ಸೂರ್ಯ ಫಸ್ಟ್ ಕ್ರಶ್ ಬಗ್ಗೆ ಸಹೋದರ ಕಾರ್ತಿ ಮಾತು; ಬಾಲಯ್ಯ ಒಗ್ಗರಣೆ

ತಮಿಳು ಚಿತ್ರರಂಗದಲ್ಲಿ ಸೂರ್ಯ ಹಾಗೂ ಕಾರ್ತಿ ಸಹೋದರರು ತಮ್ಮ ನಟನೆ ಮೂಲಕ ಮೋಡಿ ಮಾಡುತ್ತಾ ಬರ್ತಿದ್ದಾರೆ. ಒಬ್ಬರಿಗಿಂದ ಒಬ್ಬರು ಅತ್ಯತ್ತಮ ಕಲಾವಿದರು. ಕಾರ್ತಿ ನಟನೆಯ 'ಮೇಯಳಗನ್' ಸದ್ಯ ಓಟಿಟಿಯಲ್ಲಿ ಸದ್ದು ಮಾಡ್ತಿದೆ. ಮತ್ತೊಂದು ಕಡೆ ಸೂರ್ಯ ನಟನೆಯ 'ಕಂಗುವ' ಬಿಡುಗಡೆಗೆ ಸಜ್ಜಾಗಿದೆ.

'ಕಂಗುವ' ಸಿನಿಮಾ ಪ್ರಮೋಷನ್ ಜೋರಾಗಿದೆ. ತೆಲುಗಿನ 'ಅನ್‌ಸ್ಟಾಪಬಲ್' ಟಾಕ್‌ ಶೋನಲ್ಲಿ ನಟ ಸೂರ್ಯ ಭಾಗಿ ಆಗಿದ್ದರು. ಅಹಾ ಓಟಿಟಿಗಾಗಿ ನಟ ಬಾಲಕೃಷ್ಣ ನಡೆಸಿಕೊಡುವ ಕಾರ್ಯಕ್ರಮ ಇದು. ತಮ್ಮದೇ ಶೈಲಿಯಲ್ಲಿ ಬಹಳ ರಸವತ್ತಾಗಿ ಬಾಲಯ್ಯ ಶೋ ನಿರೂಪಣೆ ಮಾಡುತ್ತಾರೆ. ಸಿಕ್ಕಾಪಟ್ಟೆ ಫನ್ ಕೂಡ ಇರುತ್ತದೆ. ಅತಿಥಿಯಾಗಿ ಬರುವವರ ವೈಯಕ್ತಿಕ ಜೀವನದ ಇಂಟ್ರೆಸ್ಟಿಂಗ್ ಸಂಗತಿಗಳನ್ನು ರಿವೀಲ್ ಮಾಡುತ್ತಾರೆ.

Actor Karthi reveled brother Suriya s celebrity crush in Unstoppable show

ಸದ್ಯ ಶೋನಲ್ಲಿ ಸೂರ್ಯ ಇದ್ದಾಗಲೇ ಸಹೋದರ ಕಾರ್ತಿ ಜೊತೆ ಫೋನ್ ಮಾಡಿ ಬಾಲಕೃಷ್ಣ ಮಾತನಾಡಿದ್ದಾರೆ. ಈ ವೇಳೆ ಅಣ್ಣನ ಬಗ್ಗೆ ಒಂದಷ್ಟು ವಿಚಾರಗಳನ್ನು ಕೇಳಿ ವೀಕ್ಷಕರ ಮುಂದೆ ಅನಾವರಣ ಮಾಡಿದ್ದಾರೆ. ಅದರಲ್ಲೂ ಸೂರ್ಯ ಸೆಲೆಬ್ರೆಟಿ ಕ್ರಶ್ ಬಗ್ಗೆ ಕಾರ್ತಿ ಹೇಳಿರುವುದು, ಅದಕ್ಕೆ ಇಬ್ಬರ ರಿಯಾಕ್ಷನ್ ಸಖತ್ ವೈರಲ್ ಆಗುತ್ತಿದೆ.

ಸೂರ್ಯಗೆ ಒಬ್ಬ ನಟಿ ಅಂದ್ರೆ ಬಹಳ ಇಷ್ಟ. 'ಚಿಕ್ಕುಬುಕು ರೈಲು' ಸಾಂಗ್‌ನಲ್ಲಿ ಬರುವ ನಟಿ ಎಂದು ಕಾರ್ತಿ ಹೇಳಿದ್ದಾರೆ. ಕೂಡಲೇ ಗೌತಮಿ ಅಲ್ವಾ? ಎಂದು ಬಾಲಯ್ಯ ಕೆದಕಿದ್ದಾರೆ. ಅದಕ್ಕೆ ಸೂರ್ಯ ಬಿದ್ದು ಬಿದ್ದು ನಕ್ಕಿದ್ದು ನಾಳೆ ಪೇಪರ್‌ಗಳಲ್ಲಿ ಇದೇ ಸುದ್ದಿ ಎಂದು ಬಾಲಯ್ಯ ಚಮಕ್ ಕೊಟ್ಟಿದ್ದಾರೆ. ಕೂಡಲೇ ಸೂರ್ಯ ಪ್ರತಿಕ್ರಿಯಿಸಿ ನೀನು ಕತ್ತಿ ಕಣೋ ಕಾರ್ತಿ ಅಲ್ಲ ಎಂದು ನಗು ಉಕ್ಕಿಸಿದ್ದಾರೆ. 'ಅನ್‌ಸ್ಟಾಪಬಲ್' ಶೋನಲ್ಲಿ ನಟ ಸೂರ್ಯ ಬಗ್ಗೆ ಮತ್ತಷ್ಟು ಸಂಗತಿಗಳು ರಿವೀಲ್ ಆಗಿದೆ.

ತಮಿಳು ನಟ ಶಿವಕುಮಾರ್ ಮಕ್ಕಳಾದ ಸೂರ್ಯ ಹಾಗೂ ಕಾರ್ತಿ ತಂದೆ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದರು. ಆರಂಭದಲ್ಲಿ ಸೂರ್ಯ ಸಿನಿ ಕರಿಯರ್ ನಿಧಾನವಾಗಿಯೇ ಶುರುವಾಯಿತು. 'ಗಜಿನಿ' ಸಿನಿಮಾ ದೊಡ್ಡಮಟ್ಟದಲ್ಲಿ ಬ್ರೇಕ್ ಕೊಟ್ಟಿತ್ತು. ಬಳಿಕ ಹಿಂತಿರುಗಿ ನೋಡಲೇಯಿಲ್ಲ. ಸ್ವಂತ ಪರಿಶ್ರಮದಿಂದ ಚಿತ್ರರಂಗದಲ್ಲಿ ಸ್ಟಾರ್ ಪಟ್ಟಕ್ಕೇರಿದರು. ಇತ್ತೀಚೆಗೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.

ಅರವಿಂದ್ ಸ್ವಾಮಿ ಹಾಗೂ ಕಾರ್ತಿ ನಟನೆಯ 'ಮೇಯಳಗನ್' ಚಿತ್ರಕ್ಕೂ ಸೂರ್ಯ ಬಂಡವಾಳ ಹೂಡಿದ್ದಾರೆ. ಸೆಪ್ಟೆಂಬರ್ 27ಕ್ಕೆ ತೆರೆಗೆ ಬಂದ ಸಿನಿಮಾ ಕಳೆದ ವಾರ ಓಟಿಟಿಗೆ ಬಂತು. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದ್ದು ಮೆಚ್ಚುಗೆ ಮಹಾಪೂರವೇ ಹರಿದುಬರ್ತಿದೆ.

ಈ ಹಿಂದೆ '96' ಸಿನಿಮಾ ಕಟ್ಟಿಕೊಟ್ಟಿದ್ದ ಪ್ರೇಮ್ ಕುಮಾರ್ 'ಮೇಯಳಗನ್' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಎರಡೇ ಪಾತ್ರಗಳ ಸುತ್ತಾ ಸುತ್ತುವ ಈ ಭಾವನಾತ್ಮಕ ಸಿನಿಮಾ ನೋಡುಗರಿಗೆ ಬಹಳ ಹತ್ತಿರವಾಗುತ್ತಿದೆ. ಸೂರ್ಯ ತಮ್ಮ 2D ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಿದ್ದಾರೆ. ಕಾರ್ತಿ ಕೂಡ ಈ ಸಂಸ್ಥೆಯ ಪಾಲುದಾರನಾಗಿದ್ದಾರೆ.

ಸೂರ್ಯ ನಟನೆಯ 'ಕಂಗುವ' ಚಿತ್ರವನ್ನು ತಮಿಳು ಚಿತ್ರರಂಗದ 'ಬಾಹುಬಲಿ' ಎನ್ನಲಾಗ್ತಿದೆ. ಈ ಕಾಸ್ಟ್ಯೂಮ್‌ ಡ್ರಾಮಾಗೆ ಶಿವ ಆಕ್ಷನ್ ಕಟ್ ಹೇಳಿದ್ದಾರೆ. ಬಾಬಿ ಡಿಯೋಲ್ ಚಿತ್ರದ ಮತ್ತೊಂದು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಕಂಗುವ ಹಾಗೂ
ಫ್ರಾನ್ಸಿಸ್ ಥಿಯೋಡರ್ ಎಂಬ ಎರಡು ಪಾತ್ರಗಳಲ್ಲಿ ಸೂರ್ಯ ನಟಿಸಿದ್ದಾರೆ.

'ಕಂಗುವ' ಚಿತ್ರದ ಟೀಸರ್, ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ. ನವೆಂಬರ್ 15ಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
Suriya and KArthi's Funny conversation with Balakrishna in Unstoppable show goes viral;
Read more about: surya karthi kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X