twitter
    For Quick Alerts
    ALLOW NOTIFICATIONS  
    For Daily Alerts

    ನಟ ವಿಜಯ್ ರಾಜಕೀಯ ಪಕ್ಷ ವಿಸರ್ಜನೆ: ಚೆನ್ನೈ ಕೋರ್ಟ್‌ಗೆ ಮಾಹಿತಿ

    |

    ತಮಿಳು ನಟ ವಿಜಯ್ ಅವರ ಹೆಸರಿನಲ್ಲಿ ತಂದೆ ಎಸ್‌ಎ ಚಂದ್ರಶೇಖರ್ 'ವಿಜಯ್ ಮಕ್ಕಳ ಇಯಕ್ಕಂ' ಎಂಬ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ಈಗ ಮಗನ ಹೆಸರಿನಲ್ಲಿದ್ದ ರಾಜಕೀಯ ಪಕ್ಷವನ್ನು ವಿಸರ್ಜನೆ ಮಾಡಲಾಗಿದೆ ಎಂದು ನಟ ವಿಜಯ್ ತಂದೆ ಚಂದ್ರಶೇಖರ್ ಚೆನ್ನೈ ಕೋರ್ಟ್‌ಗೆ ಸೋಮವಾರ ಮಾಹಿತಿ ನೀಡಿದ್ದಾರೆ.

    ತನ್ನ ಹೆಸರು ಅಥವಾ ತನ್ನ ಅಭಿಮಾನಿ ಬಳಗದ ಹೆಸರನ್ನು ಪೋಷಕರು ಹಾಗೂ ಇತರ ಕೆಲವು ಮಂದಿ ಯಾವುದೇ ರಾಜಕೀಯ ಸಭೆಗಳಲ್ಲಿ ಬಳಸದಂತೆ ಸೂಚನೆ ನೀಡಬೇಕು ಅವರ ಮೇಲೆ ನಿರ್ಬಂಧ ಹೇರಬೇಕು ಎಂದು ಚೆನ್ನೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಜಯ್ ದೂರು ನೀಡಿದ್ದರು.

    ಅಪ್ಪ-ಅಮ್ಮ ಸೇರಿ 11 ಮಂದಿ ವಿರುದ್ಧ ದೂರು ನೀಡಿದ ವಿಜಯ್ಅಪ್ಪ-ಅಮ್ಮ ಸೇರಿ 11 ಮಂದಿ ವಿರುದ್ಧ ದೂರು ನೀಡಿದ ವಿಜಯ್

    ಈ ಕೇಸ್‌ ಸಂಬಂಧ ವಿಜಯ್ ಮಕ್ಕಳ ಇಯಕ್ಕಂ ಪಕ್ಷದ ಅಧ್ಯಕ್ಷ, ಸಂಸ್ಥಾಪಕ ಹಾಗೂ ಸದಸ್ಯರಿಗೆ ನೋಟಿಸ್ ನೀಡಲಾಗಿತ್ತು. ಇದರ ಬೆನ್ನಲ್ಲೆ ವಿಜಯ್ ಅವರ ತಂದೆ ಚಂದ್ರಶೇಖರ್ 'ಪಕ್ಷವನ್ನು ವಿಸರ್ಜಿಸಿದ್ದೇವೆ' ಎಂದು ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ.

    ವಿಜಯ್ ಜಾತಿ ಬಗ್ಗೆ ತಂದೆ ಚಂದ್ರಶೇಖರ್ ಹೇಳಿದ್ದು ಹೀಗೆವಿಜಯ್ ಜಾತಿ ಬಗ್ಗೆ ತಂದೆ ಚಂದ್ರಶೇಖರ್ ಹೇಳಿದ್ದು ಹೀಗೆ

    ನ್ಯಾಯಾಲಯದಿಂದ ಸಮನ್ಸ್ ನೀಡಿದ ನಂತರ 28-02-2021 ರಂದು ಚೆನ್ನೈನಲ್ಲಿ ವಿಜಯ್ ಮಕ್ಕಳ ಇಯಕ್ಕಂ ಪಕ್ಷದ ಜನರಲ್ ಬಾಡಿ ಸಭೆ ಕರೆಯಲಾಗಿತ್ತು. ಈ ಸಭೆಯ ಬಳಿಕ ತಕ್ಷಣ ಜಾರಿಗೆ ಬರುವಂತೆ ವಿಜಯ್ ಮಕ್ಕಳ ಇಯಕ್ಕಂ ವಿಸರ್ಜಿಸಲಾಗಿದೆ ಎಂದು ಚೆನ್ನೈ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಮುಂದೆ ಓದಿ...

    ಪ್ರಮುಖ ಹುದ್ದೆಯಲ್ಲಿದ್ದ ವಿಜಯ್ ತಂದೆ-ತಾಯಿ

    ಪ್ರಮುಖ ಹುದ್ದೆಯಲ್ಲಿದ್ದ ವಿಜಯ್ ತಂದೆ-ತಾಯಿ

    ತಂದೆ ಹಾಗೂ ತಾಯಿ ಸೇರಿದಂತೆ ಒಟ್ಟು ಹನ್ನೊಂದು ಜನರ ವಿರುದ್ಧ ವಿಜಯ್ ದೂರು ಸಲ್ಲಿಸಿದ್ದರು. ವಿಜಯ್ ಮಕ್ಕಳ ಇಯಕ್ಕಂ ಪಕ್ಷದಲ್ಲಿ ಎಸ್‌ಎ ಚಂದ್ರಶೇಖರ್ ಕಾರ್ಯದರ್ಶಿಯಾಗಿ ಮತ್ತು ವಿಜಯ್‌ ತಾಯಿ ಶೋಭಾ ಚಂದ್ರಶೇಖರ್ ಖಜಾಂಚಿಯಾಗಿ ಇದ್ದಾರೆ. ಪದ್ಮನಾಭನ್ ಹಾಗೂ ಇನ್ನೂ ಕೆಲವರು ಪಕ್ಷದ ಪ್ರಮುಖ ಹುದ್ದೆಗಳಲ್ಲಿದ್ದರು. ಇದೀಗ, ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಹತ್ತು ಮಂದಿಯೂ ವಿಜಯ್ ಮಕ್ಕಲ್ ಇಯಕ್ಕಂ ಪಾರ್ಟಿಯ ಪದಾಧಿಕಾರಿಗಳಾಗಿದ್ದು ತಮ್ಮ ರಾಜೀನಾಮೆ ಪತ್ರಗಳನ್ನು ನೀಡಿದ್ದಾರೆ ಎಂದು ಎಸ್‌ಎ ಚಂದ್ರಶೇಖರ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಕೇಸ್‌ನ ವಿಚಾರಣೆ ಅಕ್ಟೋಬರ್ 29ಕ್ಕೆ ಮುಂದೂಡಿಕೆಯಾಗಿದೆ.

    ಇನ್ಮುಂದೆ ನಾವು ಸಾಮಾನ್ಯ ಅಭಿಮಾನಿಗಳು

    ಇನ್ಮುಂದೆ ನಾವು ಸಾಮಾನ್ಯ ಅಭಿಮಾನಿಗಳು

    ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಚಂದ್ರಶೇಖರ್, ''ವಿಜಯ್ ಮಕ್ಕಳ ಇಯಕ್ಕಂ ಪಕ್ಷವನ್ನು ವಿಸರ್ಜಿಸಲಾಗಿದೆ. ಈಗ ಅದು ಅಸ್ತಿತ್ವದಲ್ಲಿಲ್ಲ. ನಾವು ಇನ್ನು ಮುಂದೆ ವಿಜಯ್ ಮಕ್ಕಳ ಇಯಕ್ಕಂನ ಸದಸ್ಯರಲ್ಲ. ಆದರೆ ನಾವೆಲ್ಲರೂ ನಟ ವಿಜಯ್ ಅವರ ಸಾಮಾನ್ಯ ಅಭಿಮಾನಿಗಳಾಗಿ ಮುಂದುವರಿಯುತ್ತೇವೆ" ಎಂದು ಹೇಳಿದ್ದಾರೆ.

    2020ರಲ್ಲಿ ಪಕ್ಷ ಘೋಷಿಸಿದ ಚಂದ್ರಶೇಖರ್

    2020ರಲ್ಲಿ ಪಕ್ಷ ಘೋಷಿಸಿದ ಚಂದ್ರಶೇಖರ್

    ಅಂದ್ಹಾಗೆ, 2020ರ ಜೂನ್ ತಿಂಗಳಲ್ಲಿ ವಿಜಯ್ ಮಕ್ಕಲ್ ಇಯಕ್ಕಂ ಪಕ್ಷವನ್ನು ಎಸ್ಎ ಚಂದ್ರಶೇಖರ್ ಸ್ಥಾಪಿಸಿದರು. ಭಾರತದ ಚುನಾವಣಾ ಆಯೋಗದಲ್ಲಿ ಅಧಿಕೃತವಾಗಿ ನೋಂದಾಯಿಸಿದರು. ವಿಜಯ್ ಅವರ ತಂದೆ ಹಾಗೂ ಅಭಿಮಾನಿಗಳೇ ಈ ಪಕ್ಷ ಮುನ್ನಡೆಸಿದರಿಂದ ಭವಿಷ್ಯದಲ್ಲಿ ವಿಜಯ್ ಸಹ ಇದೇ ಪಕ್ಷದಿಂದ ರಾಜಕೀಯ ಪ್ರವೇಶಿಸುತ್ತಾರೆ ಎಂದು ಅಂದಾಜಿಸಿದರು. ಆದರೆ, ಆ ಸಂದರ್ಭದಲ್ಲಿ ವಿಜಯ್ ತಮ್ಮ ತಂದೆ ಸ್ಥಾಪಿಸಿರುವ ಪಕ್ಷದ ಜೊತೆ ನನಗೆ ಯಾವುದೇ ಸಂಪರ್ಕ ಇಲ್ಲ ಎಂದು ನಿರಾಕರಿಸಿದರು. ಈ ಬಗ್ಗೆ ಅಧಿಕೃತ ಹೇಳಿಕೆ ಸಹ ಬಿಡುಗಡೆ ಮಾಡಿದರು.

    ಮೊದಲಿನಿಂದಲೂ ವಿರೋಧಿಸಿದ್ದ ವಿಜಯ್

    ಮೊದಲಿನಿಂದಲೂ ವಿರೋಧಿಸಿದ್ದ ವಿಜಯ್

    ''ನನಗೂ, ನಮ್ಮ ತಂದೆ ಚಂದ್ರಶೇಖರನ್ ಸ್ಥಾಪಿಸಿರುವ ರಾಜಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಈ ಪಕ್ಷದೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕ ನನಗೆ ಇಲ್ಲ. ಯಾರದ್ದೋ ರಾಜಕೀಯ ಆಸಕ್ತಿಗಳನ್ನು ಪೂರ್ಣಗೊಳಿಸಲು ನಾನು ತಯಾರಿಲ್ಲ. ಈ ಪಕ್ಷ (ಆಲ್‌ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಳಮ್) ನನ್ನ ಪಕ್ಷವೆಂದುಕೊಂಡು ಇದಕ್ಕೆ ಸೇರಿಕೊಳ್ಳಬೇಡಿ. ಹಾಗೂ ಈ ಪಕ್ಷವು ನನ್ನ ಚಿತ್ರ, ನನ್ನ ಹೆಸರು ಅಥವಾ ನನ್ನ ಫ್ಯಾನ್ಸ್ ಕ್ಲಬ್‌ಗಳ ಹೆಸರನ್ನು ಬಳಸಿದರೆ ನಾನು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇನೆ'' ಎಂದು ಎಚ್ಚರಿಕೆ ನೀಡಿದ್ದರು.

    English summary
    Actor Vijay’s father tells court the Vijay Makkal Iyakkam dissolved after legal action by his son.
    Tuesday, September 28, 2021, 17:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X