For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿ ಸಾವು, ಅಂತಿಮ ದರ್ಶನದಲ್ಲಿ ಕಣ್ಣೀರು ಹಾಕಿದ ನಟ

  |

  ಅಭಿಮಾನಿಗಳ ಸಂಕಷ್ಟಕ್ಕೆ, ಕಷ್ಟಕ್ಕೆ ಮಿಡಿಯುವ ಕಲಾವಿದರು ಚಿತ್ರರಂಗದಲ್ಲಿದ್ದಾರೆ. ತಮಿಳು ನಟ ಕಾರ್ತಿ ಮತ್ತು ಸೂರ್ಯ ಸಹೋದರರು ಈ ವಿಚಾರದಲ್ಲಿ ಸದಾ ಒಂದು ಹೆಜ್ಜೆ ಮುಂದೆ ಇರ್ತಾರೆ. ಅಭಿಮಾನಿಗಳಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿರುವ ಉದಾಹರಣೆ ಇದೆ.

  ತಮ್ಮ ಮುಂದಿನ ಸಿನಿಮಾ 'ತಂಬಿ' ಬಿಡುಗಡೆಗಾಗಿ ಕಾಯುತ್ತಿರುವ ನಟ ಕಾರ್ತಿಗೆ ಬೇಸರದ ಸಂಗತಿಯೊಂದು ಆಘಾತ ತಂದಿದೆ. ಕಾರ್ತಿ ಅವರ ಅಭಿಮಾನಿ ವೈಸಾಯಿ ನಿತ್ಯಾ ಎಂಬುವವರು ಸಾವನ್ನಪ್ಪಿದ್ದಾರೆ. ವೈಸಾಯಿ ನಿತ್ಯಾ ಅವರು ಚೆನ್ನೈನ ಜಿಲ್ಲೆಯ ಕಾರ್ತಿ ಅಭಿಮಾನಿ ಸಂಘದ ಅಧ್ಯಕ್ಷರಾಗಿದ್ದರು.

  ಅಂತೆ ಕಂತೆ ನಿಜವಾಯ್ತು: ಕಾರ್ತಿ ಜೊತೆ ರಶ್ಮಿಕಾ ಸಿನಿಮಾ ಶುರುವಾಯ್ತುಅಂತೆ ಕಂತೆ ನಿಜವಾಯ್ತು: ಕಾರ್ತಿ ಜೊತೆ ರಶ್ಮಿಕಾ ಸಿನಿಮಾ ಶುರುವಾಯ್ತು

  ಕಾರ್ತಿ ಅವರ ಹೆಸರಲ್ಲಿ ಹಲವು ಸಮಾಜಮುಖಿ ಕೆಲಸ ಮಾಡಿದ್ದರು. ರಸ್ತೆ ಅಪಘಾತದಲ್ಲಿ ಕಾರ್ತಿ ಅಭಿಮಾನಿ ಕೊನೆಯುಸಿರೆಳೆದಿದ್ದಾರೆ. ಈ ವಿಷಯ ತಿಳಿದ ಕಾರ್ತಿ ಇಂದು ಬೆಳಿಗ್ಗೆ ಉಲುಂದರ್ ‌ಪೇಟೆಯಲ್ಲಿರುವ ಅಭಿಮಾನಿ ಮನೆಗೆ ದಾವಿಸಿ ಸಂತಾಪ ಸೂಚಿಸಿದ್ದಾರೆ. ಈ ವೇಳೆ ಭಾವುಕರಾದ ಕಾರ್ತಿ ಅಭಿಮಾನಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

  ಅಭಿಮಾನಿಯ ಅಂತಿಮ ದರ್ಶನ ಪಡೆದು ವಾಪಸ್ ಆದ ಕಾರ್ತಿ, ತಂಬಿ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಪ್ರೆಸ್ ಮೀಟ್ ಆರಂಭಕ್ಕೂ ಮುನ್ನ 1 ನಿಮಿಷ ಮೌನ ಆಚರಣೆ ಮಾಡಿದ್ದು ಕಂಡು ಬಂತು.

  ಸದ್ಯ, 'ಖೈದಿ' ಸಿನಿಮಾದ ಯಶಸ್ಸಿನಲ್ಲಿರುವ ಕಾರ್ತಿ, 'ತಂಬಿ' ಸಿನಿಮಾದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಕಾರ್ತಿ ಅವರ ಅತ್ತಿಗೆ ಜ್ಯೋತಿಕಾ ನಟಿಸಿದ್ದಾರೆ.

  English summary
  Tamil actor karthi tear up at fan last funeral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X