For Quick Alerts
  ALLOW NOTIFICATIONS  
  For Daily Alerts

  ಕೊರೊನಾದಿಂದ ಗುಣಮುಖರಾದ ಕಮಲ್‌ಗೆ ಐಸೋಲೇಷನ್

  |

  ನಟ, ರಾಜಕಾರಣಿ ಕಮಲ್ ಹಾಸನ್‌ಗೆ ಕೆಲವು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಆಗಿತ್ತು. ಲಸಿಕೆ ತೆಗೆದುಕೊಂಡಿದ್ದರೂ ಕಮಲ್ ಹಾಸನ್‌ಗೆ ಕೋವಿಡ್‌ ಆಗಿದ್ದು ಆತಂಕಕ್ಕೆ ಕಾರಣವಾಗಿತ್ತು.

  ಕೋವಿಡ್ ಪಾಸಿಟಿವ್ ಆಗಿದ್ದ ಕಮಲ್ ಹಾಸನ್ ಅವರನ್ನು ನವೆಂಬರ್ 22ರಂದು ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು.

  ಆಸ್ಪತ್ರೆಗೆ ದಾಖಲಾಗಿದ್ದಾಗಿನಿಂದಲೂ ಕಮಲ್ ಹಾಸನ್ ಆರೋಗ್ಯ ಸ್ಥಿತಿ ಸ್ಥಿರವಾಗಿಯೇ ಇತ್ತು. ಕೊನೆಗೆ ಇಂದು ಕಮಲ್ ಹಾಸನ್ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾರೆ. ಅವರಿಗೆ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಹಾಗಿದ್ದೂ ಕೆಲವು ದಿನ ಅವರು ಐಸೋಲೇಷನ್‌ನಲ್ಲಿರಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹಾಗೂ ಕಮಲ್‌ಗೆ ವಿಶ್ರಾಂತಿಯ ಅಗತ್ಯವಿದೆ ಎಂದೂ ಸಹ ವೈದ್ಯರು ಹೇಳಿದ್ದಾರೆ. ಕಮಲ್ ಹಾಸನ್ ಡಿಸೆಂಬರ್ 04ರ ವರೆಗೆ ಐಸೋಲೇಶನ್‌ನಲ್ಲಿ ಇರಬೇಕಿದೆ.

  ಕಮಲ್ ಹಾಸನ್ ತಮ್ಮ ಖಾದಿ ಬ್ರ್ಯಾಂಡ್ 'ಹೌಸ್ ಆಫ್ ಖದ್ದರ್‌'ನ ಮಳಿಗೆ ಉದ್ಘಾಟನೆಗೆಂದು ಅಮೆರಿಕಕ್ಕೆ ತೆರಳಿದ್ದರು, ಅಲ್ಲಿಂದ ಮರಳಿ ಬಂದ ಮೇಲೆ ಕಮಲ್‌ಗೆ ಕೊರೊನಾ ಲಕ್ಷಣಗಳಾದ, ನೆಗಡಿ, ಕೆಮ್ಮು ಕಾಣಿಸಿಕೊಂಡಿತ್ತು ಹಾಗಾಗಿ ಪರೀಕ್ಷೆಗೆ ಒಳಗಾಗಿದ್ದರು ಆಗ ಅವರಿಗೆ ಕೊರೊನಾ ಇರುವುದು ಗೊತ್ತಾಗಿತ್ತು.

  ಕಮಲ್ ಹಾಸನ್ ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದರು. ಅದಾಗ್ಯೂ ಅವರಿಗೆ ಕೊರೊನಾ ಆಗಿತ್ತು. ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆ, ''ಲಸಿಕೆ ಪಡೆದುಕೊಂಡವರಿಗೂ ಕೊರೊನಾ ಬರಬಹುದು ಆದರೆ ಅದರಿಂದ ಅವರಿಗೆ ಗಂಭೀರ ಸಮಸ್ಯೆ ಆಗುವುದಿಲ್ಲ. ಕಮಲ್‌ಗೆ ಸಹ ಕೊರೊನಾದಿಂದ ಗಂಭೀರ ಸಮಸ್ಯೆ ಆಗುವುದಿಲ್ಲ'' ಎಂದು ಹೇಳಿದ್ದರು.

  ಕಮಲ್‌ಗೆ ಕೊರೊನಾ ನೆಗೆಟಿವ್ ಬಂದಿದೆ ಆದರೂ ಡಿಸೆಂಬರ್ 04ರವರೆಗೆ ಅವರು ಐಸೋಲೇಷನ್‌ನಲ್ಲಿ ಇರಬೇಕಾಗಿದೆ. ಹಾಗಾಗಿ ಅವರು ತಮಿಳು ಬಿಗ್‌ಬಾಸ್‌ನ ವೀಕೆಂಡ್ ಸೀಸನ್ ನಡೆಸಲು ಸಾಧ್ಯವಾಗುವುದಿಲ್ಲ. ಅವರ ಬದಲಿಗೆ ಕಮಲ್‌ರ ಮಗಳು ಶ್ರುತಿ ಹಾಸನ್ ನಿರೂಪಣೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಆ ಸುದ್ದಿ ಸುಳ್ಳಾಗಿ ಕಮಲ್‌ ಬದಲಿಗೆ ಅವರ ಸಹೋದ್ಯೋಗಿ ನಟಿ ರಮ್ಯಾ ಕೃಷ್ಣ ಶೋ ನಿರೂಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

  ಕಮಲ್ ಹಾಸನ್‌ 'ವಿಕ್ರಂ' ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕಮಲ್‌ ಜೊತೆಗೆ ನಟ ವಿಜಯ್ ಸೇತುಪತಿ ಹಾಗೂ ಮಲಯಾಳಂನ ಫಹಾದ್ ಫಾಸಿಲ್ ಸಹ ನಟಿಸಲಿದ್ದಾರೆ. 'ವಿಕ್ರಂ' ಜೊತೆಗೆ 'ಇಂಡಿಯನ್ 2' ಸಿನಿಮಾದಲ್ಲಿಯೂ ಕಮಲ್ ತೊಡಗಿಕೊಂಡಿದ್ದು ಈ ಸಿನಿಮಾವನ್ನು ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. 'ದೃಶ್ಯಂ 2' ಸಿನಿಮಾದ ರೀಮೇಕ್ 'ಪಾಪನಾಸಂ 2' ಸಿನಿಮಾದಲ್ಲಿಯೂ ಕಮಲ್ ನಟಿಸಲಿದ್ದಾರೆ. 'ತೇವರ್ ಮಗನ್ 2' ಸಿನಿಮಾದಲ್ಲಿಯೂ ನಟಿಸಲು ಸಜ್ಜಾಗಿದ್ದಾರೆ. ಈ ಸಿನಿಮಾವನ್ನು ಮಹೇಶ್ ನಾರಾಯಣ್ ನಿರ್ದೇಶನ ಮಾಡಲಿದ್ದಾರೆ. ಇದರ ನಡುವೆ ಫಹಾದ್ ಫಾಸಿಲ್, ವಿಜಯ್ ಸೇತುಪತಿ ನಟಿಸಲಿರುವ ಸಿನಿಮಾಕ್ಕೆ ಕತೆಯೊಂದನ್ನು ಸಹ ಕಮಲ್ ಹಾಸನ್ ಬರೆದಿದ್ದಾರೆ. ನಿರ್ದೇಶಕರೂ ಆಗಿರುವ ಕಮಲ್ ಹಾಸನ್, 'ತಲೈವಾನ್ ಇರುಕ್ಕಿಂಡ್ರನ್' ಹೆಸರಿನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.

  English summary
  Actor Kamal Haasan has recovered from COVID 19. He discharged from hospital but doctor suggested him to be in isolation till December 04.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X