WWE ಸ್ಪೆಕ್ಟಾಕಲ್: ಹಾಲಿವುಡ್ ನಟ ಜಾನ್ ಸೆನಾರನ್ನು ಭೇಟಿಯಾದ ತಮಿಳು ನಟ ಕಾರ್ತಿ

ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್(WWE) ಸೂಪರ್ ಸ್ಪೆಕ್ಟಾಕಲ್ ಹಣಾಹಣಿ ಭಾರತದಲ್ಲಿ ಆರು ವರ್ಷಗಳ ಬಳಿಕ ನಡೆಯುತ್ತಿದೆ. ಇದೇ ಕಾರಣಕ್ಕೆ ಹಾಲಿವುಡ್ ನಟ, WWE ಸೂಪರ್‌ಸ್ಟಾರ್ ಜಾನ್ ಸೆನಾ 17 ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿದ್ದು, ಹೈದರಾಬಾದ್‌ನಲ್ಲಿದ್ದಾರೆ.

ಅವರು ಹೈದರಾಬಾದ್‌ನಲ್ಲಿ ಇರುವ ಕಾರಣ ನಟ ಕಾರ್ತಿ WWE ಸೂಪರ್‌ಸ್ಟಾರ್ ಜಾನ್ ಸೆನಾ ಅವರನ್ನು ಭೇಟಿಯಾಗಿದ್ದಾರೆ. ಶುಕ್ರವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭೇಟಿಯ ಫೋಟೋ ಹಂಚಿಕೊಂಡಿರುವ ಅವರು, ಜಾನ್ ಸೆನಾ ಅವರನ್ನು ಭಾರತಕ್ಕೆ ಸ್ವಾಗತಿಸಿದ್ದಾರೆ.

actor-karthi-meets-john-cena

ಹಾಲಿವುಡ್ ನಟ, ಸೂಪರ್‌ಸ್ಟಾರ್ ಜಾನ್ ಸೆನಾ ಬಿಳಿ ಟಿ-ಶರ್ಟ್ ಮತ್ತು ಕಪ್ಪು ಕ್ಯಾಪ್ ಧರಿಸಿದ್ದರೆ, ಕಾರ್ತಿ ಕಪ್ಪು ಟಿ-ಶರ್ಟ್ ಮತ್ತು ಕಪ್ಪು WWE ಜರ್ಸಿಯನ್ನು ಧರಿಸಿದ್ದರು. ಜಾನ್‌ ಸೆನಾ ಅವರನ್ನು ಭೇಟಿಯಾಗಿದಕ್ಕೆ ಸಂತೋಷ ವ್ಯಕ್ತಪಡಿಸಿರುವ ಅವರು, ಈ ಸಮಯಕ್ಕಾಗಿ ಧನ್ಯವಾದ ಹೇಳಿದ್ದಾರೆ. ಭೇಟಿಯಾದ ಕೆಲವೇ ಕೆಲವು ನಿಮಿಷಗಳಲ್ಲಿ ಪ್ರತಿಯೊಬ್ಬರನ್ನು ಹೀಗೆ ವಿಶೇಷ ವ್ಯಕ್ತಿಯಾಗಿಸವ ಅವರ ನಡವಳಿಕೆ ಅದ್ಭುತ ಎಂದು ಕಾರ್ತಿ ಬರೆದುಕೊಂಡಿದ್ದಾರೆ.

ಕಾರ್ತಿ ಫೋಟೋಗೆ ಅಭಿಮಾನಿಗಳ ಕಾಮೆಂಟ್

ಇಬ್ಬರೂ ಸೂಪರ್‌ಸ್ಟಾರ್‌ಗಳ ಭೇಟಿಗೆ ಹಲವಾರು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಹಲವು ಮಂದಿ ಕಾರ್ತಿ ಅವರ ಕಾಲೆಳೆದಿದ್ದಾರೆ. ಒಬ್ಬರೇ ಏಕೆ ನಿಂತಿದ್ದಿರಿ?? ಒಬ್ಬರೇ ಗಾಳಿಯಲ್ಲಿ ಹ್ಯಾಂಡ್ ಶೇಕ್ ಮಾಡುತ್ತಿರುವುದೇಕೆ... ನಮಗೆ ಅಲ್ಲಿ ಯಾರು ಕಾಣಿಸುತ್ತಿಲ್ಲ. ಒಬ್ಬರೇ ನಿಂತು ಫೋಸ್ ಯಾಕೆ ನೀಡುತ್ತಿದ್ದಿರಿ ಎಂದು ತರಲೆ ಕಾಮೆಂಟ್ ಮಾಡಿದ್ದಾರೆ.

ಭಾರತ ಮತ್ತು ಜಾನ್ ಸೆನಾ

ಜಾನ್ ಸೆನಾ ಕಳೆದ ತಿಂಗಳು ಯಾವುದೇ ಶೀರ್ಷಿಕೆಯಿಲ್ಲದ ತಮ್ಮ Instagram ನಲ್ಲಿ ತ್ರಿವರ್ಣ ಧ್ವಜದ ಚಿತ್ರವನ್ನು ಹಂಚಿಕೊಂಡು ಸುದ್ದಿಯಾಗಿದ್ದರು. ಅವರ ಈ ಪೋಸ್ಟ್ ವೇಳೆ ದೇಶ ಚಂದ್ರಯಾನ-3 ರ ಸಾಧನೆ ಮಾಡಿತ್ತು. ಹೀಗಾಗಿ ಅವರು ಚಂದ್ರಯಾನ-3 ರ ಭಾರತದ ಐತಿಹಾಸಿಕ ಸಾಧನೆಗೆ ಗೌರವ ಸಲ್ಲಿಸುತ್ತಿದ್ದಾರೆಯೇ ಎಂದು ಅನೇಕ ಬಳಕೆದಾರರು ಆಶ್ಚರ್ಯ ಪಟ್ಟಿದ್ದರು.

ಆದರೆ, ಹಲವರು ಸೆಪ್ಟೆಂಬರ್ 8 ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಅವರ WWE ಸ್ಪೆಕ್ಟಾಕಲ್ ಅನ್ನು ಪ್ರಚಾರ ಮಾಡಲು ಹೀಗೆ ಹಾಕಿಕೊಂಡಿದ್ದಾರೆ ಎಂದು ಊಹಿಸಿದ್ದರು. ಅಷ್ಟಕ್ಕೂ ಜಾನ್ ಸೆನಾ ಭಾರತಕ್ಕೆ ಭೇಟಿ ನೀಡಿ 17 ವರ್ಷಗಳಾಗಿದ್ದವು. ಈಗ ಮತ್ತೆ ದೇಶಕ್ಕೆ ಕಾಲಿಟ್ಟಿದ್ದಾರೆ.

ಜಾನ್ ಸೆನಾ ಮತ್ತು ಕಾರ್ತಿ

ಜಾನ್ ಸೆನಾ WWE ಸೂಪರ್‌ಸ್ಟಾರ್ ಅಲ್ಲದೇ ಹಾಲಿವುಡ್ ನಟ ಕೂಡ. ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರು ಫಾಸ್ಟ್ ಅಂಡ್ ಫ್ಯೂರಿಯಸ್ ಫ್ರ್ಯಾಂಚೈಸ್‌ನ ಹತ್ತನೇ ಭಾಗ ಫಾಸ್ಟ್ ಎಕ್ಸ್‌ನಲ್ಲಿ ಜಾನ್ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ನಟ ಕಾರ್ತಿ ಕೊನೆಯದಾಗಿ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಮಣಿರತ್ನಂ ಅವರ ಐತಿಹಾಸಿಕ ಸಿನಿಮಾ ಪೊನ್ನಿಯಿನ್ ಸೆಲ್ವನ್: ಭಾಗ ಎರಡರಲ್ಲಿ ಕಾಣಿಸಿಕೊಂಡಿದ್ದರು.

ಹೈದರಾಬಾದ್‌ನಲ್ಲಿ ಜಿಎಂಸಿ ಬಾಲಯೋಗಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ WWE ಸ್ಪೆಕ್ಟಾಲ್‌ಗೆ ಜಾನ್ ಸೆನಾ ಜೊತೆಗೆ WWE ಸೂಪರ್‌ಸ್ಟಾರ್‌ಗಳಾದ ಸೇಥ್ ಫ್ರೀಕಿನ್ ರೋಲಿನ್ಸ್, ಕೆವಿನ್ ಓವೆನ್ಸ್, ಸಾಮಿ ಜಯಾನ್, ಜಿಂದರ್ ಮಹಲ್, ನಟಾಲಿಯಾ, ಡ್ರೂ ಮ್ಯಾಕ್‌ಇಂಟೈರ್ ಮತ್ತು 'ದಿ ರಿಂಗ್' ಜನರಲ್ ಗಂಥರ್ ಸೇರಿ ಹಲವು ಘಟಾನುಘಟಿಗಳು ಭಾಗವಹಿಸಲಿದ್ದಾರೆ. ನೇರವಾಗಿ ನೋಡಲು ಸಾಧ್ಯವಾಗದೆ ಇರುವರು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್, ಸೋನಿ ಲಿವ್ ಹಾಗೂ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.

More from Filmibeat

English summary
Actor Karthi meets John Cena ahead of WWE Spectacle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X