"ಓವರ್ ಆಕ್ಟಿಂಗ್ ಕೂಡ ಆಕ್ಟಿಂಗ್ ಅಲ್ವಾ? ದುಡ್ಡಿಗಾಗಿ ನಾನು ಕೆಟ್ಟ ಸಿನ್ಮಾಗಳಲ್ಲಿ ನಟಿಸಿದ್ದೀನಿ: ಪ್ರಕಾಶ್ ರಾಜ್

ಬಹುಭಾಷಾ ನಟ ಪ್ರಕಾಶ್ ರಾಜ್ ತಮ್ಮ ನಟನೆಯಿಂದ ಮಾತ್ರವಲ್ಲ ತಮ್ಮ ರಾಜಕೀಯ ನಿಲುವುಗಳಿಂದಲೂ ಸದಾ ಸುದ್ದಿಯಲ್ಲಿ ಇರುತ್ತಾರೆ. ದಕ್ಷಿಣ ಭಾರತ ಸಿನಿಮಾಗಳಲ್ಲಿ ಮಾತ್ರವಲ್ಲದೇ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿ ಗೆದ್ದಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಪ್ರಕಾಶ್ ರಾಜ್ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಪೋಷಕ ಕಲಾವಿದರಾಗಿ ಗುರ್ತಿಸಿಕೊಂಡಿದ್ದಾರೆ.

ಇತ್ತೀಚೆಗೆ 100 ಕೋಟಿ ರೂ. ಪೋಂಜಿ ಸ್ಕ್ಯಾಮ್‌ನಲ್ಲಿ ನಟ ಪ್ರಕಾಶ್ ರಾಜ್ ಹೆಸರು ಕೇಳಿಬಂದಿತ್ತು. ಇದೀಗ ಅವರಿಗೂ ಈ ಸ್ಕ್ಯಾಮ್‌ಗೂ ಯಾವುದೇ ಸಂಬಂಧ ಇಲ್ಲ ಎನ್ನುವುದು ರುಜುವಾತಾಗಿದೆ. ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಪ್ರಕಾಶ್ ರಾಜ್ ತಿಳಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ತಮ್ಮ ಸಿನಿಕರಿಯರ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Actor Prakash Raj opens up about his career, roles, overacting and more

'ನಾಗಮಂಡಲ' ಸಿನಿಮಾದಲ್ಲಿ ನಟಿಸಿದ್ದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಫಿಲ್ಮ್ ಕಂಪಾನಿಯನ್ ಸೌತ್ ಸಂದರ್ಶನದಲ್ಲಿ ಪ್ರಕಾಶ್ ರಾಜ್ ಮಾತನಾಡುತ್ತಾ "ದುಡ್ಡಿಗಾಗಿ ನಾನು ಕೆಲ ಕೆಟ್ಟ ಸಿನ್ಮಾಗಳಲ್ಲಿ ನಟಿಸಿದ್ದೀನಿ" ಎಂದು ಹೇಳಿದ್ದಾರೆ. "ಕೆಲವೊಮ್ಮೆ ನನಗೆ ಅವಕಾಶ ಸಿಗದಿರಲು ಇರಲು ರಾಜಕೀಯ ನಡೆದಿತ್ತು. ಅದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳಲ್ಲ" ಎಂದಿದ್ದಾರೆ.

"ನಾನು ಎಷ್ಟೋ ಸಿನಿಮಾಗಳಲ್ಲಿ ನಟಿಸಿದ್ದೀನಿ. ಎಷ್ಟೋ ಬಾರಿ ನನ್ನನ್ನು ರಿಜೆಕ್ಟ್ ಮಾಡಿದ್ದಾರೆ. ಅದರ ಬಗ್ಗೆ ನಾನು ಹೆಚ್ಚು ಯೋಚಿಸಲಿಲ್ಲ. ಯಾಕಂದರೆ ನನ್ನನ್ನು ಬೇಡ ಎಂದು ಹೇಳಿದ್ದರ ಹಿಂದೆ ಎಷ್ಟು ರಾಜಕೀಯ ಇರುತ್ತದೆ ಎಂದು ನಾನು ಊಹಿಸಬಲ್ಲೆ. ಅನಿವಾರ್ಯ ಕಾರಣಗಳಿಂದ ಅವರು ನನ್ನನ್ನು ಸಿನಿಮಾದಿಂದ ಕೈಬಿಟ್ಟರು ಎನ್ನುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ"

"ನನ್ನ ಲೈಫ್ ಬೇರೆ. ಮೊದಲು ನನಗೆ ಎಲ್ಲಾ ಸೌಕರ್ಯವಾಗಿ ಇದ್ಯಾ? ಇಲ್ವಾ? ಎಂದು ನೋಡುತ್ತೇನೆ. ಬಳಿಕ ಮಾತ್ರ ಉಳಿದ ವಿಚಾರಗಳ ಬಗ್ಗೆ ಯೋಚಿಸುತ್ತೀನಿ. ಕೆಲವೊಮ್ಮೆ ಹಣಕ್ಕಾಗಿ ಕೆಟ್ಟ ಸಿನಿಮಾಗಳಲ್ಲಿ ನಟಿಸಿರುವುದು ಇದೆ. ಸಿನಿಮಾಗಳಲ್ಲಿ ಯಾಕಿಷ್ಟು ಓವರ್‌ ಆಕ್ಟಿಂಗ್ ಮಾಡ್ತೀಯಾ ಎಂದು ಕೆಲವರು ಹೇಳುತ್ತಾರೆ. ನಾನು ಹೇಳುವುದು ಒಂದೇ ನಿಜವಾಗಿ ನಾನು ಓವರ್‌ಆಕ್ಟಿಂಗ್ ಮಾಡ್ತಿದ್ದೀನಿ ಅಂದ್ರೆ ನನಗೆ ಆಕ್ಟಿಂಗ್ ಬಂದಂತೆ ತಾನೇ"

"ಕಮರ್ಷಿಯಲ್ ಸಿನಿಮಾಗಳ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಅಂತಹ ಸಿನಿಮಾಗಳಿಗೆ ಪ್ರತ್ಯೇಕವಾದ ಅಭಿಮಾನಿಗಳು ಇರುತ್ತಾರೆ. ಅಂತಹ ಸಿನಿಮಾಗಳನ್ನು ನಿರ್ಮಾಪಕರು, ನಿರ್ದೇಶಕರು ಕಷ್ಟಬಿದ್ದು ಮಾಡುತ್ತಾರೆ. ಅವರು ನನ್ನನು ಖಳನಾಯಕನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಇಂತಹ ಕೆಟ್ಟ ಸಿನಿಮಾಗಳನ್ನು ಮಾಡಬೇಕಾ? ಅಂತ ನನಗೆ ಅನ್ನಿಸುತ್ತದೆ. ಆದರೆ ಹಣ ಬೇಕು ಅಂದ್ರೆ ಸಿಕ್ಕಿದ ಅವಕಾಶ ಬಳಸಿಕೊಳ್ಳಬೇಕು ಅಲ್ಲವೇ?"

"ಕೆಲವೊಮ್ಮೆ ನಾನು ಹಣ ಪಡೆಯದೇ ಸಿನಿಮಾಗಳಲ್ಲಿ ನಟಿಸಿರುವುದು ಇದೆ. ಕೆಲವರು ಯಾಕೆ ಹಣ ಪಡೆಯದೇ ಫ್ರೀಯಾಗಿ ನಟಿಸ್ತೀಯಾ ಎಂದು ಕೇಳುತ್ತಾರೆ. ಅವರಿಗೆ ಗೊತ್ತಿಲ್ಲ, ನಾನು ಹಣದ ರೂಪದಲ್ಲಿ ಪ್ರತಿಫಲ ಪಡೆಯದೇ ಇದ್ದರೂ ಬೇರೆ ರೂಪದಲ್ಲಿ ಪಡೆದಿರುತ್ತೇನೆ. ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾಗ ಸಿಗುವ ರೆಸ್ಪಾನ್ಸ್, ಚಪ್ಪಾಳೆ, ಆ ಸಂತೋಷ ಹಣದಿಂದ ಅಳೆಯಲು ಸಾಧ್ಯವಿಲ್ಲ. ಇದೇ ನನ್ನ ಜೀವನ. ನನ್ನಿಷ್ಟದಂತೆ ಬದುಕುತ್ತಿದ್ದೇನೆ"

"ಮರ ಸುತ್ತುವ, ನಾಯಕಿಯರ ಜೊತೆ ಕುಣಿಯುವಂತಹ ಅವಕಾಶಗಳು ಸಿಗದ್ದಕ್ಕೆ ಬೇಸರವಿಲ್ಲ. ನನಗೆ ಅದು ಇಷ್ಟವೂ ಇಲ್ಲ. ನನಗೆ ಡ್ಯಾನ್ಸ್ ಮಾಡಲು ಬರುವುದು ಇಲ್ಲ. ಅದು ಅಷ್ಟು ಸುಲಭವಲ್ಲ. ಅದಕ್ಕೆ ಬಹಳ ಶ್ರದ್ಧೆ ಬೇಕು. ಹಾಗಂತ ಅದರ ಬಗ್ಗೆ ತಾತ್ಸಾರವಿಲ್ಲ. ನನಗೆ ಗೌರವವಿದೆ. ಆದರೆ ನಾನು ಆ ರೀತಿ ಕಾಣಿಸಿಕೊಳ್ಳಲಿಲ್ಲ ಅಷ್ಟೆ" ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಇಡಿ ನಟ ಪ್ರಕಾಶ್‌ ರಾಜ್‌ಗೆ ಸಮನ್ಸ್ ಜಾರಿ ಮಾಡಿತ್ತು. ಪೊಂಜಿ(Ponzi) ಹಗರಣದ ಸಂಬಂಧ ಮನಿಲ್ಯಾಂಡರಿಂಗ್ ಕೇಸ್‌ನಲ್ಲಿ ನಟ ಪ್ರಕಾಶ್ ರಾಜ್ ಹೆಸರು ತಳುಕು ಹಾಕಿಕೊಂಡಿತ್ತು. ತಿರುಚ್ಚಿಯ ಆಭರಣ ಸಂಸ್ಥೆಯೊಂದರ ವಿರುದ್ಧ ದೂರು ದಾಖಲಾಗಿತ್ತು. ಪ್ರಕಾಶ್ ರಾಜ್ ಆ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರಿಂದ ವಿಚಾರಣೆ ಎದುರಿಸುವಂತಾಗಿತ್ತು. ಆದರೆ ಈ ಪ್ರಕರಣದಲ್ಲಿ ಪ್ರಕಾಶ್ ರಾಜ್‌ಗೆ ಸಂಬಂಧವಿಲ್ಲ ಎಂದು ಖಾತ್ರಿಯಾಗಿತ್ತು.

ಇದೇ ವಿಚಾರವಾಗಿ ಇತ್ತೀಚೆಗೆ ಪ್ರಕಾಶ್ ರಾಜ್ ಟ್ವೀಟ್(ಎಕ್ಸ್) ಮಾಡಿದ್ದರು. "ತಮಿಳು ಅರ್ಥವಾಗದವರಿಗಾಗಿ. ತಮಿಳುನಾಡಿನ ಪ್ರಣವ್ ಜ್ಯುವೆಲರ್ಸ್ ಹಗರಣಕ್ಕೂ ಪ್ರಕಾಶ್ ರಾಜ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ವಿಚಾರಣೆ ನಡೆಸಿದ ತಂಡವೇ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ನನ್ನ ಬೆಂಬಲಕ್ಕೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದ" ಎಂದು ಬರೆದುಕೊಂಡಿದ್ದರು.

More from Filmibeat

English summary
I did some bad movies only for money Says prakash raj;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X