ಶೂಟಿಂಗ್ ವೇಳೆ ಒಂದು ವರ್ಷದ ಮಗುವಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ಸೂರ್ಯ; ವೀಡಿಯೋ ವೈರಲ್

ಸ್ಟಾರ್ ನಟರು ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಆಗಾಗ್ಗೆ ಸುದ್ದಿ ಆಗುತ್ತಿದ್ದಾರೆ. ತಮಿಳು ನಟ ಸೂರ್ಯ ಕೂಡ ತಮ್ಮ ನಡೆ ನುಡಿಯಿಂದ ಅಭಿಮಾನಿಗಳ ಮನಗೆಲ್ಲುತ್ತಿರುತ್ತಾರೆ. ಇದೀಗ ಸಹನಟನ ಮಗುವಿಗೆ ಚಿನ್ನದ ಸರ ಉಡುಗೊರೆ ನೀಡಿ ಗಮನ ಸೆಳೆದಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗ್ತಿದೆ.

ನಟ ಸೂರ್ಯ ತಮ್ಮ ಸಮಾಜ ಸೇವೆಯಿಂದಲೂ ಸುದ್ದಿ ಆಗುತ್ತಿರುತ್ತಿರುತ್ತಾರೆ. ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಸಾಲು ಸಾಲು ಸಿನಿಮಾಗಳು ಹೀರೊ ಆಗಿ ನಟಿಸುತ್ತಿದ್ದಾರೆ. ಸೋಲು ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಸಿನಿಮಾ ಚಿತ್ರೀಕರಣದ ಸೆಟ್‌ನಲ್ಲೇ ಮಗುವಿಗೆ ಉಡುಗೊರೆ ನೀಡಿದ್ದಾರೆ.

Actor Suriya Wins Hearts Again Actor Gifts Gold Chain to Co-Star s Child Video Goes Viral

ತಾಯಿಯ ಕೈಯಲ್ಲಿದ್ದ ಪುಟ್ಟ ಮಗುವನ್ನು ಎತ್ತಿಕೊಂಡು ಆಟ ಆಡಿಸಿದ್ದಾರೆ. ದಿಢೀರನೆ ಚಿನ್ನದ ಸರವನ್ನು ಮಗುವಿನ ಕೊರಳಿಗೆ ಹಾಕಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ನೆಚ್ಚಿನ ನಟ ಉಡುಗೊರೆ ಕೊಟ್ಟಿದ್ದಕ್ಕೆ ನಟ ಚರಣ್ ಸಂತಸ ವ್ಯಕ್ತಪಡಿಸಿದ್ದಾರೆ. ಸಣ್ಣ ಪುಟ್ಟ ಪಾತ್ರಗಳಲ್ಲಿ ಚರಣ್ ನಟಿಸುತ್ತಿದ್ದಾರೆ. ಆತ ನಟ ಸೂರ್ಯಗೆ ದೊಡ್ಡ ಅಭಿಮಾನಿಗಳು ಕೂಡ ಹೌದು. ಸೂರ್ಯ ನಟಿಸುತ್ತಿರುವ 46ನೇ ಚಿತ್ರದಲ್ಲಿ ಚರಣ್ ಕೂಡ ಬಣ್ಣ ಹಚ್ಚಿದ್ದಾರೆ.

ತಮ್ಮ ಮಗನಿಗೆ ನಟ ಸೂರ್ಯ ಗಿಫ್ಟ್ ಕೊಟ್ಟ ಬಗ್ಗೆ ಚರಣ್ ಟ್ವೀಟ್ ಮಾಡಿ "ದಿ ಲೆಜೆಂಡರಿ ನಟ ಸೂರ್ಯ ಅವರಿಂದ ಎಂತಹ ಸರ್‌ಪ್ರೈಸ್. ನನ್ನ ಮಗ ಚಾರ್ವಿಕ್‌ಗೆ ಅವನ ಮೊದಲ ಹುಟ್ಟುಹಬ್ಬಕ್ಕೆ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಧನ್ಯವಾದಗಳು ಸೂರ್ಯ ಸರ್. ನಾವು ಎಂದೆಂದಿಗೂ ಕೃತಜ್ಞರಾಗಿರುತ್ತೇವೆ" ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕೂಡ ಈ ವಿಡಿಯೋ ವೈರಲ್ ಮಾಡಿ ನಟ ಸೂರ್ಯ ಗುಣಗಾನ ಮಾಡುತ್ತಿದ್ದಾರೆ.

ಸದ್ಯ ವೆಂಕಿ ಅಟ್ಲೂರಿ ನಿರ್ದೇಶನದ ಚಿತ್ರದಲ್ಲಿ ಸೂರ್ಯ ನಟಿಸುತ್ತಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. ಸೂರ್ಯ ನಟಿಸಿದ 'ಕಂಗುವ' ಹಾಗೂ 'ರೆಟ್ರೋ' ಚಿತ್ರಗಳು ಸೋತಿದ್ದವು. ಈ ಬಾರಿ ಒಂದು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

More from Filmibeat

Read more about: surya kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X