For Quick Alerts
  ALLOW NOTIFICATIONS  
  For Daily Alerts

  ಕೊಲೆ ಬೆದರಿಕೆ ಇದ್ದರೂ ಪೊಲೀಸ್ ಭದ್ರತೆ ಬೇಡವೆಂದ ನಟ ಸಿದ್ಧಾರ್ಥ್

  |

  ತಮಿಳು ನಟ ಸಿದ್ಧಾರ್ಥ್‌ಗೆ ಹಲವಾರು ಮಂದಿ ದೂರವಾಣಿ ಮೂಲಕ ಕೊಲೆ ಬೆದರಿಕೆಗಳನ್ನು ಹಾಕಿದ್ದಾರೆ. ಸಿದ್ಧಾರ್ಥ್‌ ಕುಟುಂಬಕ್ಕೆ ಅತ್ಯಾಚಾರ ಬೆದರಿಕೆಗಳನ್ನು ಸಹ ಹಾಕಿದ್ದಾರೆ.

  ಕೇಂದ್ರ ಸರ್ಕಾರವನ್ನು ಟೀಕಿಸಿದ್ದಕ್ಕೆ ಬೆದರಿಕೆ ಕರೆ:ಪೊಲಿಸ್ ಭದ್ರತೆ ನಿರಾಕರಿಸಿದ ನಟ ಸಿದ್ಧಾರ್ಥ್ | Filmibeat

  ಈ ಬಗ್ಗೆ ಟ್ವೀಟ್ ಮಾಡಿದ್ದ ಸಿದ್ಧಾರ್ಥ್, 'ಬಿಜೆಪಿ ಐಟಿ ಸೆಲ್‌ನವರು ನನ್ನ ಮೊಬೈಲ್ ಸಂಖ್ಯೆ ಬಹಿರಂಗಗೊಳಿಸಿದ್ದಾರೆ. ನೂರಾರು ಮಂದಿ ನನಗೆ ಕರೆ ಮಾಡಿ ಕೊಲೆ ಬೆದರಿಕೆಗಳು, ನನ್ನ ಕುಟುಂಬಕ್ಕೆ ಅತ್ಯಾಚಾರ ಬೆದರಿಕೆ ಹಾಕಿದ್ದಾರೆ. ಅವರ ಸಂಖ್ಯೆಗಳನ್ನೆಲ್ಲಾ ಸೇರಿಸಿ ಪೊಲೀಸರಿಗೆ ದೂರು ನೀಡುತ್ತೇನೆ' ಎಂದಿದ್ದರು.

  ಸಿದ್ಧಾರ್ಥ್‌ಗೆ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ಸಿದ್ಧಾರ್ಥ್‌ಗೆ ಭದ್ರತೆ ಒದಗಿಸುವುದಾಗಿ ಹೇಳಿದ್ದಾರೆ. ಆದರೆ ಸಿದ್ಧಾರ್ಥ್‌ ಅವರು ಭದ್ರತೆಯನ್ನು ನಿರಾಕರಿಸಿದ್ದಾರೆ.

  ಈ ಬಗ್ಗೆ ಟ್ವೀಟ್‌ ಮಾಡಿರುವ ಸಿದ್ಧಾರ್ಥ್, 'ಭದ್ರತೆ ಒದಗಿಸುತ್ತೇನೆ ಎಂದ ನಿಮ್ಮ ಆಫರ್‌ಗೆ ಧನ್ಯವಾದಗಳು ತಮಿಳುನಾಡು ಪೊಲೀಸ್. ನಮ್ಮ ಕುಟುಂಬದಲ್ಲಿ ಹೀಗೆ ಪೊಲೀಸ್ ಭದ್ರತೆ ಒದಗಿಸಲ್ಪಟ್ಟ ಮೊದಲ ವ್ಯಕ್ತಿ ನಾನೇ. ಆದರೆ ನನಗೆ ಭದ್ರತೆ ಬೇಡ, ನನಗೆ ಭದ್ರತೆ ಒದಗಿಸಲು ನಿಯೋಜಿಸುವ ಅಧಿಕಾರಿಗಳನ್ನು ಈ ಕೊರೊನಾದ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ಸೇವೆಗೆ ಬಳಸಿಕೊಳ್ಳಿ' ಎಂದಿದ್ದಾರೆ ಸಿದ್ಧಾರ್ಥ್.

  ಸಿದ್ಧಾರ್ಥ್ ಅವರು ಕೇಂದ್ರ ಸರ್ಕಾರವನ್ನು ಬಹುವಾಗಿ ಟೀಕಿಸುತ್ತಿರುತ್ತಾರೆ ಹಾಗಾಗಿ ಅವರ ವಿರುದ್ಧ ಬಿಜೆಪಿ ಪ್ರೇಮಿಗಳು ಮುಗಿಬಿದ್ದಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿದ್ಧಾರ್ಥ್ ಅವರ ಮೊಬೈಲ್ ಸಂಖ್ಯೆ ಬಹಿರಂಗಗೊಂಡಿತ್ತು ಹಾಗಾಗಿ ಅವರಿಗೆ ನೂರಾರು ಬೆದರಿಕೆ ಕರೆಗಳು ಬಂದಿದ್ದವು.

  English summary
  Actor Siddharth refuses police protection offered by Tamil Nadu police. Siddharth receives death threats.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X