ಕಿಕ್, ರೇಸುಗುರ್ರಂ ಸಿನಿಮಾ ಖ್ಯಾತಿಯ ನಟ ಶಾಮ್ ಬಂಧನ

ತೆಲುಗಿನ ಕಿಕ್, ರೇಸುಗುರ್ರಂ ಇನ್ನೂ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಕಿಕ್ ಶಾಮ್ ಅಲಿಯಾಸ್ ಶಮ್ಶುದ್ದೀನ್ ಇಬ್ರಾಹಿಂ ಅನ್ನು ಚೆನ್ನೈ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

Recommended Video

Aishwarya Rai ಗೆ ಸಂತಸದ ಸುದ್ದಿ! | Filmibeat Kannada

ಶಮ್ಶುದ್ದೀನ್ ಇಬ್ರಾಹಿಂ ಜೊತೆಗೆ ಒಟ್ಟು 11 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇವರುಗಳ ಮೇಲೆ ಅಕ್ರಮವಾಗಿ ಜೂಜು ಆಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಶಾಮ್ ತಮ್ಮ ನಿವಾಸದಲ್ಲಿಯೇ ಜೂಜು ಆಡಿಸುತ್ತಿದ್ದರಂತೆ. ಹಲವರನ್ನು ಜೂಜು ಅಡ್ಡೆಗೆ ಆಹ್ವಾನಿಸಿದ್ದರಂತೆ. ಇದರ ಖಚಿತ ಮಾಹಿತಿ ಪಡೆದ ಪೊಲೀಸರು ಮನೆ ಮೇಲೆ ದಾಳಿ ಮಾಡಿ ನಟ ಶಾಮ್ ಸೇರಿದಂತೆ 11 ಮಂದಿಯನ್ನು ಬಂಧಿಸಿದ್ದಾರೆ.

ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಜೂಜು ಆಡಿಸಿದ್ದಾರೆ

ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಜೂಜು ಆಡಿಸಿದ್ದಾರೆ

ನುಂಗಬಕ್ಕಮ್ ಎಂಬಲ್ಲಿ ಶಾಮ್ ತನ್ನ ಒಡೆತನದ ಅಪಾರ್ಟ್‌ಮೆಂಟ್‌ನಲ್ಲಿ ಹಲವರನ್ನು ಕರೆದು ಜೂಜು ಆಡುತ್ತಿದ್ದಂತೆ. ಶಾಮ್ ಜೊತೆಗೆ ಬಂಧಿತರಾದವರಲ್ಲಿ ಸಿನಿಮಾ ನಟರೇ ಹೆಚ್ಚಿದ್ದಾರೆ ಎನ್ನಲಾಗುತ್ತಿದೆ.

ಫೋಕರ್ ಎಂಬ ಕ್ಲಬ್ ಸ್ಥಾಪಿಸಿರುವ ಶಾಮ್

ಫೋಕರ್ ಎಂಬ ಕ್ಲಬ್ ಸ್ಥಾಪಿಸಿರುವ ಶಾಮ್

ಶಾಮ್ 'ಫೋಕರ್' ಎಂಬ ಕ್ಲಬ್ ಸ್ಥಾಪಿಸಿ ಅದರ ಮೂಲಕ ಜೂಜು ಆಡಿಸುತ್ತಿದ್ದರಂತೆ. ಜೂಜು ಮಾತ್ರವಲ್ಲದೆ ಇನ್ನೂ ಕೆಲವು ಕಾನೂನು ವಿರುದ್ಧ ಕಾರ್ಯಗಳನ್ನು ಈ ಕ್ಲಬ್ ಸದಸ್ಯರು ಮಾಡಿರಬಹುದಾದ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ

ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ

ವಾಹನ, ಹಣ, ಮೊಬೈಲ್ ಜೊತೆಗೆ ಜೂಜು ಆಡಲು ವಿತರಿಸಿದ್ದ ಟೋಕನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆಯೆಂದು ಸ್ಥಳೀಯ ಮಾಧ್ಯಗಳಿಗೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಯಶ್ ಜೊತೆಗೆ ನಟಿಸಿರುವ ಶಾಮ್

ಯಶ್ ಜೊತೆಗೆ ನಟಿಸಿರುವ ಶಾಮ್

ಶಾಮ್ ತಮಿಳಿನ ಹಲವು ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ಕಿಕ್, ರೇಸುಗುರ್ರಂ ಸೇರಿದಂತೆ ಇನ್ನೂ ಹಲವು ಸಿನಿಮಾಗಳು ಅವರಿಗೆ ಹೆಚ್ಚಿನ ಹೆಸರು ತಂದುಕೊಟ್ಟಿದ್ದವು. ಕನ್ನಡದಲ್ಲಿ ಗೇಮ್ ಮತ್ತು ಯಶ್ ಅಭಿನಯದ ಸಂತು ಸ್ಟ್ರೈಟ್ ಫಾರ್ವಡ್ ಸಿನಿಮಾದಲ್ಲಿ ಶಾಮ್ ನಟಿಸಿದ್ದಾರೆ. ಪ್ರಸ್ತುತ ಇನ್ನೊಂದು ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ.

More from Filmibeat

English summary
Actor Shamshuddin Ibrahim arrested in Chennai for conducting illegal gambling. 11 other people also arrested.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X