ಕಮಲ್ ಹಾಸನ್ 'ವಿಕ್ರಂ' ಚಿತ್ರಕ್ಕೆ ಬಂದ 'ಖೈದಿ' ನಟ ನರೈನ್

'ಮಾಸ್ಟರ್' ಖ್ಯಾತಿಯ ಲೋಕೇಶ್ ಕನಕರಾಜ್ ಮತ್ತು ಕಮಲ್ ಹಾಸನ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಚಿತ್ರ 'ವಿಕ್ರಂ'. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರಿದ್ದು, ಕಮಲ್ ನಟಿಸುತ್ತಿರುವ 232ನೇ ಸಿನಿಮಾ ಎನ್ನುವುದು ವಿಶೇಷ.

ಇದೀಗ, ಈ ಚಿತ್ರಕ್ಕೆ ಮಲಯಾಳಂ ಖ್ಯಾತ ನಟ ನರೈನ್ ಎಂಟ್ರಿಯಾಗಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದಕ್ಕಾಗಿ ನರೈನ್ ಆಯ್ಕೆಯಾಗಿದ್ದು, ಸದ್ಯಕ್ಕೆ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿದೆ. ಕಾರ್ತಿ ಕಾಣಿಸಿಕೊಂಡಿದ್ದ 'ಖೈದಿ' ಸಿನಿಮಾದಲ್ಲಿ ನರೈನ್ ಅಭಿನಯಿಸಿದ್ದರು.

''ವಿಕ್ರಂ ನನ್ನ ವೃತ್ತಿ ಜೀವನದಲ್ಲಿ ಬಹಳ ವಿಶೇಷ ಸಿನಿಮಾ ಆಗಲಿದೆ. ಕಮಲ್ ಹಾಸನ್ ಅವರಿಂದ ಸ್ಫೂರ್ತಿಗೊಂಡು ನಟನೆ ಆರಂಭಿಸಿದ ಅನೇಕರಲ್ಲಿ ನಾನು ಒಬ್ಬ. ಕಮಲ್ ಸರ್ ಜೊತೆ ಅಭಿನಯಿಸಬೇಕು ಎಂಬ ಬಹುದಿನದ ಆಸೆ ಈ ಚಿತ್ರದಲ್ಲಿ ಈಡೇರುತ್ತಿದೆ'' ಎಂದು ನರೈನ್ ಸಂತಸ ಹಂಚಿಕೊಂಡಿದ್ದಾರೆ.

Actor Narain Playing Important Role in Kamal Haasan Vikram

ಸಾಹಸ ನಿರ್ದೇಶಕರಾದ ಅನ್ಬು-ಅರಿವ್ 'ವಿಕ್ರಂ' ಸಿನಿಮಾದಲ್ಲಿ ಕೆಲಸ ಮಾಡುವುದಾಗಿ ಕಳೆದ ತಿಂಗಳಷ್ಟೇ ಸುದ್ದಿ ಹೊರಬಿದ್ದಿತ್ತು. ಮಲಯಾಳಂನ ಫಾಹದ್ ಫಾಜಿಲ್ ಮತ್ತು ವಿಜಯ್ ಸೇತುಪತಿ ಸಹ ಈ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಇವರಿಬ್ಬರ ಬಗ್ಗೆ ಅಧಿಕೃತವಾಗಿಲ್ಲ.

ಇನ್ನುಳಿದಂತೆ ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಅದಾಗಲೇ ಚಿತ್ರದ ಟೀಸರ್‌ವೊಂದು ಬಿಡುಗಡೆಯಾಗಿದೆ. ಸದ್ಯ, ಕೋವಿಡ್ ಭೀತಿಯಿಂದ ಚಿತ್ರೀಕರಣ ನಿಲ್ಲಿಸಿರುವ ಚಿತ್ರತಂಡ ಸರ್ಕಾರದಿಂದ ಪೂರ್ಣ ಪ್ರಮಾಣದಲ್ಲಿ ಅನುಮತಿ ಸಿಕ್ಕ ಕೂಡಲೇ ಶೂಟಿಂಗ್ ಮತ್ತೆ ಆರಂಭಿಸಲಿದೆ.

ಕಮಲ್ ಹಾಸನ್ ಕೊನೆಯದಾಗಿ 'ವಿಶ್ವರೂಪಂ-2' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 2018ರಲ್ಲಿ ಈ ಚಿತ್ರ ತೆರೆಕಂಡಿತ್ತು. ಅದಾದ ಬಳಿಕ ತಮಿಳುನಾಡು ಚುನಾವಣೆಯಲ್ಲಿ ತೊಡಗಿಕೊಂಡರು. ಈ ನಡುವೆ ಶಂಕರ್ ಜೊತೆ ಇಂಡಿಯನ್ 2 ಸಿನಿಮಾ ಶುರು ಮಾಡಿ ಅರ್ಧಕ್ಕೆ ನಿಲ್ಲಿಸಲಾಗಿದೆ.

ಮಲಯಾಳಂ ಹಿಟ್ ಚಿತ್ರ 'ದೃಶ್ಯಂ-2' ತಮಿಳಿನಲ್ಲಿ ರಿಮೇಕ್ ಆಗಲಿದ್ದು, ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ. ಮೂಲ ಚಿತ್ರ ನಿರ್ದೇಶಿಸಿದ್ದ ಜಿತು ಜೋಸೆಫ್ ತಮಿಳಿನಲ್ಲೂ ನಿರ್ದೇಶನ ಮಾಡಲಿದ್ದಾರೆ.

More from Filmibeat

English summary
Actor Narain will be playing an important role in Ulaganayagan Kamal Haasan's much anticipated Vikram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X