For Quick Alerts
  ALLOW NOTIFICATIONS  
  For Daily Alerts

  ತೇಜಸ್ವಿ ಸೂರ್ಯ ವಿರುದ್ಧ ಮತ್ತೊಮ್ಮೆ ಕಾಮೆಂಟ್ ಮಾಡಿದ ನಟ ಸಿದ್ಧಾರ್ಥ್

  |

  ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರುದ್ಧ ತಮಿಳು ನಟ ಸಿದ್ಧಾರ್ಥ್ ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ. 'ಬೆಂಗಳೂರು ದಕ್ಷಿಣ ರೂಪಾಂತರಿ ವೈರಸ್ ತುಂಬಾ ಅಪಾಯ' ಎಂದು ತೇಜಸ್ವಿ ಸೂರ್ಯ ಅವರನ್ನು ಕುಟುಕಿದ್ದಾರೆ.

  ಮತ್ತೆ ತೇಜಸ್ವಿ ಸೂರ್ಯರನ್ನು ಅಪಾಯಕಾರಿ ವೈರಸ್ ಎಂದು ಕಾಮೆಂಟ್ ಮಾಡಿದ ಸಿದ್ದಾರ್ಥ್ | Filmibeat Kannada

  ಬೆಡ್ ಬ್ಲಾಕಿಂಗ್ ದಂಧೆಯನ್ನು ಬಯಲಿಗೆಳೆದು ಕೇವಲ ಒಂದು ಸಮುದಾಯ ಹದಿನೇಳು ಜನರು ಹೆಸರನ್ನು ಚರ್ಚಿಸಿದ್ದ ತೇಜಸ್ವಿ ಸೂರ್ಯ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು. ಕೇವಲ ಒಂದು ಸಮುದಾಯದ ಜನರನ್ನು ಮಾತ್ರ ಟಾರ್ಗೆಟ್ ಮಾಡಿದ್ದಾರೆ ಎಂದು ವಿರೋಧ ಉಂಟಾಗಿತ್ತು.

  ಸಂಸದ ತೇಜಸ್ವಿ ಸೂರ್ಯ ಬಗ್ಗೆ ಟ್ವೀಟ್ ಮಾಡಿ ಡಿಲೀಟ್ ಮಾಡಿದ ನಟ ಸಿದ್ಧಾರ್ಥ್ಸಂಸದ ತೇಜಸ್ವಿ ಸೂರ್ಯ ಬಗ್ಗೆ ಟ್ವೀಟ್ ಮಾಡಿ ಡಿಲೀಟ್ ಮಾಡಿದ ನಟ ಸಿದ್ಧಾರ್ಥ್

  ಈ ಸಂಬಂಧ ತೇಜಸ್ವಿ ಸೂರ್ಯ ವಿರುದ್ಧ ಟ್ವೀಟ್ ಮಾಡಿದ್ದ ಸಿದ್ಧಾರ್ಥ್ ''ಅಜ್ಮಲ್ ಕಸಬ್‌ಗಿಂತಲೂ ತೇಜಸ್ವಿ ಸೂರ್ಯ ಅಪಾಯಕಾರಿ'' ಎಂದಿದ್ದರು. ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ಈ ಟ್ವೀಟ್ ಡಿಲೀಟ್ ಮಾಡಲಾಯಿತು.

  ಇದೀಗ, ತೇಜಸ್ವಿ ಸೂರ್ಯ ವಿರುದ್ಧ ಸಿದ್ಧಾರ್ಥ್ ಮತ್ತೊಮ್ಮೆ ಕಾಮೆಂಟ್ ಮಾಡಿದ್ದಾರೆ. ಬೆಡ್ ಬ್ಲಾಕಿಂಗ್ ದಂಧೆ ಕುರಿತು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ತೇಜಸ್ವಿ ಸೂರ್ಯ ಅವರು, ಪತ್ರಕರ್ತರು ಕೇಳಿದ ಕೆಲವು ಪ್ರಶ್ನೆಗಳಿಗೆ ತಬ್ಬಿಬ್ಬಾಗಿ ಉತ್ತರ ನೀಡದೇ ಮುಂದಿನ ಪ್ರಶ್ನೆಗೆ ಹೋದ ಘಟನೆ ನಡೆಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಸಿದ್ಧಾರ್ಥ್ 'ಬೆಂಗಳೂರು ದಕ್ಷಿಣ ರೂಪಾಂತರಿ ವೈರಸ್ ತುಂಬಾ ಅಪಾಯ' ಎಂದು ಕಾಲೆಳೆದಿದ್ದಾರೆ.

  ಬಿಜೆಪಿ ಪಕ್ಷ ಮತ್ತು ಬಿಜೆಪಿ ಸರ್ಕಾರಗಳ ವಿರುದ್ಧ ಸಿದ್ಧಾರ್ಥ್ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಲೇ ಇದ್ದಾರೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ಹಿನ್ನೆಲೆ ಬಿಜೆಪಿ ವಿರುದ್ಧ ಟ್ವೀಟ್ ಮಾಡಿದ್ದರು. ನಂತರ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಟ್ವಿಟ್ಟರ್‌ನಲ್ಲಿ ಆರೋಪಿಸಿದರು.

  ''ಬಿಜೆಪಿ ಐಟಿ ಸೆಲ್ ನನ್ನ ಖಾಸಗಿ ಮೊಬೈಲ್ ನಂಬರ್ ಸೋರಿಕೆ ಮಾಡಿದೆ. ಸುಮಾರು 500ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿವೆ'' ಎಂದು ಸಿದ್ಧಾರ್ಥ್ ಟ್ವೀಟ್‌ನಲ್ಲಿ ತಿಳಿಸಿದ್ದರು.

  English summary
  Tamil Actor Siddharth Tweet on Bengaluru South BJP MP Tejasvi Surya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X