For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ, ನಿರ್ಮಾಪಕ ವೆಂಕಟ್ ಶುಭ ಕೊರೊನಾದಿಂದ ಸಾವು

  |

  ಕೊರೊನಾ ವೈರಸ್‌ ಕಾರಣದಿಂದ ಮತ್ತೊಬ್ಬ ಸಿನಿ ಕಲಾವಿದ ಮೃತಪಟ್ಟಿದ್ದಾರೆ. ತಮಿಳಿನ ಹಿರಿಯ ನಟ, ಕಾರ್ಯಕಾರಿ ನಿರ್ಮಾಪಕ, ಲೇಖಕರೂ ಆಗಿದ್ದ ವೆಂಕಟ್ ಶುಭ ಕೊರೊನಾದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

  ಮೇ 29 ರಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವೆಂಕಟ್ ಶುಭ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಮೃತಪಟ್ಟಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

  ಮೊದಲು ಹೀರೋ, ಈಗ ನಿರ್ದೇಶಕ: ಸಿನಿಮಾ ತೆರೆಗೆ ಮುನ್ನವೇ ಸಾವುಮೊದಲು ಹೀರೋ, ಈಗ ನಿರ್ದೇಶಕ: ಸಿನಿಮಾ ತೆರೆಗೆ ಮುನ್ನವೇ ಸಾವು

  ವೆಂಕಟ್ ಶುಭ ಸ್ನೇಹಿತ, ಅಮ್ಮಾ ಕ್ರಿಯೇಷನ್ಸ್ ಟಿ ಶಿವ ಈ ಕುರಿತು ಟ್ವೀಟ್ ಮಾಡಿ ''ಕಳೆದ ಹತ್ತು ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ವೆಂಕಟ್ ಆರೋಗ್ಯ ಹದಗೆಟ್ಟಿತು. ನಂತರ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಯಿತು. ಆದರೆ, ಮೇ 29 ರಂದು 12.48ಕ್ಕೆ ಸಾವನ್ನಪ್ಪಿದ್ದಾರೆ'' ಎಂದು ತಿಳಿಸಿದ್ದಾರೆ.

  ತಮಿಳಿನ ಕಿರುತೆರೆ ಲೋಕದಲ್ಲಿ ವೆಂಕಟ್ ಶುಭ ಖ್ಯಾತ ಹೆಸರು. ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು.

  Ambareesh ಗೆ 69ನೇ ಹುಟ್ಟುಹಬ್ಬ: ಅಂಬಿಯ ನೆನಪು ಹಂಚಿಕೊಂಡ ದಚ್ಚು,Kichcha | Filmibeat Kannada

  ವೆಂಕಟ್ ಶುಭ ನಿಧನಕ್ಕೆ ರಾಧಿಕಾ ಶರತ್ ಕುಮಾರ್, ಪ್ರಕಾಶ್ ರಾಜ್, ಅರಿವಳಗನ್, ಪ್ರಿಯಾ ವಿ ಕಾಮಾಕ್ಷಿ, ಎನ್ ನಟರಾಜ ಸುಬ್ರಮಣಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

  English summary
  Actor, Production Executive Venkat Subha passed away in Chennai due to Covid complications

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X