9 ವರ್ಷಗಳ ಬಳಿಕ ಅಖಿಲೇಶ್ ಯಾದವ್‌ರನ್ನು ಭೇಟಿಯಾದ ರಜನಿಕಾಂತ್

ತಲೈವಾ ರಜನಿಕಾಂತ್ ಅವರು ಭಾನುವಾರ ಲಕ್ನೋದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದಾರೆ. ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಅವರ ನಿವಾಸದಲ್ಲಿ ಇಬ್ಬರು ನಾಯಕರು ಭೇಟಿ ಮಾಡಿದ್ದಾರೆ. ರಜನಿಗೆ ಅಖಿಲೇಶ್ ಯಾದವ್ ಅಪ್ಪುಗೆಯ ಸ್ವಾಗತ ನೀಡಿದ್ದಾರೆ.

ರಜನಿಕಾಂತ್ ಆಗಸ್ಟ್ 19 ರಂದು ಉತ್ತರ ಪ್ರದೇಶದ ರಾಜಧಾನಿಗೆ ಲಕ್ನೋಗೆ ಬಂದಿಳಿದಿದ್ದರು. ಲಕ್ನೋದಲ್ಲಿನ ಬಿಜೆಪಿ ನಾಯಕರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೂಪರ್ ಸ್ಟಾರ್ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದರು. ಆಗಸ್ಟ್ 20 ರಂದು, ತಲೈವರ್ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.

Actor Rajinikanth meets Akhilesh Yadav after 9 years

ಸುದ್ದಿ ಸಂಸ್ಥೆ ಎಎನ್‌ಐ ಮಾಡಿರುವ ಟ್ವೀಟ್‌ನ ರಜನಿಕಾಂತ್ ಒಂಬತ್ತು ವರ್ಷಗಳ ನಂತರ ತಾವು ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡುತ್ತೊರುವುದಾಗಿ ಮಾತನಾಡಿದ್ದಾರೆ. ಅಖಿಲೇಶ್ ಯಾದವ್ ಕೂಡ ರಜನಿಕಾಂತ್ ಜೊತೆಗಿನ ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ರಜನಿಕಾಂತ್ ಸದ್ಯ ಲಕ್ನೋದಲ್ಲಿದ್ದಾರೆ. ಅಖಿಲೇಶ್ ಯಾದವ್ ಜೊತೆಗಿನ ಸಭೆ ಬಳಿಕ ಅಯೋಧ್ಯೆಗೆ ತೆರಳಲಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿದ ನಟ ರಜನಿಕಾಂತ್, "9 ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಾನು ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದೆ. ಅಂದಿನಿಂದ ನಾವು ಸ್ನೇಹಿತರಾಗಿದ್ದೇವೆ. ನಾವು ಆಗ್ಗಾಗೆ ಫೋನ್‌ನಲ್ಲಿ ಮಾತನಾಡುತ್ತೇವೆ. ಐದು ವರ್ಷಗಳ ಹಿಂದೆ ನಾನು ಶೂಟಿಂಗ್‌ಗಾಗಿ ಇಲ್ಲಿಗೆ ಬಂದಾಗ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ.ಈಗ ಅವರನ್ನು ಭೇಟಿಯಾದೆ" ಎಂದು ಹೇಳಿದ್ದಾರೆ.

ರಜನಿಕಾಂತ್ ಅವರು ಶನಿವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಲಕ್ನೋದ ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಬಳಿಕ ಯುಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಜೊತೆಗೆ ತಮ್ಮ ಜೈಲರ್ ಚಲನಚಿತ್ರ ವೀಕ್ಷಿಸಿದ್ದಾರೆ.

Actor Rajinikanth meets Akhilesh Yadav after 9 years

ಶನಿವಾರ ಲಕ್ನೋದಲ್ಲಿ 'ಜೈಲರ್' ವಿಶೇಷ ಪ್ರದರ್ಶನ ನಡೆದಿದ್ದು, ಸಿನಿಮಾ ನೋಡಿದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ರಜನಿಕಾಂತ್ ಅವರ ಅಭಿನಯವನ್ನು ಆನಂದಿಸಿದ್ದಾರೆ ಎಂದು ತಿಳಿಸಿದ್ದಾರೆ. "ನನಗೆ 'ಜೈಲರ್' ಚಲನಚಿತ್ರವನ್ನು ವೀಕ್ಷಿಸುವ ಅವಕಾಶ ಸಿಕ್ಕಿತು. ರಜನಿಕಾಂತ್ ಅವರ ಅನೇಕ ಚಲನಚಿತ್ರಗಳನ್ನು ನಾನು ನೋಡಿದ್ದೇನೆ, ಅವರ ಅಸಾಧಾರಣ ಪ್ರತಿಭೆಯನ್ನು ನಾನು ಮೆಚ್ಚಿದ್ದೇನೆ. ಚಲನಚಿತ್ರದಲ್ಲಿ ವ್ಯಾಪಕವಾದ ವಿಷಯದ ಕೊರತೆಯಿದ್ದರೂ, ಅವರ ಅಭಿನಯವು ಅದರ ಮಹತ್ವವನ್ನು ಹೆಚ್ಚಿಸುತ್ತದೆ" ಎಂದು ಉಪಮುಖ್ಯಮಂತ್ರಿ ಹೇಳಿದ್ದರು.

ರಾಂಚಿಯ ರಾಜಪ್ಪ ದೇವಸ್ಥಾನಕ್ಕೆ ರಜಿನಿಕಾಂತ್ ಭೇಟಿ

ಆಗಸ್ಟ್ 16-17 ರಂದು ರಜನಿಕಾಂತ್ ರಾಂಚಿಯಲ್ಲಿದ್ದರು. ತಮ್ಮ ಆತ್ಮೀಯ ಸ್ನೇಹಿತ ಮತ್ತು ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿದ ನಂತರ, ತಲೈವರ್ ಆಗಸ್ಟ್ 17 ರಂದು ದೇಶದ ಪ್ರಸಿದ್ಧ ಶಕ್ತಿ ಪೀಠವಾದ ರಾಜರಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ಚಿನ್ನಮಸ್ತ ದೇವಿಯ ಆಶೀರ್ವಾದ ಪಡೆದಿದ್ದರು.

ರಜನಿಕಾಂತ್ ಅವರು ರಾಜರಪ್ಪ ದೇವಸ್ಥಾನದೊಳಗೆ ಸ್ವಲ್ಪ ಸಮಯ ಕುಳಿತಿದ್ದರು. ದೇವಸ್ಥಾನದ ಅಭಿಮಾನಿಗಳು ಮತ್ತು ಅರ್ಚಕರು ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಆದರೆ, ರಜನಿಕಾಂತ್ ಅವರು ದೇವಾಲಯಕ್ಕೆ ಭೇಟಿ ನೀಡುತ್ತಾರೆ ಎಂಬ ಸುಳಿವು ಯಾರಿಗೂ ಇರಲಿಲ್ಲ. ಸೂಪರ್‌ಸ್ಟಾರ್‌ಗೆ ಹತ್ತಿರವಾಗಲು ಪೊಲೀಸರು ಯಾರಿಗೂ ಅವಕಾಶ ನೀಡಲಿಲ್ಲ ಎಂದು ವರದಿಯಾಗಿದೆ.

More from Filmibeat

English summary
Rajinikanth meets Akhilesh Yadav
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X