ಆಸ್ಪತ್ರೆಯಿಂದ ಗುಣಮುಖವಾಗಿ ಸೂಪರ್‌ಸ್ಟಾರ್ ರಜಿನಿಕಾಂತ್ ಮನೆಗೆ

ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟ ರಜಿನಿಕಾಂತ್ ಆಸ್ಪತ್ರೆಯಿಂದ ಮನೆಗೆ ವಾಪಸ್ಸಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರೋ ರಜಿನಿ ತಮ್ಮ ಮನೆಗೆ ಬಂದಿರುವ ಸುದ್ದಿ ತಿಳಿದು ಅಭಿಮಾನಿಗಳು ಖುಷಿಯಾಗಿದ್ದಾರೆ. ರಜಿನಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಅಭಿಮಾನಿಗಳಿಗೆ ಸಾಕಷ್ಟು ಆತಂಕ ಎದುರಾಗಿತ್ತು. ಆದಷ್ಟು ಬೇಗ ಗುಣಮುಖರಾಗಲಿ ಎಂದು ಪೂಜೆ, ಹರಕೆ ಮಾಡಿದ್ದ ಅಭಿಮಾನಿಗಳ ಕೋರಿಕೆ ಈಗ ಈಡೇರಿದೆ. ತಲೈವಾ ರಜಿನಿ ಗುಣಮುಖರಾಗಿರೋದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಅಕ್ಟೋಬರ್ 28ರಂದು ರಜಿನಿಕಾಂತ್‌ ಅವರಿಗೆ ಎದೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಲಾಗಿದ್ದರು. ಕೂಡಲೇ ಉತ್ತಮ ಚಿಕಿತ್ಸೆ ನೀಡಿದ ವೈದ್ಯರು ರಜಿನಿ ಅವರನ್ನು ತುಂಬಾ ಸೂಕ್ಷ್ಮವಾಗಿ ನೋಡಿಕೊಂಡು ಗುಣಮುಖರನ್ನಾಗಿ ಮಾಡಿದ್ದಾರೆ. ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಜಿನಿಕಾಂತ್ ಚೆಕ್‌ಅಪ್‌ಗೆ ಎಂದು ಬಂದಾಗ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡು ದಾಖಲಾಗಿದ್ದರು ಎಂದು ವೈದ್ಯರು ತಿಳಿಸಿದ್ದರು. ಹಾಗೇ ರಜಿನಿಕಾಂತ್‌ ಇತ್ತೀಚೆಗೆ ಒಂದು ಶಸ್ತ್ರ ಚಿಕಿತ್ಸೆಯನ್ನು ಕೂಡ ಮಾಡಿಸಿಕೊಂಡಿದ್ದರು.

ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ರಜಿನಿಕಾಂತ್ ಎಂದಿನಂತೆ ಆರೋಗ್ಯವಾಗಿದ್ದಾರೆ. ಇನ್ನು ರಜಿನಿಕಾಂತ್ ಮನೆಗೆ ವಾಪಾಸ್ಸಾದ ಬಳಿಕ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ರಜಿನಿಕಾಂತ್ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಮುಖ್ಯಮಂತ್ರಿ ಸ್ಟಾಲಿನ್ ಅವರು ರಜಿನಿಕಾಂತ್‌ ಅವರು ಈಗ ಚೇತರಿಸಿಕೊಣಡಿದ್ದಾರೆ. ಆತಂಕ ಪಡುವ ಅಗತ್ಯ ಇಲ್ಲ. ಇನ್ನು ಕೊಂಚದಿನ ಅವರು ವಿರಾಮ ಪಡೆದುಕೊಳ್ಳಬೇಕು ಎಂದು ವೈದ್ಯರು ತಿಳಿಸಿದ್ದಾರೆ. ನಂತರದಲ್ಲಿ ಎಂದಿನಂತೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.

Actor Rajinikanth discharged from Chennai Hospital

70 ವರ್ಷದ ರಜಿನಿಕಾಂತ್ ಅವರು ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕುಟುಂಬ ಸದಸ್ಯರು ಕೂಡ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿಯನ್ನು ನೀಡುತ್ತಲೇ ಬಂದಿದ್ದರು. ಅಭಿಮಾನಿಗಳು ಆತಂಕ ಪಡುವ ಅಗತ್ಯ ಇಲ್ಲ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಮಾಹಿತಿಯನ್ನು ನೀಡುತ್ತಿದ್ದರು. ಇನ್ನು ಕಾವೇರಿ ಆಸ್ಪತ್ರೆಯಿಂದ ಅಕ್ಟೋಬರ್ 30ರಂದು ಬಿಡುಗಡೆ ಮಾಡಿದ್ದ ಹೆಲ್ತ್‌ ಬುಲೆಟಿನ್‌ನಲ್ಲಿ ರಜಿನಿಕಾಂತ್ ಕೊಂಚ ಆಯಾಸದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ರಜಿನಿಕಾಂತ್ ಮೂರು ದಿನ ಚಿಕಿತ್ಸೆಯನ್ನು ಪಡೆದು ಈಗ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಡಿಸ್ಚಾರ್ಚ್ ಮಾಡಲಾಗಿದೆ ಎಂದು ತಿಳಿಸಲಾಗಿತ್ತು.

ಅಕ್ಟೋಬರ್ 29ಕ್ಕೆ ರಜಿನಿಕಾಂತ್ ಅವರಿಗೆ ಕಾವೇರಿ ಆಸ್ಪತ್ರೆಯಲ್ಲಿ ಕುತ್ತಿಗೆಯ ರಕ್ತನಾಳದ ಮರುಜೋಡಣೆ ಸರ್ಜರಿಯನ್ನು ಮಾಡಲಾಗಿತ್ತು. ಇದಾದ ಬಳಿಕ ಒಂದು ದಿನ ಅಲ್ಲೇ ಇದ್ದು ರೆಸ್ಟ್ ಪಡೆದುಕೊಂಡ ರಜಿನಿ, ನಂತರ ಮನೆಗೆ ವಾಪಾಸ್ಸ್ಆಗಿದ್ದಾರೆ.

ಮನೆಯಲ್ಲಿ ಪತ್ನಿ ಲತಾ ರಜಿನಿ ಅವರನ್ನು ಬರಮಾಡಿಕೊಂಡಿದ್ದಾರೆ. ಮನೆಗೆ ಬಂದ ಬಳಿಕ ಈ ವಿಚಾರವನ್ನು ರಜಿನಿಕಾಂತ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.ಸಾಮಾಜಿಕ ಜಾಲ ತಾಣದಲ್ಲಿ ನಾನು ಚೇತರಿಸಿಕೊಂಡು ಮನೆಗೆ ವಾಪಾಸ್ಸಾಗಿದ್ದೇನೆ. ಅಭಿಮಾನಿಗಳು ಆತಂಕ ಪಡಬೇಡಿ. ನನ್ನ ಆರೋಗ್ಯ ಚೇತರಿಕೆಗೆ ಬೇಡಿಕೊಂಡ ಎಲ್ಲರಿಗೂ ಧನ್ಯವಾದಗಳು. ಅಭಿಮಾನಿಗಳ ಪ್ರಾರ್ಥನೆಯಿಂದ ನಾನು ಬೇಗ ಚೇತರಿಸಿಕೊಂಡಿದ್ದೇನೆ. ಈಗ ಮನೆಗೆ ಬಂದಿದ್ದೇನೆ ವೈದ್ಯರು ತಿಳಿಸಿರುವಂತೆ ವಿರಾಮದಲ್ಲಿರುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಅಣ್ಣಾತೆ ರಿಲೀಸ್‌ಗೆ ತಯಾರಾಗಿದೆ. ನವೆಂಬರ್ 4ಕ್ಕೆ ಸಿನಿಮಾ ರಿಲೀಸ್‌ ಆಗುತ್ತಿದ್ದು ಅಭಿಮಾನಿಗಳು ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಅಣ್ಣಾತೈ ಸಿನಿಮಾದ ಬಗ್ಗೆ ರಜಿನಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ನೋಡಿ ಎಂದಿದ್ದಾರೆ. ಫ್ಯಾನ್ಸ್ ಕೂಡ ದೀಪಾವಳಿ ಹಬ್ಬದ ಸಂಭ್ರಮವನ್ನು ಅಣ್ಣಾತೆ ಸಿನಿಮಾ ನೋಡುತ್ತ ಸಂಭ್ರಮ ಪಡಲು ಕಾತುರರಾಗಿದ್ದಾರೆ. ಜೊತೆಗೆ ರಜಿನಿಕಾಂತ್ ಕೂಡ ಆರೋಗ್ಯದಲ್ಲಿ ಚೇತರಿಸಿಕೊಂಡಿರುವುದು ಮತ್ತಷ್ಟು ಖುಷಿ ತಂದಿದೆ.

More from Filmibeat

English summary
Superstar Rajinikanth discharged from chennai hospital after minor surgery. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X