ಆದರೆ ಹೀಗೆ ದೂರಾದವರು ಮತ್ತೊಬ್ಬರ ಜೊತೆ ಮತ್ತೆ ಪ್ರೀತಿ ಬೀಳುತ್ತಿದ್ದಾರೆ.
ಸಿನಿಮಾ ಸೆಲೆಬ್ರೆಟಿಗಳ ಡಿವೋರ್ಸ್, ರಿಲೇಷನ್‌ಶಿಪ್ ಬಹಳ ದೊಡ್ಡದಾಗಿ ಸದ್ದು ಮಾಡುತ್ತದೆ. ಕಳೆದ ವರ್ಷ ತಮಿಳು ನಟ ಜಯಂ ರವಿ ಪತ್ನಿಯಿಂದ ಡಿವೋರ್ಸ್ ಕೇಳಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಇದಕ್ಕೆ ಪತ್ನಿ ಆರತಿ ಒಪ್ಪಲಿಲ್ಲ. ಇದರ ಬೆನ್ನಲ್ಲೇ ಗಾಯಕಿ ಕೆನಿಶಾ ಫ್ರಾನ್ಸಿಸ್ ಎಂಬಾಕೆ ಜೊತೆ ರವಿ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು.

ವದಂತಿಗಳ ಬಗ್ಗೆ ಜಯಂ ರವಿ ಪ್ರತಿಕ್ರಿಯಿಸಿ ಆಕೆ ನನ್ನ ಸ್ನೇಹಿತೆ. ಸುಖಾಸುಮ್ಮನೆ ಏನೇನೋ ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದರು. ಆದರೆ ಇದೀಗ ಅದೇ ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆ ಕೈಕೈ ಹಿಡಿದು ಜಯಂ ರವಿ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ವದಂತಿಗಳೆಲ್ಲಾ ನಿಜ, ಇಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದಾರೆ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ.
ತಮಿಳು ಚಿತ್ರ ನಿರ್ಮಾಪಕ ಇಶಾರಿ ಗಣೇಶ್ ಅವರ ಪುತ್ರಿಯ ಮದುವೆ ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಸಾಕಷ್ಟು ತಮಿಳು ಸಿನಿಮಾ ತಾರೆಯರು ಸಾಕ್ಷಿ ಆಗಿದ್ದರು. ಜಯಂ ರವಿ ಶರ್ಟ್, ಪಂಚೆ ಉಟ್ಟು ಬಂದಿದ್ದರೆ ಅದೇ ಬಣ್ಣದ ಸೀರೆ ಉಟ್ಟು ಗಾಯಕಿ ಕೆನಿಶಾ ಬಂದಿದ್ದರು. ಇಬ್ಬರೂ ಒಟ್ಟಿಗೆ ಅಕ್ಕಪಕ್ಕ ಮದುವೆ ಮಂಟಪದ ಮುಂಭಾಗದಲ್ಲಿ ಆಸೀನರಾಗಿದ್ದರು. ಬಳಿಕ ಕೈಕೈ ಹಿಡಿದು ಓಡಾಡಿರುವ ಫೋಟೊ, ವೀಡಿಯೋ ವೈರಲ್ ಆಗ್ತಿದೆ.
18 ವರ್ಷಗಳ ಹಿಂದೆ ಮದುವೆ ಆಗಿದ್ದ ಜಯಂ ರವಿ ಹಾಗೂ ಆರ್ತಿ 6 ತಿಂಗಳ ಹಿಂದೆ ದೂರಾಗುವ ನಿರ್ಧಾರಕ್ಕೆ ಬಂದಿದ್ದರು. ರವಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿ ಆರ್ತಿ ಕೂಡ ಸುದೀರ್ಘ ಪತ್ರ ಬರೆದಿದ್ದರು. ರವಿ ಏಕಪಕ್ಷೀಯವಾಗಿ ಡಿವೋರ್ಸ್ ಘೋಷಣೆ ಮಾಡಿದ್ದಾರೆ. ನನಗೆ ಒಪ್ಪಿಗೆ ಇಲ್ಲ ಎನ್ನುವ ಅರ್ಥದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಬಳಿಕ ಇಬ್ಬರೂ ಕೋರ್ಟ್ ವಿಚಾರಣೆಯಲ್ಲಿ ಭಾಗಿ ಆಗಿದ್ದರು. ಇನ್ನು ಇಬ್ಬರೂ ಮಕ್ಕಳ ಪಾಲನೆ ಜವಾಬ್ದಾರಿಯನ್ನು ರವಿ ಕೇಳಿದ್ದಾರೆ.
ಅಧಿಕೃತವಾಗಿ ರವಿ ಹಾಗೂ ಅರ್ತಿ ದಂಪತಿಗೆ ನ್ಯಾಯಾಲಯದಿಂದ ಡಿವೋರ್ಸ್ ಸಿಕ್ಕಿಲ್ಲ. ಅಷ್ಟರಲ್ಲೇ ರವಿ, ಗಾಯಕಿ ಕೆನಿಶಾ ಜೊತೆ ಸಾರ್ವಜನಿಕವಾಗಿ ಓಡಾಡುತ್ತಿರುವುದು ಕೆಲವರಿಗೆ ಅಚ್ಚರಿ ಮೂಡಿಸಿದೆ. ಇನ್ನು ರವಿ ಡಿವೋರ್ಸ್ ನಿರ್ಧಾರದ ಬಗ್ಗೆ ನಟಿ ಖುಷ್ಬು ಪರೋಕ್ಷವಾಗಿ ಟಾಂಗ್ ನೀಡಿದ್ದರು. ಇನ್ನು ಪತ್ನಿ ವಿರುದ್ಧ ನಟ ಜಯಂ ರವಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. "ಪತ್ನಿ ನನ್ನನ್ನು ಮನೆಯಿಂದ ಹೊರ ಹಾಕಿದ್ದಾಳೆ, ಚೆನ್ನೈನ ಇಸಿಆರ್ ರಸ್ತೆಯ ಮನೆಯಲ್ಲಿದ್ದ ವಸ್ತುಗಳನ್ನು ವಾಪಸ್ ಕೊಡಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದರು.
ತಮಿಳಿನ ಕೆಲ ಹಿಟ್ ಸಿನಿಮಾಗಳಲ್ಲಿ ರವಿ ನಟಿಸಿದ್ದಾರೆ. ತಂದೆ ಎಡಿಟರ್ ಮೋಹನ್ ಹಾಗೂ ಸಹೋದರ ಮೋಹನ್ ರಾಜಾ ಚಿತ್ರರಂಗದಲ್ಲಿ ಇದ್ದರು. ಹಾಗಾಗಿ ಅವರಿಗೆ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. 2003ರಲ್ಲಿ ತೆಲುಗಿನ 'ಜಯಂ' ರೀಮೆಕ್‌ನಲ್ಲಿ ನಟಿಸಿದ್ದರು. ಅಂದಿನಿಂದ ಅವರ ಹೆಸರಿನ ಜೊತೆ 'ಜಯಂ' ಸೇರಿಕೊಂಡಿತ್ತು. 'ಪೇರಣ್ಮೈ', 'ತನಿ ಒರುವನ್', 'ಪೊನ್ನಿಯಿನ್ ಸೆಲ್ವನ್' ಸೇರಿ ಕೆಲ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.


Click it and Unblock the Notifications











