ಕೊರೊನಾ ವೈರಸ್‌ಗೆ ಬಲಿಯಾದ ಖ್ಯಾತ ನಟ ನಿತೀಶ್ ವೀರಾ

ಕೊರೊನಾ ವೈರಸ್ ಮತ್ತೊಬ್ಬ ಚಲನಚಿತ್ರ ಕಲಾವಿದನ ಬದುಕು ಅಂತ್ಯಗೊಳಿಸಿದೆ. ಕಳೆದ ಒಂದೂವರೆ ವರ್ಷದಲ್ಲಿ ಕೋವಿಡ್ ಸೋಂಕಿನಿಂದ ಹಲವು ಸಿನಿಮಾ ನಟರು ಸಾವನ್ನಪ್ಪಿದ್ದಾರೆ. ಎರಡನೇ ಅಲೆಯ ಸಂದರ್ಭದಲ್ಲಿ ಸಾವಿನ ಸಂಖ್ಯೆ ಏರುತ್ತಿದೆ.

ತಮಿಳು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದ ನಿತೀಶ್ ವೀರಾ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದರು ಎಂಬ ಮಾಹಿತಿ ಹೊರಬಿದ್ದಿದೆ.

ಕೊರೊನಾ ಪಾಸಿಟಿವ್ ಬಂದಿದ್ದ ಹಿನ್ನೆಲೆ 45 ವರ್ಷದ ನಿತೀಶ್ ವೀರಾ ಚೆನ್ನೈನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

 Actor Nitish Veera passed away due to Covid complications in Chennai

ನಿತೀಶ್ ವೀರಾ ಕಳೆದ 20 ವರ್ಷದಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. 2000ನೇ ವರ್ಷದಲ್ಲಿ ತೆರೆಕಂಡ 'ವಲ್ಲರಸು' ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ ನಿತೀಶ್ ವೀರಾ ನಂತರ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಪುದುಪೇಟೈ, ಪೇರರಸು, ರಜನಿಕಾಂತ್ ನಟಿಸಿದ್ದ ಕಾಲಾ, ಧನುಶ್ ಅಭಿನಯಿಸಿದ್ದ ಅಸುರನ್, ಪಡೈ ವೀರನ್, ಐರಾ, ನೀಯಾ 2 ಸೇರಿದಂತೆ ಇನ್ನು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ, ಲಾಭಂ ಹಾಗೂ ನೇರೋ ಎಂಬ ಎರಡು ಸಿನಿಮಾ ಬಿಡುಗಡೆಯಾಗಬೇಕಿದೆ.

ಗೋಪಿ ಅಯ್ಯಪ್ಪನ್ ನಿಧನ

ತಮಿಳಿನ ಖ್ಯಾತ ನಟ ಹಾಸ್ಯ ನಟ ಅಯ್ಯಪ್ಪನ್ ಗೋಪಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಈ ಇಬ್ಬರು ಕಲಾವಿದರ ಸಾವಿಗೆ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.

Recommended Video

ನೆಚ್ಚಿನ ಟೀಂ RCB, ಆದ್ರೆ ನೆಚ್ಚಿನ ಪ್ಲೇಯರ್ ಇರೋದು CSK ನಲ್ಲಿ ಎಂದ ರಶ್ಮಿಕಾ ಮಂದಣ್ಣ | Filmibeat Kannada

More from Filmibeat

English summary
Actor Nitish Veera who acted in Kaala, Asuran passed away due to Covid complications in Chennai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X