2020ರಲ್ಲಿ ಅತಿ ಹೆಚ್ಚು ರೀ-ಟ್ವೀಟ್ ಆದ ಪೋಸ್ಟ್ ವಿಜಯ್ ಸೆಲ್ಫಿ
ತಮಿಳು ನಟ ವಿಜಯ್ ಅಭಿನಯಿಸಿರುವ ಮಾಸ್ಟರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ವಿಜಯ್ ಅಭಿಮಾನಿಗಳಿಗೆ ಖುಷಿಯ ವಿಚಾರವೊಂದು ಸಿಕ್ಕಿದೆ.
ಅಭಿಮಾನಿಗಳ ಜೊತೆ ವಿಜಯ್ ಕ್ಲಿಕ್ಕಿಸಿಕೊಂಡಿದ್ದ ಸೆಲ್ಫಿ 2020ನೇ ವರ್ಷದಲ್ಲಿ ಅತಿ ಹೆಚ್ಚು ರೀ-ಟ್ವೀಟ್ ಆದ ಪೋಸ್ಟ್ ಎಂದು ಪ್ರಕಟವಾಗಿದೆ.
ಈ ಸೆಲ್ಫಿ 2020 ಫೆಬ್ರವರಿ 10 ರಂದು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ 'ಥ್ಯಾಂಕ್ ಯೂ ನೇವೆಲಿ' ಎಂದು ಕ್ಯಾಪ್ಷನ್ ಹಾಕಿದ್ದರು. ತಮಿಳುನಾಡಿನ ನೇವೆಲಿಯಲ್ಲಿ ಮಾಸ್ಟರ್ ಚಿತ್ರೀಕರಣಕ್ಕೆ ಭಾಗಿಯಾದ ಸಂದರ್ಭದಲ್ಲಿ ವಿಜಯ್ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ಕ್ಯಾರಾವ್ಯಾನ್‌ನಿಂದ ಹೊರಗೆ ಬಂದ ನಟ ವಿಜಯ್ ತಮ್ಮ ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.

ಈ ಪೋಸ್ಟ್ ಇದುವರೆಗೂ 158.6K ರೀ-ಟ್ವೀಟ್ ಆಗಿದೆ. 378.4K ಲೈಕ್ಸ್ ಬಂದಿದೆ. ಇದೀಗ, ವಿಜಯ್ ಅವರ ಈ ಪೋಸ್ಟ್ 2020ರ ಅತಿ ಹೆಚ್ಚು ರೀ ಟ್ವೀಟ್ ಆದ ಪೋಸ್ಟ್ ಎಂದು ಟ್ವಿಟ್ಟರ್ ಅಧಿಕೃತವಾಗಿ ತಿಳಿಸಿದ ಮೇಲೆ ವಿಜಯ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರೆಟ್ ಮಾಡ್ತಿದ್ದಾರೆ.
ಕಳೆದ ವರ್ಷ ವಿಜಯ್ ಅಭಿನಯಿಸಿದ್ದ 'ಬಿಗಿಲ್' ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಅತಿ ಹೆಚ್ಚು ರೀ ಟ್ವೀಟ್ ಆದ ಪೋಸ್ಟ್ ಆಗಿತ್ತು. ಈಗ ಮತ್ತೊಮ್ಮೆ ವಿಜಯ್ ಅವರ ಪೋಸ್ಟ್ ಈ ಸಾಧನೆ ಮಾಡಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ ಮಾಸ್ಟರ್ ಸಿನಿಮಾ ಜನವರಿಯಲ್ಲಿ ತೆರೆಗೆ ಬರುವ ಸಾಧ್ಯತೆ ಹೆಚ್ಚಿದೆ. ಮಾಳವಿಕಾ ಮೋಹನ್, ವಿಜಯ್ ಸೇತುಪತಿ ಪ್ರಮುಖ ಪಾತ್ರ ಮಾಡಿದ್ದು, ತಮಿಳುನಾಡಿನಲ್ಲೇ ಸಾವಿರಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











