For Quick Alerts
  ALLOW NOTIFICATIONS  
  For Daily Alerts

  ಬಿಜೆಪಿ ಐಟಿ ಸೆಲ್ ನಿಂದ ನನ್ನ ನಂಬರ್ ಲೀಕ್, ಅತ್ಯಾಚಾರ ಬೆದರಿಕೆ ಕರೆಗಳು ಬರುತ್ತಿವೆ; ಸಿದ್ಧಾರ್ಥ್ ಆಕ್ರೋಶ

  |

  ದಕ್ಷಿಣ ಭಾರತದ ಖ್ಯಾತ ನಟ ಸಿದ್ಧಾರ್ಥ್ ತನ್ನ ಫೋನ್ ನಂಬರ್ ಅನ್ನು ತಮಿಳುನಾಡು ಬಿಜೆಪಿ ಸದಸ್ಯರು ಮತ್ತು ಬಿಜೆಪಿ ಐಟಿ ಸೆಲ್ ಲೀಕ್ ಮಾಡಿದೆ ಎಂದು ಆರೋಪ ಮಾಡಿದ್ದಾರೆ. ಇದರಿಂದ ನನಗೆ 500ಕ್ಕೂ ಹೆಚ್ಚು ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ.

  ಈ ಬಗ್ಗೆ ಟ್ವೀಟ್ ಮಾಡಿರುವ ನಟ ಸಿದ್ಧಾರ್ಥ, 'ನನ್ನ ಫೋನ್ ನಂಬರ್ ಅನ್ನು ತಮಿಳುನಾಡು ಬಿಜೆಪಿ ಸದಸ್ಯರು ಮತ್ತು ತಮಿಳುನಾಡು ಬಿಜೆಪಿ ಐಟಿ ಸೆಲ್ ಲೀಕ್ ಮಾಡಿದೆ. ಕಳೆದ 24 ಗಂಟೆಯಲ್ಲಿ ನನಗೆ 500ಕ್ಕೂ ಹೆಚ್ಚು ಕರೆಗಳು ಬಂದಿದ್ದು, ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ. ಎಲ್ಲಾ ನಂಬರ್ ಗಳ ದಾಖಲೆಗಳನ್ನು ಪೊಲೀಸರಿಗೆ ನೀಡುತ್ತಿದ್ದೀನಿ. ನಾನು ಬಾಯಿಮುಚ್ಚುಕೊಂಡು ಸುಮ್ಮನೆ ಇರಲ್ಲ. ನನ್ನ ಪ್ರಯತ್ನ ಮಾಡುತ್ತಿರುತ್ತೇನೆ' ಎಂದು ಹೇಳಿದ್ದಾರೆ.

  ಮತ್ತೊಂದು ಟ್ವೀಟ್ ಮಾಡಿ, 'ತಮಿಳುನಾಡು ಬಿಜೆಪಿ ಸದಸ್ಯರು ನಿನ್ನೆ ನನ್ನ ಸಂಖ್ಯೆಯನ್ನು ಸೇರಿಕೆ ಮಾಡಿ, ನನ್ನ ಮೇಲೆ ಹಲ್ಲೆ ಮತ್ತು ಕಿರುಕುಳ ನೀಡುವಂತೆ ಹೇಳಿದ್ದಾರೆ. ನಾವು ಕೋವಿಂಡ್ ಯಿಂದ ಬದುಕಬಹುದು ಆದರೆ ಈ ಇಂಥ ಜನರಿಂದ ಬದುಕಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ 'ಈ ವ್ಯಕ್ತಿಯನ್ನು ಮತ್ತೆ ಬಾಯಿತೆರೆಯದಂತೆ ಮಾಡಬೇಕು' ಎಂದು ಕಾಮೆಂಟ್ ಮಾಡಿರುವ ಸಂದೇಶದ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿದ್ದಾರೆ.

  'ಸ್ಟ್ಯಾಂಡ್ ವಿತ್ ಸಿದ್ಧಾರ್ಥ್' ಟ್ರೆಂಡ್

  ನಟ ಸಿದ್ಧಾರ್ಥ್ ಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ಟ್ವಿಟ್ಟರ್ ನಲ್ಲಿ 'ಐ ಸ್ಟ್ಯಾಂಡ್ ವಿತ್ ಸಿದ್ಧಾರ್ಥ್' ಎಂದು ಟ್ರೆಂಡ್ ಆಗುತ್ತಿದೆ. ಅನೇಕ ಜನ ಸೆಲೆಬ್ರಿಟಿಗಳು ಕಾಮೆಂಟ್ ಮಾಡಿ ಬೆಂಬಲ ನೀಡುತ್ತಿದ್ದಾರೆ. ಬಾಲಿವುಡ್ ನಟಿ ಅದಿತಿ ರಾವ್ ಕಾಮೆಂಟ್ ಮಾಡಿ, ನಿಮಗೆ ಹೆಚ್ಚು ಧೈರ್ಯ, ಶಕ್ತಿ ಬರಲಿ ಸಿದ್ಧಾರ್ಥ್ ಗೆ ನನ್ನ ಬೆಂಬಲ ಎಂದು ಹೇಳಿದ್ದಾರೆ.

  ಮುಂಬೈ ಏರ್ ಪೋರ್ಟ್ ನಲ್ಲಿ ಊರ್ವಶಿಯ ಡ್ರೆಸ್ ಗೆ ಗಾಳಿ ಕೊಟ್ಟ ಕಾಟ ಅಷ್ಟಿಷ್ಟಲ್ಲ | Filmibeat Kannada

  ನಟ ಸಿದ್ಧಾರ್ಥ್ ಆಡಳಿತ ಪಕ್ಷದ ನಿಲುವುಗಳನ್ನು ಪ್ರಶ್ನಿಸಿ ಯಾವಾಗಲು ಧ್ವನಿ ಎತ್ತುತ್ತಿರುತ್ತಾರೆ. ಇತ್ತೀಚಿಗಷ್ಟೆ ಕೋವಿಡ್ ನಿಯಂತ್ರಿಸಲು ವಿಫಲವಾಗಿರುವ ಕೇಂದ್ರ ಸರ್ಕಾರವನ್ನು ಸಿದ್ಧಾರ್ಥ್ ಟೀಕಿಸಿದ್ದರು.

  English summary
  Actor Siddharth says My phone number was leaked by members of Tamil Nadu BJP and BJP IT cell.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X