"ತ್ರಿಶಾಳನ್ನು ಮನೆಯಲ್ಲಿ ಕೂಡಿ ಹಾಕಬೇಕು" ಎಂದಿದ್ದ ನಟನಿಂದ ತಮಿಳುನಾಡು ಸಿಎಂ ವಿಜಯ್ ಭೇಟಿ

ಕಾಲಿವುಡ್ ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿರುವುದು ಗೊತ್ತೇಯಿದೆ. ಮತ್ತೊಂದು ಕಡೆ ವಿಜಯ್ ವೈಯಕ್ತಿಕ ಜೀವನ ಪದೇ ಪದೆ ಚರ್ಚೆಗೆ ಗ್ರಾಸವಾಗ್ತಿದೆ. ಅದರಲ್ಲೂ ತ್ರಿಷಾ ಜೊತೆಗಿನ ಒಡನಾಟ ಕೆಲವರ ಬೇಸರಕ್ಕೆ ಕಾರಣವಾಗಿದೆ. ಚುನಾವಣೆಗೂ ಮುನ್ನ ವಿಜಯ್ ಪತ್ನಿ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಅದರ ಬೆನ್ನಲ್ಲೇ ತ್ರಿಷಾ ಜೊತೆ ವಿಜಯ್ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು.

ನಟಿಯೊಬ್ಬಳ ಕಾರಣಕ್ಕೆ ತಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ವಿಜಯ್ ಪತ್ನಿ ಸಂಗೀತಾ ಆರೋಪಿಸಿದ್ದರು. ಆಡಿಕೊಳ್ಳುವವರ ಬಾಯಿ ಮುಚ್ಚಿಸಬೇಕು ಎಂದು ತಮಿಳು ನಿರ್ಮಾಪಕನ ಮಗಳ ಮದುವೆಗೆ ತ್ರಿಷಾ ಜೊತೆ ವಿಜಯ್ ಹಾಜರಾಗಿದ್ದರು. ಮ್ಯಾಚಿಂಗ್ ಕಾಸ್ಟ್ಯೂಮ್ ಧರಿಸಿ ಒಂದೇ ಕಾರಿನಲ್ಲಿ ಬಂದು ಹೋಗಿದ್ದರು. ಒಟ್ಟಿಗೆ ವೇದಿಕೆ ಏರಿ ನವ ವಧು-ವರರಿಗೆ ಶುಭ ಹಾರೈಸಿದ್ದರು. ಈ ಬಗ್ಗೆ ತಮಿಳು ನಟ ಪಾರ್ಥಿಬನ್ ಬೇಸರ ವ್ಯಕ್ತಪಡಿಸಿದ್ದರು.

Actor Parthiban Meets Tamil Nadu CM Vijay After Past Remarks on Trisha Stirred Debate

ವಿಜಯ್ ಸ್ವಂತ ಪಕ್ಷ ಕಟ್ಟಿ ಚುನಾವಣೆಗೆ ಸ್ಪರ್ಧಿಸಿದ್ದರು. ಇಂತಹ ಸಮಯದಲ್ಲಿ ಹೀಗೆ ವೈಯಕ್ತಿಕ ವಿಚಾರ ಬೀದಿಗೆ ಬಂದು ಸುದ್ದಿ ಆಗುವುದು ಬೇಡ ಎಂದು ಚಿತ್ರರಂಗದ ಕೆಲವರು ಬಯಸಿದ್ದರು. ಪಾರ್ಥಿಬನ್ ಮಾತ್ರವಲ್ಲ ನಿರ್ದೇಶಕ ಸಮುದ್ರಖನಿ ಕೂಡ ಈಗ ಬೇಸರ ಹೊರ ಹಾಕಿದ್ದರು. ಇನ್ನು ವೇದಿಕೆಯೊಂದರಲ್ಲಿ ಮಾತನಾಡಿದ್ದ ಪಾರ್ಥಿಬನ್ "ತ್ರಿಶಾಳನ್ನು ಕೆಲ ದಿನ ಮನೆಯಲ್ಲಿ ಕೂಡಿ ಹಾಕುವುದು ಒಳ್ಳೆದು" ಎಂದು ಹೇಳಿದ್ದರು. ಇದಕ್ಕೆ ಪರೋಕ್ಷವಾಗಿ ಆಕೆ ತಿರುಗೇಟು ನೀಡಿದ್ದರು. ಸದ್ಯ ಪಾರ್ಥಿಬನ್ ತಮಿಳುನಾಡು ನೂತನ ಸಿಎಂ ವಿಜಯ್ ಭೇಟಿ ಮಾಡಿದ್ದಾರೆ.

ಸಾಕಷ್ಟು ಜನ ಸೆಲೆಬ್ರೆಟಿಗಳು ಇತ್ತೀಚೆಗೆ ಸಿಎಂ ವಿಜಯ್ ಭೇಟಿ ಮಾಡಿ ಬಂದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗುತ್ತಿದೆ. ಈಗ ಪಾರ್ಥಿಬನ್ ಕೂಡ ವಿಜಯ್ ಅವರ ಜೊತೆ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗ್ತಿದೆ. ಇದೆಲ್ಲದರ ನಡುವೆ ಅಂದು ತ್ರಿಷಾ ಬಗ್ಗೆ ಪಾರ್ಥಿಬನ್ ನೀಡಿದ್ದ ಹೇಳಿಕೆ ವೈರಲ್ ಆಗ್ತಿದೆ.

'ಗಲಾಟ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ನಟ ಪಾರ್ಥಿಬನ್ ಭಾಗಿ ಆಗಿದ್ದರು ನಡೆದಿದೆ. 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ಪಾರ್ಥಿಬನ್ ಹಾಗೂ ತ್ರಿಷಾ ಇಬ್ಬರೂ ನಟಿಸಿದ್ದರು. ಕುಂದವೈ ಎಂಬ ಪಾತ್ರದಲ್ಲಿ ತ್ರಿಷಾ ಮಿಂಚಿದ್ದರು. ವೇದಿಕೆಯಲ್ಲಿ ನಿರೂಪಕಿ "ನಿಮ್ಮ ಕುಂದವೈ ಬಗ್ಗೆ ಏನು ಹೇಳ್ತೀರಾ?" ಎಂದು ಪಾರ್ಥಿಬನ್ ಬಳಿ ಕೇಳಿದಾಗ "ಈ ಕುಂದವೈನ ಕೆಲ ದಿನ ಮನೆಯಲ್ಲಿ ಕೂಡಿ ಹಾಕಬೇಕು. ಅದೇ ಒಳ್ಳೆಯದು. ಮನೆಯಿಂದ ಹೊರಗೆ ಬರಲು ಬಿಡಬಾರದು" ಎಂದು ಕುಟುಕಿದ್ದರು.

ಸದ್ಯ ಎಲ್ಲಾ ವಿವಾದಗಳನ್ನು ಮೀರಿ ವಿಜಯ್ ತಮಿಳುನಾಡು ಚುನಾವಣೆಯಲ್ಲಿ ಗೆದ್ದು ಸಿಎಂ ಆಗಿದ್ದಾರೆ. ಚುನಾವಣೆಯಲ್ಲಿ ಟಿವಿಕೆ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಸಿಗುತ್ತಿದ್ದಂತೆ ನಟಿ ತ್ರಿಷಾ ನೇರವಾಗಿ ವಿಜಯ್ ಮನೆಗೆ ಭೇಟಿ ನೀಡಿ ಅಭಿನಂದನೆ ತಿಳಿಸಿದ್ದರು. ಬಳಿಕ ನಡೆದ ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕೂಡ ತ್ರಿಷಾ ಮಿಂಚಿದ್ದರು. ಇತ್ತೀಚೆಗೆ ತಮಿಳು ನಟ ಅಜಿತ್ ಅವರ ತಾಯಿ ನಿಧನರಾಗಿದ್ದರು. ಆಗ ಸಿಎಂ ವಿಜಯ್ ಜೊತೆ ತ್ರಿಷಾ ಹೋಗಿ ಅಂತಿಮ ನಮನ ಸಲ್ಲಿಸಿ ಬಂದಿದ್ದರು. ಇದು ಭಾರೀ ಚರ್ಚೆ ಹುಟ್ಟಾಕ್ಕಿತ್ತು.

ಸಾಕಷ್ಟು ತಮಿಳು ಸಿನಿಮಾಗಳಲ್ಲಿ ಪಾರ್ಥಿಬನ್ ನಟಿಸಿದ್ದಾರೆ. ನಿರ್ದೇಶಕರಾಗಿಯೂ ಅದೃಷ್ಟಪರೀಕ್ಷಿಸಿಕೊಂಡಿದ್ದಾರೆ. ಕನ್ನಡದ 'ದಾದಾ ಈಸ್ ಬ್ಯಾಕ್' ಎಂಬ ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದರು. 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ಪಲುವೆಟ್ಟರಾಯರ್ ಎಂಬ ಪಾತ್ರದಲ್ಲಿ ಅವರು ಮಿಂಚಿದ್ದರು.

Read more about: vijay trisha kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X