For Quick Alerts
  ALLOW NOTIFICATIONS  
  For Daily Alerts

  ಸಂಸದ ತೇಜಸ್ವಿ ಸೂರ್ಯ ಬಗ್ಗೆ ಟ್ವೀಟ್ ಮಾಡಿ ಡಿಲೀಟ್ ಮಾಡಿದ ನಟ ಸಿದ್ಧಾರ್ಥ್

  |

  ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬಗ್ಗೆ ತ್ರಿಭಾಷಾ ನಟ ಸಿದ್ಧಾರ್ಥ್ ಮಾಡಿದ್ದ ಟ್ವೀಟ್ ವೈರಲ್ ಆಗಿದೆ. ಆದರೆ ಸಿದ್ಧಾರ್ಥ್ ಅವರು ಟ್ವೀಟ್‌ ಅನ್ನು ಡಿಲೀಟ್ ಮಾಡಿದ್ದಾರೆ.

  ಸಂಸದ ತೇಜಸ್ವಿ ಸೂರ್ಯ ಅವರು ಬಿಬಿಎಂಪಿಯ 'ಬೆಡ್ ಬ್ಲಾಕಿಂಗ್' ಹಗರಣ ಬಯಲಿಗೆಳೆಯುವ ವೇಳೆ ಕೇವಲ ಮುಸ್ಲಿಮರ ಹೆಸರುಗಳನ್ನಷ್ಟೆ ಹೇಳಿ 'ಮದರಸಾ ನಡೆಸುತ್ತಿದ್ದೀರಾ?' ಎಂದು ಪ್ರಶ್ನೆ ಮಾಡಿದ್ದರು. ಭ್ರಷ್ಟಾಚಾರಕ್ಕೆ ಧರ್ಮದ ಬಣ್ಣ ಬಳಿದುದ್ದಕ್ಕೆ ತೇಜಸ್ವಿ ಸೂರ್ಯ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು.

  ಅದೇ ವಿಷಯವಾಗಿ ಟ್ವೀಟ್ ಮಾಡಿದ್ದ ನಟ ಸಿದ್ಧಾರ್ಥ್, 'ಅಜ್ಮಲ್ ಕಸಬ್‌ಗಿಂತಲೂ ಹತ್ತು ವರ್ಷ ಚಿಕ್ಕವನಾಗಿರುವ ತೇಜಸ್ವಿ ಸೂರ್ಯ ಕಸಬ್‌ಗಿಂತಲೂ ಅಪಾಯಕಾರಿ' ಎಂದು ಟ್ವೀಟ್ ಮಾಡಿದ್ದರು. ಸಿದ್ಧಾರ್ಥ್ ಅವರ ಟ್ವೀಟ್ ವೈರಲ್ ಆಗುವ ಜೊತೆಗೆ ಬಹು ಕಠಿಣವಾದ ಭಾಷೆ ಬಳಸಿದ್ದಕ್ಕೆ, ಜನಪ್ರತಿನಿಧಿಯನ್ನು ಭಯೋತ್ಪಾದಕನ ಜೊತೆ ಹೋಲಿಸಿದ್ದಕ್ಕೆ ತೀವ್ರ ವಿರೋಧವನ್ನೂ ಎದುರಿಸಿದೆ. ವಿರೋಧ ವ್ಯಕ್ತವಾದ ಬೆನ್ನಲ್ಲೆ ಟ್ವೀಟ್ ಅನ್ನು ಸಿದ್ಧಾರ್ಥ್ ಡಿಲೀಟ್ ಮಾಡಿದ್ದಾರೆ.

  ಮುಸ್ಲಿಮರ ಹೆಸರು ಮಾತ್ರ ಹೇಳಿದ್ದ ತೇಜಸ್ವಿ ಸೂರ್ಯ

  ಮುಸ್ಲಿಮರ ಹೆಸರು ಮಾತ್ರ ಹೇಳಿದ್ದ ತೇಜಸ್ವಿ ಸೂರ್ಯ

  ಬೆಡ್ ಬ್ಲಾಕಿಂಗ್ ಕರ್ಮಕಾಂಡದ ವಿರುದ್ಧ ಕೆಂಡವಾಗಿದ್ದ ತೇಜಸ್ವಿ ಸೂರ್ಯ ವಾರ್‌ರೂಮ್‌ನಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ನೇಮಕವಾಗಿದ್ದ ಹದಿನೇಳು ಮಂದಿ ಮುಸ್ಲಿಮರ ಹೆಸರನ್ನು ಓದಿ ಹೇಳಿ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ವಾರ್‌ ರೂಂನಲ್ಲಿ 190ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದು ಮುಸ್ಲಿಮರು ಮಾತ್ರವಲ್ಲದೆ ಇತರೆ ಧರ್ಮದವರೂ ಸಹ ಕೆಲಸ ಮಾಡುತ್ತಿದ್ದಾರೆ.

  ಸತೀಶ್ ರೆಡ್ಡಿ ಹೆಸರು ಕೇಳಿಬರುತ್ತಿದೆ

  ಸತೀಶ್ ರೆಡ್ಡಿ ಹೆಸರು ಕೇಳಿಬರುತ್ತಿದೆ

  ಇದೀಗ ಆ ಪ್ರಕರಣಕ್ಕೆ ದೊಡ್ಡ ತಿರುವು ದೊರೆತಿದ್ದು ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಹೆಸರು ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಕೇಳಿ ಬರುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ತೇಜಸ್ವಿ ಸೂರ್ಯ ವಿರುದ್ಧವೂ ಕಾಂಗ್ರೆಸ್‌ ಯುವ ಘಟಕ ದೂರು ದಾಖಲಿಸಿದೆ.

  ಬಿಜೆಪಿ ವಿರೋಧಿ ನಿಲುವುಗಳು

  ಬಿಜೆಪಿ ವಿರೋಧಿ ನಿಲುವುಗಳು

  ಇನ್ನು ಸಿದ್ಧಾರ್ಥ್ ವಿಷಯಕ್ಕೆ ಮರಳುವುದಾದರೆ, ಸಿದ್ಧಾರ್ಥ್‌ ಅವರು ತಮ್ಮ ಬಿಜೆಪಿ ವಿರೋಧಿ ನಿಲವುಗಳನ್ನು ಟ್ವೀಟ್‌ ಮಾಡುತ್ತಿರುತ್ತಾರೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಸೋಲು, ಕೇರಳ ಚುನಾವಣೆಯಲ್ಲಿ ಬಿಜೆಪಿ ಶೂನ್ಯ ಸಾಧನೆ ಇತರೆ ವಿಷಯಗಳ ಬಗ್ಗೆ ಸಿದ್ಧಾರ್ಥ್ ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ.

  Love Mocktail 2 ಚಿತ್ರದ ಹಾಡಿಗೆ Milana Nagaraj ಮತ್ತು ಫ್ರೆಂಡ್ಸ್ ಸಕ್ಕತ್ ಡ್ಯಾನ್ಸ್ | Filmibeat Kannada
  ಬಿಜೆಪಿ ಬೆಂಬಲಿಗರಿಂದ ಕೊಲೆ ಬೆದರಿಕೆ: ಸಿದ್ಧಾರ್ಥ್‌

  ಬಿಜೆಪಿ ಬೆಂಬಲಿಗರಿಂದ ಕೊಲೆ ಬೆದರಿಕೆ: ಸಿದ್ಧಾರ್ಥ್‌

  ಬಿಜೆಪಿ ಬೆಂಬಲಿಗರಿಂದ ಕೊಲೆ ಬೆದರಿಕೆ ಬಂದಿದೆ ಎಂದು ಸಿದ್ಧಾರ್ಥ್ ಆರೋಪ ಮಾಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಸಿದ್ಧಾರ್ಥ್, 'ನನ್ನ ಮೊಬೈಲ್ ಸಂಖ್ಯೆಯನ್ನು ಬಿಜೆಪಿ ಐಟಿ ಸೆಲ್‌ನವರು ಬಹಿರಂಗಪಡಿಸಿದ್ದಾರೆ, ಹಲವಾರು ಮಂದಿ ನನಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ನನ್ನ ಕುಟುಂಬದ ಮೇಲೆ ಅತ್ಯಾಚಾರ ಬೆದರಿಕೆಗಳನ್ನು ಹಾಕಿದ್ದಾರೆ' ಎಂದಿದ್ದರು.

  English summary
  Actor Siddharth tweeted about MP Tejasvi Surya then deleted the tweet. He compared Tejaswi Surya with terrorist.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X