For Quick Alerts
  ALLOW NOTIFICATIONS  
  For Daily Alerts

  ಐಕಾನ್ ಆಫ್ ಗೋಲ್ಡನ್ ಜುಬ್ಲಿ ಅವಾರ್ಡ್ ಪಡೆದ ನಟ ರಜನಿಕಾಂತ್

  |
  ಐಕಾನ್ ಆಫ್ ಗೋಲ್ಡನ್ ಜುಬ್ಲಿ ಅವಾರ್ಡ್ ಪಡೆದ ನಟ ರಜನಿಕಾಂತ್ | FILMIBEAT KANNADA

  ಸೂಪರ್ ಸ್ಟಾರ್ ರಜನಿಕಾಂತ್ ಐಕಾನ್ ಆಫ್ ಗೋಲ್ಡನ್ ಜುಬ್ಲಿ ಅವಾರ್ಡ್ ಪಡೆದಿದ್ದಾರೆ. ಗೋವಾ ಚಲನಚಿತ್ರೋತ್ಸವದಲ್ಲಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ.

  50ನೇ ಭಾರತೀಯ ಚಲನಚಿತ್ರೋತ್ಸವ ಗೋವಾದ ಪಣಿಜಿಯಲ್ಲಿ ನಡೆಯುತ್ತಿದೆ. ಡಾ ಶ್ಯಾಮಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ದೂರಿ ಕಾರ್ಯಕ್ರಮ ಜರುಗಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ದಿಗ್ಗಜ ನಟ ಅಮಿತಾಭ್ ಬಚ್ಚನ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

  'ನನ್ನನ್ನು ಕೇಸರಿ ಮಾಡಲು ಅನೇಕ ಪ್ರಯತ್ನಗಳು ನಡೆದವು, ಆದರೆ ಅವರ ಬಲೆಗೆ ಬೀಳಲಿಲ್ಲ: ರಜನಿಕಾಂತ್'ನನ್ನನ್ನು ಕೇಸರಿ ಮಾಡಲು ಅನೇಕ ಪ್ರಯತ್ನಗಳು ನಡೆದವು, ಆದರೆ ಅವರ ಬಲೆಗೆ ಬೀಳಲಿಲ್ಲ: ರಜನಿಕಾಂತ್

  ಅಮಿತಾಭ್ ಕೈ ನಿಂದ ಸ್ಪೆಷಲ್ ಐಕಾನ್ ಪ್ರಶಸ್ತಿಯನ್ನು ರಜನಿಕಾಂತ್ ಪಡೆದಿದ್ದಾರೆ. ತಮ್ಮ ಬೆಳವಣಿಗೆ ಕಾರಣವಾದ ನಿರ್ದೇಶಕ, ನಿರ್ಮಾಪಕ ಮತ್ತು ತಂತ್ರಜ್ಞರಿಗೆ ಅದನ್ನು ಸಲ್ಲಿಸಿದ್ದಾರೆ. ಜೊತೆಗೆ ಪ್ರಮುಖವಾಗಿ ಅಭಿಮಾನಿಗಳನ್ನು ಎಂದೂ ಕೂಡ ಮರೆಯಲಾರೆ ಎಂದಿದ್ದಾರೆ.

  2019ನೇ ಗೋವಾ ಚಲನಚಿತ್ರೋತ್ಸವ ಎಂಟು ದಿನಗಳ ಕಾಲ ನಡೆಯಲಿದೆ. 200ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನ ಆಗಲಿವೆ. 68 ದೇಶದ ಸಿನಿಮಾಗಳು ಭಾಗಿಯಾಗಲಿವೆ.

  ಚಿತ್ರರಂಗದ ಲೆಕ್ಕಾಚಾರ ಉಲ್ಟಾ ಮಾಡಿದ ರಜನಿಯ 'ದರ್ಬಾರ್' ಸಂಭಾವನೆ!ಚಿತ್ರರಂಗದ ಲೆಕ್ಕಾಚಾರ ಉಲ್ಟಾ ಮಾಡಿದ ರಜನಿಯ 'ದರ್ಬಾರ್' ಸಂಭಾವನೆ!

  ಭಾರತೀಯ ಪನೋರಮಾ ವಿಭಾಗದಲ್ಲಿ ಭಾರತೀಯ ಭಾಷೆಗಳ 22 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಈ ವಿಭಾಗದಲ್ಲಿ ಬಾಲಿವುಡ್​ನ ನಾಲ್ಕು ಸಿನಿಮಾಗಳು ಇದೆ. ಉಳಿದಂತೆ, ತುಳು, ತಮಿಳು. ಮರಾಠಿ, ಬಂಗಾಳಿ ಚಿತ್ರಗಳು ಪ್ರದರ್ಶನ ಆಗುತ್ತಿವೆ.

  English summary
  Actor Rajinikanth got icon of golden jubilee award in Goa film festival 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X