twitter
    For Quick Alerts
    ALLOW NOTIFICATIONS  
    For Daily Alerts

    ಎಂಎಸ್ ಧೋನಿ, ವಿರಾಟ್ ಕಾಲೆಳೆದ ನಟ ಸಿದ್ದಾರ್ಥ್

    By ರವೀಂದ್ರ ಕೊಟಕಿ
    |

    ಇತ್ತೀಚೆಗೆ ಬಾಲಿವುಡ್ ನಟ ಸಿದ್ದಾರ್ಥ್ ಶುಕ್ಲ ನಿಧನ ಹೊಂದಿದಾಗ ತಮಿಳು ನಟ ಸಿದ್ದಾರ್ಥ್ ಅವರ ಮುಖ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿ ಅನೇಕರು ಶ್ರದ್ಧಾಂಜಲಿ ಅರ್ಪಿಸಿ, ಟ್ರೋಲ್ ಮಾಡಿದ್ದರು. 'ಇದು ಉದ್ದೇಶಪೂರ್ವಕವಾಗಿ ಮಾಡಿದ ಅವಮಾನ. ನಾನು ದೇಶದಲ್ಲಿನ ಅಸಹಿಷ್ಣತೆ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಪ್ರತಿಯಾಗಿ ನನ್ನ ಫೋಟೋ ಹಾಕಿ ಶ್ರದ್ಧಾಂಜಲಿ ಅರ್ಪಿಸಿ, ಟ್ರೋಲ್ ಮಾಡುವ ಕೆಲಸ ಮಾಡುತ್ತಿದ್ದಾರೆ' ಅಂತ ಸಿದ್ದಾರ್ಥ್ ನೇರವಾಗಿ ಆರೋಪಿಸಿದ್ದರು.

    ಈಗ ಇದೇ 'ರಂಗದೇ ಬಸಂತಿ' ನಟ ಮತ್ತೆ ಸುದ್ದಿಯಲ್ಲಿದ್ದಾರೆ. ಶಂಕರ್ ಅವರ 'ಬಾಯ್ಸ್' ಚಿತ್ರದಿಂದ ನಾಯಕನಟನಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಸಿದ್ದಾರ್ಥ್, ತೆಲುಗಿನಲ್ಲಿ ಪ್ರಭುದೇವ ನಿರ್ದೇಶನದ 'ನುವಸ್ತಾನಂಟೆ ನೇನೋದ್ದಂಟಾನಾ' ಚಿತ್ರದ ಮೂಲಕ ಸ್ಟಾರ್ ನಟನಾಗಿ ಬೆಳಕಿಗೆ ಬಂದರು. ಬಾಲಿವುಡ್ ನಲ್ಲಿ ಕೂಡ ಅಮೀರ್ ಖಾನ್ ಅವರ ಜೊತೆ 'ರಂಗದೇ ಬಸಂತಿ" ಯಲ್ಲಿ ನಟಿಸುವ ಮೂಲಕ ದೇಶದ ಗಮನ ಸೆಳೆದಿದ್ದರು. ಆದರೆ ಬಾಲಿವುಡ್ ನಲ್ಲಿ ಹೆಚ್ಚಿನ ಅವಕಾಶಗಳು ಸಿಗದೆ ಮತ್ತೆ ಸೌತ್ ಕಡೆ ಮುಖ ಮಾಡಿದ ಸಿದ್ದಾರ್ಥ್ ಪ್ರಸ್ತುತ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.ಆದರೆ ದಶಕದ ಹಿಂದೆ ಇದ್ದ ಕ್ರೇಜ್ ಈಗ ಉಳಿದಿಲ್ಲ. ಕಳೆದ ಹತ್ತು ವರ್ಷಗಳಿಂದ ಹೇಳಿಕೊಳ್ಳುವಂಥ ಯಾವುದೇ ಯಶಸ್ಸು ಕೂಡ ಸಿಕ್ಕಿಲ್ಲ.

    ಒಂದೆಡೆ ಸಿನಿಮಾದಲ್ಲಿ ಹೇಳಿಕೊಳ್ಳುವಂಥ ಯಶಸ್ಸನ್ನು ಕಾಣದೆ ಹೋದರು, ಟ್ವಿಟರ್ ನಲ್ಲಿ ಸಕ್ರಿಯನಾಗಿದ್ದು ತನ್ನ ಅಭಿಪ್ರಾಯಗಳನ್ನು ಟ್ವಿಟರ್ ಅನ್ನು ವೇದಿಕೆ ಮಾಡಿಕೊಂಡು ಹಂಚಿಕೊಳ್ಳುತ್ತಿದ್ದಾರೆ.ಟ್ವಿಟರ್ ನಲ್ಲಿ 4.6 M ಫಾಲೋಯರ್ಸ್ ಹೊಂದಿದ್ದಾನೆ. ಮೋದಿ ಸರ್ಕಾರದ ವಿರುದ್ಧ ಸದಾ ಟ್ವಿಟರ್ ನಲ್ಲಿ ಕಿಡಿಕಾರುವ ಸಿದ್ದಾರ್ಥ್ ಇದರಿಂದ ಅನೇಕ ಬಾರಿ ಟ್ರೋಲ್ ಗೂ ಕೂಡ ಗುರಿಯಾಗುತ್ತಿದ್ದಾರೆ. ಇದೇ ಕಾರಣದಿಂದಲೇ ಸಿದ್ದಾರ್ಥ್ ಶುಕ್ಲ ನಿಧನ ಹೊಂದಿದಾಗ ಈತನ ಫೋಟೋ ಅಪ್ಲೋಡ್ ಮಾಡಿ ಶ್ರದ್ಧಾಂಜಲಿ ಘಟಿಸಿ ಟ್ರೋಲ್ ಮಾಡಿದ ಘಟನೆಗಳು ಸಹ ನಡೆದಿದ್ದು.

    ಸಮಂತಾ ಜೊತೆ ಬ್ರೇಕ್ ಅಪ್- ಮೇಘ ಜೊತೆ ವಿಚ್ಛೇದನ

    ಸಮಂತಾ ಜೊತೆ ಬ್ರೇಕ್ ಅಪ್- ಮೇಘ ಜೊತೆ ವಿಚ್ಛೇದನ

    ಸಿದ್ದಾರ್ಥನ ವೈಯಕ್ತಿಕ ಜೀವನಕ್ಕೆ ಬಂದರೆ ಸಮಂತಾ ಜೊತೆ ಸುಮಾರು ಎರಡು ವರ್ಷ ಪ್ರೇಮಾಯಣ ನಡೆಸಿದ, ಇವರ ಮದುವೆ ಬಹುತೇಕ ಖಚಿತ ಎಂಬ ಟಾಲಿವುಡ್ ಮಂದಿ ಮಾತನಾಡುವಷ್ಟು ಸುದ್ದಿಯಾಗಿತ್ತು. ಆದರೆ ಸಮಂತಾ ನಾಗಚೈತನ್ಯ ಜೊತೆ ವಿವಾಹವಾದರು. ಇದಕ್ಕೂ ಮೊದಲೇ ಈತನು ತನ್ನ ಬಾಲ್ಯದ ಗೆಳತಿ 'ಮೇಘ' ಳನ್ನು ಮದುವೆಯಾಗಿದ್ದ. ಆದರೆ ನಾಲ್ಕು ವರ್ಷದ ನಂತರ ಅವಳಿಂದ ವಿಚ್ಛೇದನ ಪಡೆದುಕೊಂಡಿದ್ದಾನೆ ಈ 42 ವರ್ಷದ ನಾಯಕನಟ.

    ದ್ರಾವಿಡ್ ನನ್ನ ಮೆಚ್ಚಿನ ಆಟಗಾರರಾಗಿದ್ದರು

    ದ್ರಾವಿಡ್ ನನ್ನ ಮೆಚ್ಚಿನ ಆಟಗಾರರಾಗಿದ್ದರು

    ಮೂಲತಃ ಕ್ರಿಕೆಟ್‌ನ ದೊಡ್ಡ ಅಭಿಮಾನಿಯಾಗಿರುವ ನಟ ಸಿದ್ದಾರ್ಥ ನಿನ್ನೆ ತನ್ನ ಟ್ವಿಟರ್ ಮೂಲಕ, ಎರಡು ಟ್ವೀಟ್‌ಗಳಲ್ಲಿ, ಅವರು "ನಾವು ನಿಜವಾಗಲೂ ಕಳೆದುಕೊಂಡದ್ದು ಏನು ಎಂಬುದು ಅರ್ಥವಾಗದ ಹೊರತು ನಮ್ಮ ನಿಜವಾದ ವಯಸ್ಸಿನ ಅರಿವು ನಮಗಾಗುವುದಿಲ್ಲ. ಐಪಿಎಲ್ ಹಿಂದಿನ ಕ್ರಿಕೆಟ್ ದಿನಗಳನ್ನು ನಾನು ಈಗ ಕಳೆದುಕೊಳ್ಳುತ್ತಿದ್ದೇನೆ. ಹೊಸ ತಲೆಮಾರಿನ ಧೋನಿ, ಕೊಹ್ಲಿ ಅಂತಹ ಡೆಮಿ ದೇವರ ಆರಾಧನೆಯ

    ಜೊತೆಗೆ ಆಡಳಿತಾತ್ಮಕ ಮತ್ತು ಪಿಆರ್ ಶಕ್ತಿಯೊಂದಿಗೆ ಸೇರಿಕೊಂಡಿರುವ ಕ್ರಿಕೆಟ್ ನಾನು ಪೂಜಿಸಿದ ಕ್ರಿಕೆಟ್ ಅಲ್ಲ ಮತ್ತು ಈಗ ಕ್ರಿಕೆಟ್ ನ ಹೆಸರಿನಲ್ಲಿ ವಿಷತ್ವವು ಆಳುತ್ತಿದೆ'' ಎಂದು ಬರೆದುಕೊಂಡಿದ್ದಾರೆ. ನಂತರ ಅವರು ಮತ್ತೊಂದು ಟ್ವೀಟ್ ಮೂಲಕ "ನನ್ನ 14ರಿಂದ 20 ವಯಸ್ಸಿನ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ನನ್ನ ನೆಚ್ಚಿನ ಆಟಗಾರರಾಗಿದ್ದರು. ಅವರ ಇಡೀ ಕ್ರಿಕೆಟ್ ಬದುಕನ್ನು ನಾನು ಆಸ್ವಾದಿಸಿದ್ದೇನೆ. ಮೊದಲ ಬಾಲ್ ನಿಂದ ಹಿಡಿದು ಅವರು ಔಟಾಗುವ ಕೊನೆಯ ಬಾಲ್ ವರೆಗೂ

    ತಪ್ಪದೇ ಆಟ ನೋಡುತ್ತಿದ್ದೆ. ನಾನು ರಾಹುಲ್ ದ್ರಾವಿಡ್ ಅವರ ಆಟವನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಭಾರತೀಯ ಕ್ರಿಕೆಟಿಗೆ ಮತ್ತೆ ಗೌರವ ಹೆಚ್ಚಿಸಲು ನೀವು ವಾಪಸ್ ಬರಬೇಕು" ಅಂತ ಬರೆದುಕೊಂಡಿದ್ದಾರೆ.

    ತಕ್ಕ ಉತ್ತರ ನೀಡುತ್ತಿದ್ದಾರೆ ಅಭಿಮಾನಿಗಳು

    ತಕ್ಕ ಉತ್ತರ ನೀಡುತ್ತಿದ್ದಾರೆ ಅಭಿಮಾನಿಗಳು

    ಭಾರತೀಯ ಕ್ರಿಕೆಟ್, ಐಪಿಎಲ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳಿಗೆ ಸಿದ್ಧಾರ್ಥ ಅವರ ಟ್ವೀಟ್ ಗಳು ಕೆರಳಿಸಿದೆ. ಹೀಗಾಗಿ ನೇರವಾಗಿ ಸಿದ್ಧಾರ್ಥ ವಿರುದ್ಧ ದಾಳಿಗೆ ಇಳಿದ ಅವರು 'ಕೆಲವು ಉತ್ಪನ್ನಗಳನ್ನು ಅನುಮೋದಿಸುವ ಮತ್ತು ಅದೇ PR ಶ್ರೇಣಿಯ ಭಾಗವಾಗಿರುವ ನಟರು ನಿಜವಾಗಿಯೂ ಕ್ರೀಡಾಪಟುಗಳ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿ ಹೊಂದಿದ್ದಾರೆ?' ಅಂತ ಸಿದ್ಧಾರ್ಥನ ವಿರುದ್ಧ ಹರಿಹಾಯ್ದಿದ್ದಾರೆ. ಮತ್ತೆ ಕೆಲವು ಅಭಿಮಾನಿಗಳು 'ಗಳಿಕೆಯ ವಿಧಾನಗಳು ನೈತಿಕವಾಗಿದ್ದರೆ, ಅದನ್ನು ಪ್ರಶ್ನಿಸುವುದು ಅನಗತ್ಯ' ಅಂತ ಪ್ರತಿಪಾದಿಸಿದ್ದಾರೆ. ಮತ್ತೆ ಕೆಲವರು ಸಿದ್ಧಾರ್ಥ್ ಹೇಗೆ ನಾಸ್ಟಾಲ್ಜಿಕ್ ಆಗಿದ್ದಾರೆ ಎನ್ನುವುದನ್ನು ಜಾಹೀರಾತು ಮತ್ತು ಪಿಆರ್ ಆಟದ ಭಾಗವಾಗಿ ತೋರಿಸಿದ್ದಾರೆ ಅಂತ ಬೆಂಬಲಿಸಿದ್ದಾರೆ.

    ಹಳೆಯ ಕ್ರಿಕೆಟಿಗರ ಜಾಹೀರಾತು ನೆನಪಿಸಿದ ವಿಜಯ್ ಅರುಮುಗಮ್

    ಹಳೆಯ ಕ್ರಿಕೆಟಿಗರ ಜಾಹೀರಾತು ನೆನಪಿಸಿದ ವಿಜಯ್ ಅರುಮುಗಮ್

    2002 ರಲ್ಲಿ ಕ್ರಿಕೆಟಿಗರಾದ ದ್ರಾವಿಡ್, ತೆಂಡೂಲ್ಕರ್ ಮತ್ತು ಇತರರು ಐಸಿಸಿಯ ಹೊಂಚುದಾಳಿಯ ಮಾರ್ಕೆಟಿಂಗ್ ಷರತ್ತನ್ನು ಹೇಗೆ ಒಪ್ಪಲಿಲ್ಲ ಮತ್ತು ಆದಾಯವನ್ನು ಬಿಡುವ ಮನಸ್ಥಿತಿಯಲ್ಲಿರಲಿಲ್ಲ ಎಂಬುದನ್ನು ಟ್ವಿಟರ್ ಬಳಕೆದಾರ ವಿಜಯ್ ಅರುಮುಗಮ್ ಸಿದ್ದಾರ್ಥ್ ಅವರಿಗೆ ನೆನಪಿಸಿ ಕೊಟ್ಟಿದ್ದಾರೆ. 2002 ರಲ್ಲಿ ಭಾರತೀಯ ಕ್ರಿಕೆಟಿಗರು ತಮ್ಮ ಗಳಿಕೆಯ ಸುಮಾರು 60% ಅನ್ನು ಅನುಮೋದನೆ ಒಪ್ಪಂದಗಳ ಮೂಲಕವೇ ಗಳಿಸಿಕೊಂಡಿದ್ದರು, ಅಂತ ವಿಜಯ್ ಪ್ರತಿಪಾದಿಸಿದ್ದಾರೆ. ಆದಾಗ್ಯೂ, ಜಾಹಿರಾತು ಮತ್ತು ಪಿಆರ್ ಮೂಲಕ ಒಬ್ಬ ವ್ಯಕ್ತಿಯು ತಮ್ಮ ಆದಾಯವನ್ನು ಭದ್ರಪಡಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಅಂತ ಬಹುತೇಕ ಅಭಿಮಾನಿಗಳು ಧೋನಿ ಮತ್ತು ಕೊಹ್ಲಿ ಪರವಾಗಿ ಬ್ಯಾಟ್ ಬೀಸಿದ್ದಾರೆ.

    English summary
    Actor Siddharth take a dig at MS Dhoni and Virat Kohli. He says new cricketers ruin the gentleness of the game.
    Thursday, September 9, 2021, 13:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X