For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳ ನೆರವಿಗೆ ನಿಂತ ಸೂರ್ಯ: ಫ್ಯಾನ್ ಕ್ಲಬ್ ಗಳಿಗೆ 12.5 ಲಕ್ಷ ರೂ. ಸಹಾಯ

  |

  ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಅನೇಕ ಸ್ಟಾರ್ ಕಲಾವಿದರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಸೋಂಕಿತರಿಗೆ ಬೆಡ್, ಆಕ್ಸಿಜನ್, ಚಿಕಿತ್ಸೆ ಹಾಗೂ ಕಷ್ಟದಲ್ಲಿರುವ ಜನರಿಗೆ ಆಹಾರ ಕಿಟ್ ಒದಗಿಸುವ ಮೂಲಕ ಅನೇಕರು ಮಾನವೀಯತೆ ಮೆರೆಯುತ್ತಿದ್ದಾರೆ.

  ಕಷ್ಟದಲ್ಲಿರುವ 250 ಅಭಿಮಾನಿಗಳ ಖಾತೆಗೆ 5 ಸಾವಿರ ಹಾಕಿದ ತಮಿಳು ನಟ ಸೂರ್ಯ| Filmibeat Kannada

  ಇನ್ನೂ ಅನೇಕ ಕಲಾವಿದರು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಕೊರೊನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ್ದಾರೆ. ತಮಿಳಿನ ಅನೇಕ ಕಲಾವಿದರೂ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಅದರಲ್ಲಿ ನಟ ಸೂರ್ಯ ಸಹೋದರರು ಕೂಡ ಇದ್ದಾರೆ.

  ಇದೀಗ ನಟ ಸೂರ್ಯ ಸಂಕಷ್ಟದಲ್ಲಿರುವ ಅಭಿಮಾನಿಗಳ ಬೆನ್ನಿಗೆ ನಿಂತಿದ್ದಾರೆ. ತನ್ನ ಫ್ಯಾನ್ ಕ್ಲಬ್ ಗಳಿಗೆ ಸೂರ್ಯ ಹಣ ನೀಡುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದಿದ್ದಾರೆ. ತನ್ನನ್ನು ಬೆಂಬಲಿಸುವ, ಸಿನಿಮಾಗಳನ್ನು ಪ್ರಮೋಟ್ ಮಾಡಿ ಜನರಿಗೆ ತಲುಪಿಸುವ ಫ್ಯಾನ್ ಕ್ಲಬ್ ಗಳಿಗೆ ಸೂರ್ಯ 12.5 ಲಕ್ಷ ರೂ.ನೀಡಿದ್ದಾರೆ. ಸೂರ್ಯ ಅವರ ಈ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸೂರ್ಯಗೆ ಧನ್ಯವಾದ ತಿಳಿಸಿ ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ.

  ಫ್ಯಾನ್ ಕ್ಲಬ್ ಗಳಲ್ಲಿ ತೀರ ಸಂಕಷ್ಟದಲ್ಲಿರುವ 250 ಅಭಿಮಾನಿಗಳಿಗೆ ತಲ 5 ಸಾವಿರ ಹಣ ನೀಡಿದ್ದಾರೆ. ಅಭಿಮಾನಿಗಳ ಬ್ಯಾಂಕ ಖಾತೆಗೆ ನೇರವಾಗಿ ಹಣ ಹಾಕಿದ್ದಾರೆ. ಈಗಾಗಲೇ ಅಭಿಮಾನಿಗಳ ಖಾತೆಗೆ ಹಣ ವರ್ಗಾವಣೆ ಆಗಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸೂರ್ಯ ಜೊತೆಗೆ ಸಹೋದರ ಕಾರ್ತಿ ಕೂಡ ಅಭಿಮಾನಿಗಳ ಸಹಾಯಕ್ಕೆ ನಿಂತಿದ್ದಾರೆ.

  ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಖ್ಯಾತ ನಟ ಆರ್. ಮಾಧವನ್ 'ಅದು ನನ್ನ ಸಹೋದರ' ಎಂದು ಹೇಳಿದ್ದಾರೆ. ಜೊತೆಗೆ ಹಾರ್ಟ್ ಇಮೋಜಿ ಇರಿಸಿದ್ದಾರೆ.

  ಈ ಮೊದಲು ತಮಿಳುನಾಡು ಸಿಎಂ ಸ್ಟಾಲಿನ್ ಭೇಟಿಯಾಗಿ 1 ಕೋಟಿ ರೂ. ಪರಿಹಾರ ನಿಧಿಗೆ ನೀಡಿದ್ದರು. ಸೂರ್ಯ ಸಹೋದರು ಸಿಎಂ ಭೇಟಿಯಾಗಿರುವ ಫೋಟೋ ವೈರಲ್ ಆಗಿತ್ತು. ಸೂರ್ಯ ಕಳೆದ ಕೆಲವು ತಿಂಗಳ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಪಾಸಿಟಿವ್ ಬಂದು ತಕ್ಷಣ ಮನೆಯಲ್ಲೇ ಕ್ವಾರಂಟೈನ್ ಆಗಿದ್ದ ಸೂರ್ಯ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು.

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸೂರ್ಯ40 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಹೆಸರಿಡದ ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದ್ದು, ಪಾಂಡಿಯರಾಜ್ ನಿರ್ದೇಶನ ಮಾಡುತ್ತಿದ್ದಾರೆ.

  English summary
  Tamil Actor Surya Donates Rs 5000 each to 250 fan club members.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X