For Quick Alerts
  ALLOW NOTIFICATIONS  
  For Daily Alerts

  ಹಲವು ದಿನಗಳ ನಂತರ ಮತ್ತೆ ರೊಮ್ಯಾನ್ಸ್ ಚಿತ್ರದ ಕಡೆ ಎಂದು ಆಶಿಕಾ ಫೋಟೊ ಹಂಚಿಕೊಂಡ ಸಿದ್ಧಾರ್ಥ್

  |

  ನಟಿ ಆಶಿಕಾ ರಂಗನಾಥ್ 2016ರಲ್ಲಿ ತೆರೆಕಂಡ ಕ್ರೇಜಿ ಬಾಯ್ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಈ ಚಿತ್ರದಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದ ಆಶಿಕಾ ರಂಗನಾಥ್ ನಂತರ ಶಿವ ರಾಜ್‌ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲಿ ಪೋಷಕ ಪಾತ್ರ ನಿರ್ವಹಿಸಿದ್ದರು. ಹೀಗೆ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಸಹ ಸಿಗದಿದ್ದ ಐಡೆಂಟಿಟಿಯನ್ನು ನಟಿ ಆಶಿಕಾ ರಂಗನಾಥ್‌ಗೆ ತಂದುಕೊಟ್ಟ ಸಿನಿಮಾ ಮುಗುಳುನಗೆ.

  ಹೌದು, ಮುಗುಳುನಗೆ ಮೂಲಕ ಬೇಡಿಕೆ ಹೆಚ್ಚಿಸಿಕೊಂಡ ನಟಿ ಆಶಿಕಾ ರಂಗನಾಥ್ ಇಲ್ಲಿಯವರೆಗೂ ಕನ್ನಡ ಹೊರತುಪಡಿಸಿ ಉಳಿದ ಯಾವುದೇ ಚಿತ್ರರಂಗಕ್ಕೂ ಸಹ ಕಾಲಿಟ್ಟಿರಲಿಲ್ಲ. ಆದರೆ ಇದೀಗ ತಮಿಳಿನ ಕಡೆ ಮುಖ ಮಾಡಿರುವ ಆಶಿಕಾ ನಟ ಸಿದ್ಧಾರ್ಥ್ ಸಿನಿಮಾದ ಮೂಲಕ ಕಾಲಿವುಡ್ ಪ್ರವೇಶಿಸಲು ಮುಂದಾಗಿದ್ದಾರೆ. ಈ ಕುರಿತಾಗಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸೆಪ್ಟೆಂಬರ್ 15ರಂದು ಪೋಸ್ಟ್ ಹಂಚಿಕೊಂಡಿದ್ದ ಆಶಿಕಾ ತನ್ನ ನೆಚ್ಚಿನ ನಟರಲ್ಲಿ ಓರ್ವರಾದ ಸಿದ್ಧಾರ್ಥ್ ಜತೆ ನಟಿಸಲು ತುಂಬಾ ಉತ್ಸುಕಳಾಗಿದ್ದೇನೆ ಎಂದು ಬರೆದುಕೊಂಡಿದ್ದರು.

  ಆಶಿಕಾ ಈ ಪೋಸ್ಟ್‌ನಲ್ಲಿ ತನ್ನ ಮೊದಲ ತಮಿಳು ಸಿನಿಮಾದ ಮುಹೂರ್ತ ಸಮಯದ ಸಿದ್ಧಾರ್ಥ್ ಜತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದರು. ಈ ಫೋಟೊಗಳನ್ನು ಇದೀಗ ನಟ ಸಿದ್ಧಾರ್ಥ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಶೇರ್ ಮಾಡಿದ್ದು ತುಂಬಾ ದಿನಗಳ ನಂತರ ರೊಮ್ಯಾನ್ಸ್ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ ಹಾಗೂ ಆಶಿಕಾ ರಂಗನಾಥ್ ಅವರನ್ನು ಈ ಸ್ಟೋರಿಯಲ್ಲಿ ಉಲ್ಲೇಖಿಸಿ ಹುರಿದುಂಬಿಸಿದ್ದಾರೆ.

  ಸಿದ್ಧಾರ್ಥ್ ಕುರಿತು ಹೊಗಳಿದ್ದ ಆಶಿಕಾ: ಮುಹೂರ್ತದ ಚಿತ್ರಗಳನ್ನು ಹಂಚಿಕೊಂಡು ತನ್ನ ಮೊದಲ ತಮಿಳು ಸಿನಿಮಾದ ಕುರಿತು ಮಾಹಿತಿ ನೀಡಿದ್ದ ಆಶಿಕಾ ರಂಗನಾಥ್ ನೆಚ್ಚಿನ ನಟರಲ್ಲಿ ಓರ್ವರಾದ ಸಿದ್ಧಾರ್ಥ್ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ಅವಕಾಶ ಸಿಗುತ್ತಿರುವುದು ಖುಷಿಯ ವಿಚಾರ ಎಂದಿದ್ದರು. ಸಿದ್ಧಾರ್ಥ್ ಅಭಿನಯದ 'ಬೊಮ್ಮರಿಲ್ಲು' ಹಾಗೂ 'ನುವ್ವೊಸ್ತಾನಂಟೆ ನೇನೊದ್ದಂಟಾನಾ' ಚಿತ್ರಗಳನ್ನು ಎಷ್ಟು ಬಾರಿ ನೋಡಿದ್ದೇನೆ ಎಂಬುದೇ ಲೆಕ್ಕವಿಲ್ಲ ಎಂದು ಬರೆದುಕೊಂಡಿದ್ದ ಆಶಿಕಾ ರಂಗನಾಥ್ ಸಿದ್ಧಾರ್ಥ್ ಜತೆ ನಟಿಸುತ್ತಿರುವುದು ತುಂಬಾ ವಿಶೇಷ ಎಂದಿದ್ದರು.

  English summary
  Tamil Actor Siddharth shared pic with Ashika Ranganath from his next tamil movie muhurta. Take a look
  Monday, September 19, 2022, 17:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X