Don't Miss!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಕಾನ್ ಆಫ್ ಗೋಲ್ಡನ್ ಜುಬ್ಲಿ ಅವಾರ್ಡ್ ಪಡೆದ ನಟ ರಜನಿಕಾಂತ್
Recommended Video
ಸೂಪರ್ ಸ್ಟಾರ್ ರಜನಿಕಾಂತ್ ಐಕಾನ್ ಆಫ್ ಗೋಲ್ಡನ್ ಜುಬ್ಲಿ ಅವಾರ್ಡ್ ಪಡೆದಿದ್ದಾರೆ. ಗೋವಾ ಚಲನಚಿತ್ರೋತ್ಸವದಲ್ಲಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ.
50ನೇ ಭಾರತೀಯ ಚಲನಚಿತ್ರೋತ್ಸವ ಗೋವಾದ ಪಣಿಜಿಯಲ್ಲಿ ನಡೆಯುತ್ತಿದೆ. ಡಾ ಶ್ಯಾಮಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ದೂರಿ ಕಾರ್ಯಕ್ರಮ ಜರುಗಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ದಿಗ್ಗಜ ನಟ ಅಮಿತಾಭ್ ಬಚ್ಚನ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
'ನನ್ನನ್ನು ಕೇಸರಿ ಮಾಡಲು ಅನೇಕ ಪ್ರಯತ್ನಗಳು ನಡೆದವು, ಆದರೆ ಅವರ ಬಲೆಗೆ ಬೀಳಲಿಲ್ಲ: ರಜನಿಕಾಂತ್
ಅಮಿತಾಭ್ ಕೈ ನಿಂದ ಸ್ಪೆಷಲ್ ಐಕಾನ್ ಪ್ರಶಸ್ತಿಯನ್ನು ರಜನಿಕಾಂತ್ ಪಡೆದಿದ್ದಾರೆ. ತಮ್ಮ ಬೆಳವಣಿಗೆ ಕಾರಣವಾದ ನಿರ್ದೇಶಕ, ನಿರ್ಮಾಪಕ ಮತ್ತು ತಂತ್ರಜ್ಞರಿಗೆ ಅದನ್ನು ಸಲ್ಲಿಸಿದ್ದಾರೆ. ಜೊತೆಗೆ ಪ್ರಮುಖವಾಗಿ ಅಭಿಮಾನಿಗಳನ್ನು ಎಂದೂ ಕೂಡ ಮರೆಯಲಾರೆ ಎಂದಿದ್ದಾರೆ.
2019ನೇ ಗೋವಾ ಚಲನಚಿತ್ರೋತ್ಸವ ಎಂಟು ದಿನಗಳ ಕಾಲ ನಡೆಯಲಿದೆ. 200ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನ ಆಗಲಿವೆ. 68 ದೇಶದ ಸಿನಿಮಾಗಳು ಭಾಗಿಯಾಗಲಿವೆ.
ಚಿತ್ರರಂಗದ ಲೆಕ್ಕಾಚಾರ ಉಲ್ಟಾ ಮಾಡಿದ ರಜನಿಯ 'ದರ್ಬಾರ್' ಸಂಭಾವನೆ!
ಭಾರತೀಯ ಪನೋರಮಾ ವಿಭಾಗದಲ್ಲಿ ಭಾರತೀಯ ಭಾಷೆಗಳ 22 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಈ ವಿಭಾಗದಲ್ಲಿ ಬಾಲಿವುಡ್ನ ನಾಲ್ಕು ಸಿನಿಮಾಗಳು ಇದೆ. ಉಳಿದಂತೆ, ತುಳು, ತಮಿಳು. ಮರಾಠಿ, ಬಂಗಾಳಿ ಚಿತ್ರಗಳು ಪ್ರದರ್ಶನ ಆಗುತ್ತಿವೆ.