"ನಟಿ ಅಂಬಿಕಾ ಜೊತೆ ನಾನು ಎರಡನೇ ಮದುವೆ ಆಗಿಲ್ಲ"; ಬಾಂಬ್ ಸಿಡಿಸಿದ ತಮಿಳು ನಟ

ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳಿಗೆ ಬರವಿಲ್ಲ. ಕೆಲ ಅಂತೆ ಕಂತೆ ಸುದ್ದಿಗಳನ್ನು ಜನ ನಿಜ ಎಂದೇ ನಂಬಿಕೊಂಡಿದ್ದಾರೆ. ಸೆಲೆಬ್ರೆಟಿಗಳ ವೈಯಕ್ತಿಕ ಜೀವನದ ಬಗ್ಗೆ ಇಂತಹ ಸಾಕಷ್ಟು ಊಹಾಪೋಹ ಸುದ್ದಿಗಳು ಹರಿದಾಡುತ್ತಲೇ ಇದೆ. ಬಹುಭಾಷಾ ನಟಿ ಅಂಬಿಕಾ ಬಗ್ಗೆ ಇಂತಹ ಸುಳ್ಳು ಸುದ್ದಿವೊಂದನ್ನು ನಿಜ ಎಂದೇ ಸಾಕಷ್ಟು ಜನ ನಂಬಿದ್ದಾರೆ.

ಬಾಲನಟಿಯಾಗಿ 70ರ ದಶಕದಲ್ಲೇ ಚಿತ್ರರಂಗಕ್ಕೆ ಬಂದ ನಟಿ ಅಂಬಿಕಾ ಮುಂದೆ ನಾಯಕಿಯಾಗಿಯೂ ಮೋಡಿ ಮಾಡಿದ್ದಾರೆ. ಮಲಯಾಳಂ, ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ರಜನಿಕಾಂತ್, ಚಿರಂಜೀವಿ ಸೇರಿದಂತೆ ದಿಗ್ಗಜ ನಟರೊಟ್ಟಿಗೆ ತೆರೆಹಂಚಿಕೊಂಡು ಗೆದ್ದಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ.

Actor Ravikanth clarified about his second marriage with Actress Ambika

ಸದ್ಯ ಕಿರುತೆರೆಯಲ್ಲಿ ಅಂಬಿಕಾ ಬ್ಯುಸಿಯಾಗಿದ್ದಾರೆ. ಇನ್ನು ನಟಿ ಅಂಬಿಕಾ ಎರಡು ಮದುವೆ ಆಗಿದ್ದಾರೆ ಎನ್ನುವ ಸುದ್ದಿಯೊಂದು ಬಹಳ ದಿನಗಳಿಂದ ಚಾಲ್ತಿಯಲ್ಲಿದೆ. ವಿಕಿಪಿಡಿಯಾದಲ್ಲಿ ಕೂಡ ಇದೇ ವಿಚಾರವನ್ನು ನಮೂದಿಸಲಾಗಿದೆ. 1988ರಲ್ಲಿ ಎನ್‌ಆರ್‌ಐ ಪ್ರೇಮ್‌ಕುಮಾರ್ ಜೊತೆ ಅಂಬಿಕಾ ಮದುವೆ ನಡೆದಿತ್ತು, ದಂಪತಿಗೆ ಇಬ್ಬರು ಮಕ್ಕಳು, ಭಿನ್ನಾಭಿಪ್ರಾಯಗಳಿಂದ ಇಬ್ಬರು ಡಿವೋರ್ಸ್ ಪಡೆದರು, ಬಳಿಕ ನಟ ರವಿಕಾಂತ್ ಜೊತೆ 2ನೇ ಮದುವೆ ಆಗಿದ್ದಾರೆ ಎಂದು ಸುದ್ದಿ ಆಗುತ್ತಿದೆ.

ಖುದ್ದು ನಟ ರವಿಕಾಂತ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಸುಳ್ಳು ಸುದ್ದಿ ಹರಡುವುದು ನಿಲ್ಲಿಸಿ ಎಂದು ಕೆಂಡಾಮಂಡಲವಾಗಿದ್ದಾರೆ. "ನಾನು ಅಂಬಿಕಾ 2ನೇ ಪತಿ ಎಂದು ಸುದ್ದಿ ಆಗುತ್ತಿದೆ. ನಾವಿಬ್ಬರು ಒಂದಷ್ಟು ಸಿನಿಮಾಗಳಲ್ಲಿ ಗಂಡ-ಹೆಂಡತಿ ಆಗಿ ನಟಿಸಿದ್ದೀವಿ. ಅಷ್ಟಕ್ಕೇ ನಿಜವಾಗಿಯೂ ಗಂಡ-ಹೆಂಡತಿ ಆಗಿಬಿಡ್ತೀವಾ? ಎಂದು ಪ್ರಶ್ನಿಸಿದ್ದಾರೆ.

Actor Ravikanth clarified about his second marriage with Actress Ambika

ಇಬ್ಬರೂ ಒಂದೇ ಏರಿಯಾದಲ್ಲಿ ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದೆವು. ಹಾಗಾಗಿ ಶೂಟಿಂಗ್ ಸಮಯದಲ್ಲಿ ಒಂದೇ ಕಾರಿನಲ್ಲಿ ಸೆಟ್‌ಗೆ ಹೋಗುತ್ತಿದ್ದೆವು. ಶೂಟಿಂಗ್ ಸ್ಥಳಕ್ಕೆ ಹೋಗುತ್ತಿದ್ದಂತೆ ಗಂಡ-ಹೆಂಡತಿ ಬಂದರು ಬನ್ನಿ ಚಿತ್ರೀಕರಣ ಶುರುಮಾಡೋಣ ಎನ್ನುತ್ತಿದ್ದರು. ಇದನ್ನೇ ನಿಜ ಎಂದು ಬಹಳ ಜನ ಅಂದುಕೊಂಡುಬಿಟ್ಟಿದ್ದಾರೆ. ಆದರೆ ನಾವಿಬ್ಬರು ಮದುವೆ ಆಗಿಲ್ಲ.

ಪ್ರೇಮ್‌ಕುಮಾರ್ ಎಂಬುವವರನ್ನು ಮದುವೆಯಾಗಿ ಅಂಬಿಕಾ ಅಮೆರಿಕಾದಲ್ಲಿದ್ದರು. ದಂಪತಿಗೆ ರಾಮ್‌ಕೇಶವ್, ರಿಷಿಕೇಶ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇನ್ನು ಶೂಟಿಂಗ್ ಇದ್ದಾಗ ಆಕೆ ಇಲ್ಲಿಗೆ ಬಂದು ಹೋಗುತ್ತಿದ್ದರು. ಅಷ್ಟೇ, ನಾವಿಬ್ಬರು ಮದುವೆ ಆಗಿಲ್ಲ. ನಾನು ಆಕೆಯ ಗಂಡ ಅಲ್ಲ, ಎಂದು ರವಿಕಾಂತ್ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಇದನ್ನೇ ಕೆಲವರು ನಂಬಿಕೊಂಡಿದ್ದಾರೆ. ನಾವು ಎಲ್ಲರ ಬಳಿಕ ಹೋಗಿ ಯಾವುದು ನಿಜ, ಯಾವುದು ಸುಳ್ಳು ಎಂದು ತಿಳಿ ಹೇಳುವುದಕ್ಕೆ ಆಗಲ್ಲ ಎಂದಿದ್ದಾರೆ.

ಅಂಬಿಕಾ ಅವರನ್ನು ಮದುವೆ ಆಗಿ ರವಿಕಾಂತ್ ಡಿವೋರ್ಸ್ ಪಡೆದಿದ್ದಾರೆ ಎಂದು ಕೂಡ ವಿಕಿಪಿಡಿಯಾದಲ್ಲಿ ಬರೆಯಲಾಗಿದೆ. ತಮಳು ನಟ ರವಿ ಶ್ರೀನಿವಾಸನ್ ಚಿತ್ರರಂಗದಲ್ಲಿ ರವಿಕಾಂತ್ ಎಂದು ಗುರ್ತಿಸಿಕೊಂಡರು. 'ಮನತ್ತಿಲ್ ಉರುತಿ ವೆಂಡಂ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ 'ಪಾತಿಮೂನಂ ನಂಬರ್ ವೀಡು', 'ಚಿನ್ನ ಮುತ್ತು', 'ಅಭಿಮನ್ಯು', 'ಸ್ವಯಂವರಂ', 'ಆಂಜನೇಯ', 'ಸರೋಜ' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇನ್ನು ನಟಿ ಅಂಬಿಕಾ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕೊನೆಯದಾಗಿ 'ಕಾಫಿ ತೋಟ' ಹಾಗೂ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾಗಳಲ್ಲಿ ನಟಿಸಿದ್ದರು.

More from Filmibeat

English summary
Tamil actor Ravikanth reacts on fake news abour second marriage with Ambika;
Read more about: ambika tamil kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X