"ನಾನು ಲೈಂಗಿಕ ಕಿರುಕುಳ ಅನುಭವಿಸಿದ್ದೆ..ತಾಯಿಗೆ ಹೇಳಿದ್ರು ಪ್ರಯೋಜನವಾಗಲಿಲ್ಲ": ಖುಷ್ಬೂ ಸುಂದರ್

ಬಹುಭಾಷಾ ನಟಿ ಖುಷ್ಬೂ ಸುಂದರ್ ತಮ್ಮ ಜೀವನದಲ್ಲಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಚಿತ್ರರಂಗದಲ್ಲಿ ಮಾತ್ರವಲ್ಲದೇ ಈಗ ರಾಜಕೀಯರಂಗದಲ್ಲೂ ಖುಷ್ಬೂ ಗುರ್ತಿಸಿಕೊಂಡಿದ್ದಾರೆ. ಒಂದಷ್ಟು ಕನ್ನಡ ಸಿನಿಮಾಗಳಲ್ಲೂ ನಟಿಸಿ ಕನ್ನಡ ಸಿನಿರಸಿಕರಿಗೂ ಚಿರಪರಿಚಿತರಾಗಿದ್ದಾರೆ. ಚಿಕ್ಕಂದಿನಲ್ಲಿ ಸ್ವಂತ ತಂದೆಯಿಂದಲೇ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಖುಷ್ಬೂ ಹೇಳಿದ್ಧಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದ ಖುಷ್ಬೂ 2 ವರ್ಷಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಪಕ್ಷದಲ್ಲಿ ಈಗ ಸಖತ್ ಆಕ್ವೀವ್ ಆಗಿರುವ ಬಹುಭಾಷಾ ನಟಿಗೆ ನ್ಯಾಷನಲ್ ವುಮೆನ್ ಕಮಿಷನ್‌ ಸದಸ್ಯೆಯಾಗಿ ಜವಾಬ್ದಾರಿ ಸಿಕ್ಕಿದೆ. ಈ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ಆಕೆ ಶಾಕಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮಹಿಳೆಯರ ಕುರಿತು ಮಾತನಾಡುತ್ತಾ ತಮ್ಮ ಜೀವನದ ಕಹಿ ಘಟನೆಯನ್ನು ವಿವರಿಸಿದ್ದಾರೆ. ಸ್ವಂತ ತಂದೆ ಬಗ್ಗೆ ಖುಷ್ಬೂ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ.

Actor turned politician Khushbu Sundar says her father sexually abused her when she was 8

"8 ವರ್ಷದ ಹುಡುಗಿಯಾಗಿದ್ದಾಗ ಸ್ವಂತ ತಂದೆ ಲೈಂಗಿಕವಾಗಿ, ಶಾರೀರಿಕವಾಗಿ ಹಿಂಸಿಸಿದ್ದರು. ಹುಡುಗಿಯಾಗಲಿ, ಹುಡುಗ ಆಗಲಿ ಚಿಕ್ಕಂದಿನಲ್ಲಿ ದೌರ್ಜನ್ಯ ಎದುರಾದರೆ ಜೀವನ ಭಯಂಕರ ಎನಿಸುತ್ತದೆ. ನಮ್ಮ ತಾಯಿ ಬಗ್ಗೆ ಹೇಳಬೇಕು ಅಂದರೆ ಮದುವೆಯಾಗಿ ಬಹಳ ಚಿತ್ರಹಿಂಸೆ ಅನುಭವಿಸಿದರು. ಒಬ್ಬ ಪುರುಷ ಪತ್ನಿಯನ್ನು, ಮಕ್ಕಳನ್ನು ಹೊಡೆಯುವುದು, ಕೊನೆಗೆ ಮಗಳನ್ನು ಕೂಡ ಕೆಟ್ಟದಾಗಿ ಬೈಯ್ಯುವುದು, ಹಿಂಸಿಸುವುದನ್ನು ತನ್ನ ಜನ್ಮಸಿದ್ಧ ಹಕ್ಕು ಎಂದುಕೊಂಡಿದ್ದ ದಿನಗಳವು"

"ನನಗೆ 8 ವರ್ಷದಿಂದಲೇ ತಂದೆಯಿಂದ ಹಿಂಸೆ ಶುರುವಾಯಿತು. ಆತನನ್ನು ಎದುರಿಸುವ ಧೈರ್ಯ ನನಗೆ 15 ವರ್ಷಕ್ಕೆ ಬಂತು. ಈ ವಿಷಯವನ್ನು ತಾಯಿಗೆ ಹೇಳಿದರು ನಂಬುತ್ತಿರಲಿಲ್ಲ. ಯಾಕಂದರೆ ಪತಿಯೇ ದೈವ ಎಂದು ಭಾವಿಸುವ ಪರಿಸರದಲ್ಲಿ ಬೆಳೆದಾಕೆ. ಏನೇ ಆದರೂ, ಆತ ಏನೇ ಮಾಡಿದರೂ ನನ್ನ ಪತಿ ದೇವರು ಎನ್ನುವ ಭಾವನೆಯಲ್ಲಿ ಇರುತ್ತಿದ್ದರು. ಆದರೆ 15 ವರ್ಷಕ್ಕೆ ನಾನು ನಮ್ಮ ತಂದೆ ವಿರುದ್ಧ ತಿರುಗಿಬಿದ್ದೆ. ನನಗೆ 16 ವರ್ಷ ವಯಸ್ಸಾಗಿದ್ದಾಗ ತಂದೆ ತೀರಿಕೊಂಡರು. ಆಗ ಒಂದೊತ್ತು ಕಳೆಯುವುದು ಕಷ್ಟವಾಗುತ್ತಿತ್ತು" ಎಂದಿದ್ದಾರೆ.

Actor turned politician Khushbu Sundar says her father sexually abused her when she was 8

ನಟಿ ಖುಷ್ಬೂ ತಮಿಳು ಸಿನಿಮಾ ನಿರ್ದೇಶನ ಸುಂದತರ್‌ನ ಮದುವೆಯಾಗದ್ದಾರೆ. 2000ದ ವರ್ಷದಲ್ಲಿ ಇವರ ಮದುವೆ ನಡೆಯಿತು. ದಂಪತಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಖುಷ್ಬೂ 80ರ ದಶಕದ ಆರಂಭದಿಂದಲೇ ಬಾಲನಟಿಯಾಗಿ ಹಿಂದಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ನಂತರ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸೋ ಮೂಲಕ ನಾಯಕಿಯಾಗಿಯೂ ಅವಕಾಶ ಗಿಟ್ಟಿಸಿಕೊಂಡರು. ತಮಿಳಿನಲ್ಲಿ ಖುಷ್ಯೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

'ರಣಧೀರ' ಕನ್ನಡದಲ್ಲಿ ಖುಷ್ಬೂ ಮೊದಲ ಸಿನಿಮಾ. ನಂತರ ರವಿಚಂದ್ರನ್ ಜೊತೆಗೆ ಸಾಲು ಸಾಲಾಗಿ 'ಅಂಜದ ಗಂಡು', 'ಯುಗಪುರುಷ' ಸಿನಿಮಾಗಳಲ್ಲಿ ನಟಿಸಿದರು. 'ಒಂಟಿ ಸಲಗ', 'ರುದ್ರ', 'ಪಾಳೆಗಾರ', 'ಜೀವನದಿ', 'ಮ್ಯಾಜಿಕ್ ಅಜ್ಜಿ' ಕನ್ನಡದಲ್ಲಿ ಖುಷ್ಬೂ ನಟಿಸಿದ ಕೆಲ ಪ್ರಮುಖ ಸಿನಿಮಾಗಳು. ದಕ್ಷಿಣ ಭಾರತದ 4 ಭಾಷೆ ಸೇರಿ ಹಿಂದಿಯಲ್ಲಿ ನಟಿಸಿ ಪಂಚಭಾಷಾ ತಾರೆಯಾಗಿ ಖುಷ್ಬೂ ಗುರ್ತಿಸಿಕೊಂಡಿದ್ದಾರೆ.

More from Filmibeat

English summary
Actor turned politician Khushbu Sundar says her father sexually abused her when she was 8. She recently Appointed As Member Of National Commission For Women. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X