For Quick Alerts
  ALLOW NOTIFICATIONS  
  For Daily Alerts

  ನಟ ಸೂರ್ಯ 40ನೇ ಸಿನಿಮಾ ಘೋಷಣೆ; ನಿರ್ದೇಶಕ, ನಾಯಕಿ ಇವರೇ

  |

  ಕಾಲಿವುಡ್ ನಟ ಸೂರ್ಯ ಸದ್ಯ ಸೂರರೈ ಪೊಟ್ರು ಸಿನಿಮಾದ ಸಕ್ಸಸ್ ನಲ್ಲಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗಿದ್ದಲ್ಲದೆ, ಆಸ್ಕರ್ ಅಂಗಳಕ್ಕೂ ಕಾಲಿಟ್ಟಿದೆ ಎನ್ನುವುದೇ ವಿಶೇಷ. ಈ ಸಂತಸದಲ್ಲಿರುವ ಸೂರ್ಯ 40ನೇ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.

  ಸೂರ್ಯ ಮುಂದಿನ ಸಿನಿಮಾಗೆ ಯಾರು ನಿರ್ದಶನ ಮಾಡುತ್ತಾರೆ? ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಈ ಕುತೂಹಲಕ್ಕೀಗ ತೆರೆ ಬಿದ್ದಿದೆ. ನಟ ಸೂರ್ಯ ಮುಂದಿನ ಸಿನಿಮಾಗೆ ಪಾಂಡಿರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ.

  ಫೋಟೋ ವೈರಲ್: ಅಭಿಮಾನಿ ಮದುವೆಗೆ ಹಾಜರಾಗಿ ಶುಭಕೋರಿದ ನಟ ಸೂರ್ಯಫೋಟೋ ವೈರಲ್: ಅಭಿಮಾನಿ ಮದುವೆಗೆ ಹಾಜರಾಗಿ ಶುಭಕೋರಿದ ನಟ ಸೂರ್ಯ

  ಚಿತ್ರದಲ್ಲಿ ನಟ ಸೂರ್ಯಗೆ ನಾಯಕಿಯಾಗಿ ಯುವ ನಟಿ ಪ್ರಿಯಾಂಕಾ ಮೋಹನ್ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಈಗಾಗಲೇ ತೆಲುಗಿನಲ್ಲಿ ಸಿನಿಮಾ ಮಾಡಿದ್ದಾರೆ. ತಮಿಳಿನಲ್ಲಿ ಸದ್ಯ ಶಿವಕಾರ್ತಿಕೇಯನ್ ಜೊತೆ ನಟಿಸಿರುವ ಡಾಕ್ಟರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

  ಇದೀಗ ಪ್ರಿಯಾಂಕಾ ಸ್ಟಾರ್ ನಟನ ಜೊತೆ ತೆರೆಹಂಚಿಕೊಳ್ಳಲು ಸಜ್ಜಾಗಿದ್ದಾರೆ. ಸೂರ್ಯ 40 ಸಿನಿಮಾಗೆ ಸನ್ ಪಿಕ್ಟರ್ಸ್ ಬಂಡವಾಳ ಹೂಡುತ್ತಿದೆ. ಸೂರರೈ ಪೊಟ್ರು ಸಿನಿಮಾ ಬಳಿಕ ಸೂರ್ಯ ಸಿನಿಮಾಗಳ ಆಯ್ಕೆ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

  ಸೂರ್ಯ 40ನೇ ಸಿನಿಮಾಗೂ ಮೊದಲು ಸೂರ್ಯ ಅರುವಾ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಚಿತ್ರಕ್ಕೆ ನಿರ್ದೇಶಕ ಹರಿ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಸದ್ಯದಲ್ಲೇ ಸಿನಿಮಾದ ಕೂಡ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಇದಲ್ಲದೆ ಸೂರ್ಯ ಬಳಿ ಇನ್ನೂ ಒಂದು ಸಿನಿಮಾಗಳಿವೆ.

  ಪೊಗರು, ರಾಬರ್ಟ್ ಬಗ್ಗೆ ಮಾತನಾಡಿದ ಪುನೀತ್ ರಾಜ್ ಕುಮಾರ್ | Filmibeat Kannada

  ನಿರ್ದೇಶಕ ವೆಟ್ರಿಮಾರನ್ ಜೊತೆ ಸೂರ್ಯ ಸಿನಿಮಾ ಮಾಡುತ್ತಿದ್ದಾರೆ. ತಮಿಳಿನ ಖ್ಯಾತ ಕಾದಂಬರಿ ಆಧಾರಿತ ಸಿನಿಮಾದಲ್ಲಿ ಸೂರ್ಯ ನಟಿಸುತ್ತಿದ್ದಾರೆ. ಈ ಸಿನಿಮಾ ಜಲ್ಲಿಕಟ್ಟು ಹಿನ್ನಲೆಯ ಸಿನಿಮಾವಾಗಿದೆ ಎನ್ನಲಾಗಿದೆ. ಈ ಎರಡು ಸಿನಿಮಾಗಳು ಪ್ರಾರಂಭವಾಗುವ ಮೊದಲು ಸೂರ್ಯ 40ನೇ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡುವ ಸಾಧ್ಯತೆ ಇದೆ.

  English summary
  Actor Surya's 4o movie with Director Pandiraj. Actress Priyanka Mohan to be seen as the leading lady.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X