twitter
    For Quick Alerts
    ALLOW NOTIFICATIONS  
    For Daily Alerts

    'ನೀಟ್' ಪರೀಕ್ಷೆ ವಿದ್ಯಾರ್ಥಿಗಳಿಗೆ ಬೆದರಿಕೆ; ನಟ ಸೂರ್ಯ

    |

    ತಮಿಳಿನ ಖ್ಯಾತ ನಟ ಸೂರ್ಯ ಮತ್ತೊಮ್ಮೆ ವಿದ್ಯಾರ್ಥಿಗಳ ಪರ ನಿಂತಿದ್ದಾರೆ. ನೀಟ್ ಪರೀಕ್ಷೆ ವಿರುದ್ಧ ನಟ ಸೂರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ ಸೂರ್ಯ, ನೀಟ್ ಪರೀಕ್ಷೆ ವಿದ್ಯಾರ್ಥಿಗಳಿಗೆ ಬೆದರಿಕೆ ಎಂದು ಹೇಳಿದ್ದಾರೆ. ಇನ್ನು ಶಿಕ್ಷಣವು ರಾಜ್ಯದ ಜವಾಬ್ದಾರಿ ಮತ್ತು ಹಕ್ಕಾಗಬೇಕೆಂದು ಹೇಳಿದ್ದಾರೆ.

    ನೀಟ್ ಪರೀಕ್ಷೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತೆ, ನೀಟ್ ಪರೀಕ್ಷೆ ರದ್ದಾಗಬೇಕೆಂದು ನಟ ಸೂರ್ಯ ಒತ್ತಾಯ ಮಾಡಿದ್ದಾರೆ. ವಿದ್ಯಾರ್ಥಿಗಳ ಸಹಾಯದ ಕಡೆ ಗಮನಹರಿಸುವ ತನ್ನ ಎನ್ ಜಿ ಒ ಅಗರಮ್ ಫೌಂಡೇಶನ್ ಪರವಾಗಿ ನಟ ಸೂರ್ಯ ನ್ಯಾಯಮೂರ್ತಿ ಎ.ಕೆ ರಾಜನ್ ನೇತೃತ್ವದ ಸಮಿತಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ವೈದ್ಯಕೀಯ ಪ್ರವೇಶದ ಮೇಲೆ ನೀಟ್ ಪ್ರಭಾವವನ್ನು ಅಧ್ಯಯನ ಮಾಡಲು ತಮಿಳುನಾಡು ಸರ್ಕಾರ ನೇಮಕ ಮಾಡಿದ ಸಮಿತಿಯಿದು.

    ''ನೀಟ್ ಪರೀಕ್ಷೆ ಬಗ್ಗೆ ಸರ್ಕಾರ ಮತ್ತು ಬದಲಾವಣೆ ತರುವವರಿಗೆ ನಾವು ಸರಿಯಾಗಿ ತಿಳಿಸುವುದು ಮುಖ್ಯವಾಗಿದೆ. ಇಲ್ಲದಿದ್ದರೆ ಇಂಥ ಪರೀಕ್ಷೆಗಳು ಮಕ್ಕಳ ಭವಿಷ್ಯವನ್ನು ಹಾಳುಮಾಡುತ್ತೆ," ಎಂದು ಹೇಳಿದ್ದಾರೆ.

    Actor Surya says NEET threat to Students

    Recommended Video

    ಅಪ್ಪ ಸಾಂಗ್ ನೋಡಿ ಎಂಜಾಯ್ ಮಾಡುತ್ತಿದ್ದಾನೆ Junior Chiru | Filmibeat Kannada

    "ಭಾಷೆ ಮತ್ತು ಸಂಸ್ಕೃತಿಯಲ್ಲಿ ವೈವಿಧ್ಯಮಯವಾಗಿರುವ ಭಾರತದಂತಹ ದೇಶಕ್ಕೆ, ಶಿಕ್ಷಣ ವ್ಯವಸ್ಥೆಯು ತನ್ನ ರಾಜ್ಯದ ಕೈಯಲ್ಲಿ ಇದ್ದರೆ ಮಾತ್ರ ನ್ಯಾಯ. ಇದರ ಮೂಲಕ ನಾವು ಶಾಶ್ವತ ಪರಿಹಾರ ನೋಡಬಹುದು. ಎಲ್ಲಾ ರ್ಜಾಯ್ ರಾಜಕೀಯ ಪಕ್ಷಗಳು ಒಂದಾಗಲು ಮತ್ತು ಶಿಕ್ಷಣವನ್ನು ರಾಜ್ಯದ ಜವಾಬ್ದಾರಿ ಮತ್ತು ಹಕ್ಕನ್ನಾಗಿ ಮಾಡಲು ಕೆಲಸ ಮಾಡಬೇಕೆಂದು ನಾನು ವಿನಂತಿಸುತ್ತೇನೆ," ಎಂದು ಸೂರ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    English summary
    Actor Surya says NEET threat to Students. He has tweeted in favour of high level panel investigation.
    Tuesday, June 22, 2021, 9:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X