For Quick Alerts
  ALLOW NOTIFICATIONS  
  For Daily Alerts

  ಕಾರ್ತಿ Vs ಸೂರ್ಯ; 'ಖೈದಿ- 2'ಗೆ ಮುಹೂರ್ತ ಫಿಕ್ಸ್!

  |

  ಲೋಕೇಶ್ ಕನಗರಾಜ್ ನಿರ್ದೇಶನದ 'ಖೈದಿ' ಹಾಗೂ 'ವಿಕ್ರಂ' ಎರಡೂ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಎರಡೂ ಸಿನಿಮಾಗಳಿಗೆ ಲಿಂಕ್ ಕೊಟ್ಟು ನಿರ್ದೇಶಕರು ಮುಂದಿನ ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿದ್ದಾರೆ. 'ವಿಕ್ರಂ' ಸಕ್ಸಸ್ ನಂತರ 'ಖೈದಿ- 2' ಯಾವಾಗ ಅನ್ನುವ ಪ್ರಶ್ನೆ ಸಿನಿರಸಿಕರನ್ನು ಕಾಡುತ್ತಿದೆ.

  ನಿರ್ದೇಶಕ ಲೋಕೇಶ್ ಕನಗರಾಜ್ ಸಿನಿಮ್ಯಾಟಿಕ್‌ ಯೂನಿವರ್ಸ್‌ನಲ್ಲಿ ಮೊದಲೆರಡು ಸಿನಿಮಾಗಳು ಬ್ಲಾಕ್‌ ಬಸ್ಟರ್ ಹಿಟ್ ಆಗಿದೆ. ಇದೀಗ 'ಖೈದಿ- 2' ಮತ್ತು 'ವಿಕ್ರಂ- 2' ಸಿನಿಮಾಗಳ ಬಗ್ಗೆ ಸಿನಿರಸಿಕರ ನಿರೀಕ್ಷೆ ಹೆಚ್ಚಾಗಿದೆ. ಯಾವಾಗ ಎರಡೂ ಸಿನಿಮಾಗಳನ್ನು ನೋಡ್ತಿವೋ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಸದ್ಯ ನಿರ್ದೇಶಕ ಲೋಕೇಶ್ ಇಳಯ ದಳಪತಿ ವಿಜಯ್ ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಶೀಘ್ರದಲ್ಲೇ ಮುಂದಿನ ಸಿನಿಮಾ ಕೆಲಸಗಳು ಶುರುವಾಗಲಿದೆ.

  ರಜನಿ- ಶಿವಣ್ಣ 'ಜೈಲರ್' ಸಿನಿಮಾ ಅಪ್‌ಡೇಟ್: ಏನಂದ್ರು ಸೂಪರ್ ಸ್ಟಾರ್ ?ರಜನಿ- ಶಿವಣ್ಣ 'ಜೈಲರ್' ಸಿನಿಮಾ ಅಪ್‌ಡೇಟ್: ಏನಂದ್ರು ಸೂಪರ್ ಸ್ಟಾರ್ ?

  ಈಗಾಗಲೇ ನಟ ಕಾರ್ತಿ ಹಾಗೂ ನಿರ್ದೇಶಕ ಲೋಕೇಶ್ 'ಖೈದಿ- 2' ಬಗ್ಗೆ ಸುಳಿವು ಕೊಟ್ಟಿದ್ದಾರೆ. ವಿಜಯ್ ಕಾಂಬಿನೇಷನ್‌ ಸಿನಿಮಾ ಈ ವರ್ಷಾಂತ್ಯಕ್ಕೆ ಮುಕ್ತಾಯವಾಗುವ ಸಾಧ್ಯತೆಯಿದೆ. ಮುಂದಿನ ವರ್ಷವೇ ಖೈದಿ ದಿಲ್ಲಿ ಅಖಾಡಕ್ಕೆ ಇಳಿಯಲಿದ್ದಾನೆ. ಸ್ವತಃ ನಟ ಕಾರ್ತಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 3 ವರ್ಷಗಳ ಹಿಂದೆ ತೆರೆಕಂಡಿದ್ದ 'ಖೈದಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿತ್ತು.

   ರೊಲೆಕ್ಸ್ Vs ದಿಲ್ಲಿ ಫೈಟ್ ಕದನ

  ರೊಲೆಕ್ಸ್ Vs ದಿಲ್ಲಿ ಫೈಟ್ ಕದನ

  'ವಿಕ್ರಂ' ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಡ್ರಗ್ ಮಾಫಿಯಾ ಡಾನ್ ರೊಲೆಕ್ಸ್ ಪಾತ್ರದಲ್ಲಿ ನಟ ಸೂರ್ಯ ಅಬ್ಬರಿಸಿದ್ದರು. ಇದೀಗ 'ಖೈದಿ' ಸೀಕ್ವೆಲ್‌ನಲ್ಲಿ ರೊಲೆಕ್ಸ್ ಹಾಗೂ ದಿಲ್ಲಿ ಅಂದರೆ ಸೂರ್ಯ ಮತ್ತು ಕಾರ್ತಿ ಸಹೋದರರಿಬ್ಬರೂ ಎದುರುಬದುರಾಗುತ್ತಿದ್ದಾರೆ. ಹಾಗಾಗಿ ಈ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳುವಂತೆ ಮಾಡಿದೆ. ತೆರೆಮೇಲೆ ಸಹೋದರರಿಬ್ಬರ ಮುಖಾಮುಖಿ ಹೇಗಿರುತ್ತೋ ಅಂತ ಊಹಿಸಿಕೊಂಡೇ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

  ಟೂ ಪೀಸ್‌ನಲ್ಲಿ ವೇದಿಕಾಳ ಅಂದ ಕಂಡು ಸೂರ್ಯ ಕಣ್ಣು ಹೊಡೆದ!ಟೂ ಪೀಸ್‌ನಲ್ಲಿ ವೇದಿಕಾಳ ಅಂದ ಕಂಡು ಸೂರ್ಯ ಕಣ್ಣು ಹೊಡೆದ!

   'ವಿಕ್ರಂ' ಆಗಿ ಕಮಲ್ ಸಕ್ಸಸ್

  'ವಿಕ್ರಂ' ಆಗಿ ಕಮಲ್ ಸಕ್ಸಸ್

  ಸೋಲಿನ ಸುಳಿಗೆ ಸಿಲುಕಿದ್ದ ಉಳಗ ನಾಯಗನ್ ಕಮಲ್ ಹಾಸನ್‌ಗೆ 'ವಿಕ್ರಂ' ಸಿನಿಮಾ ಚಿತ್ರರಂಗದಲ್ಲಿ ಮರುಹುಟ್ಟು ನೀಡಿತ್ತು. ಸಿನಿಮಾ ನಿರ್ಮಾಪಕರಲ್ಲೂ ಒಬ್ಬರಾಗಿದ್ದ ಕಮಲ್ ಸಿನಿಮಾ ಸಕ್ಸಸ್‌ಗೆ ಕಾರಣರಾದ ಎಲ್ಲರಿಗೂ ವಿಶೇಷ ಉಡುಗೊರೆಗಳನ್ನು ನೀಡಿದ್ದರು. ಏಜೆಂಟ್ ವಿಕ್ರಂ ಪಾತ್ರ 'ಖೈದಿ- 2' ಸಿನಿಮಾದಲ್ಲಿ ಇರುತ್ತಾ ಅನ್ನುವುದನ್ನು ಕಾದು ನೋಡಬೇಕು.

   ವಿಜಯ್‌ಗೆ ಲೋಕೇಶ್ ಆಕ್ಷನ್ ಕಟ್

  ವಿಜಯ್‌ಗೆ ಲೋಕೇಶ್ ಆಕ್ಷನ್ ಕಟ್

  ಈಗಾಗಲೇ ಲೋಕೇಶ್ ಕನಗರಾಜ್ ನಿರ್ದೇಶನದ 'ಮಾಸ್ಟರ್' ಚಿತ್ರದಲ್ಲಿ ಇಳಯ ದಳಪತಿ ವಿಜಯ್ ನಟಿಸಿ ಗೆದ್ದಿದ್ದಾರೆ. ಶೀಘ್ರದಲ್ಲೇ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಶುರುವಾಗಲಿದೆ. ಇನ್ನು ಹೆಸರಿಡದ ಈ ಚಿತ್ರದಲ್ಲಿ ವಿಜಯ್‌ನ ಮುಂಬೈ ಡಾನ್ ಪಾತ್ರದಲ್ಲಿ ಲೋಕೇಶ್ ತೋರಿಸಲಿದ್ದಾರಂತೆ. ಈ ಕಥೆಗೂ 'ಖೈದಿ- 2' ಹಾಗೂ 'ವಿಕ್ರಂ- 2' ಕಥೆಗೂ ಏನಾದರೂ ಲಿಂಕ್ ಇರುತ್ತಾ ಅನ್ನುವ ಅನುಮಾನವೂ ಕೆಲವರಲ್ಲಿದೆ.

   ಲೋಕೇಶ್ ಜೊತೆಗೆ ಚರಣ್ ಸಿನಿಮಾ

  ಲೋಕೇಶ್ ಜೊತೆಗೆ ಚರಣ್ ಸಿನಿಮಾ

  'ಖೈದಿ' ಸಿನಿಮಾ ಸಕ್ಸಸ್ ನಂತರ ಲೋಕೇಶ್ ಕನಗರಾಜ್‌ಗೆ ಸೌತ್ ಸಿನಿದುನಿಯಾದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಕಾಲಿವುಡ್ ಸೂಪರ್‌ ಸ್ಟಾರ್‌ಗಳೆಲ್ಲಾ ಈತನ ನಿರ್ದೇಶನದಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಇನ್ನು ಲೋಕೇಶ್‌, ಮೆಗಾಪವರ್ ಸ್ಟಾರ್ ರಾಮ್‌ಚರಣ್‌ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡುವ ಬಗ್ಗೆಯೂ ಚರ್ಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಬ್ಬರು ಸೇರಿ ಸಿನಿಮಾ ಮಾಡುವ ಸಾಧ್ಯತೆಯಿದೆ.

  Recommended Video

  Yash | Ram Charan | ಅಂದೇ ಸಿಗಲಿದೆ Y19 ಸಿನಿಮಾ ಬಗ್ಗೆ ಮಾಹಿತಿ? | S. Shankar *Sandalwood
  English summary
  Actor Karthi Shares A Exciting Update On Kaithi- 2 Movie with Lokesh Kanagaraj
  Thursday, August 11, 2022, 15:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X