ನಾನು ತುಂಬಾ ಕ್ರೂರ ವಿಲನ್: 'ಮಾಸ್ಟರ್' ಸಿನಿಮಾದ ಪಾತ್ರದ ಬಗ್ಗೆ ವಿಜಯ್ ಸೇತುಪತಿ ಮಾತು
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಸದ್ಯ ಬಹುನಿರೀಕ್ಷೆಯ ಮಾಸ್ಟರ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ದಳಪತಿ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೆ ರಿಲೀಸ್ ಆಗಿ ಧೂಳ್ ಎಬ್ಬಿಸಬೇಕಿತ್ತು. ಆದರೆ ಕೊರೊನಾ ಲಾಕ್ ಡೌನ್ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ.
Recommended Video
ವಿಜಯ್ ವರ್ಸಸ್ ವಿಜಯ್ ಕಾಳಗ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ದಳಪತಿ ವಿಜಯ್ ಎದುರು ವಿಜಯ್ ಸೇತುಪತಿ ತೊಡೆತಟ್ಟಿ ನಿಂತಿದ್ದಾರೆ. ಚಿತ್ರದಲ್ಲಿ ಇಬ್ಬರ ಪಾತ್ರದ ಬಗ್ಗೆಯು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಸದ್ಯ ಸೇತುಪತಿ ಮೊದಲ ಬಾರಿಗೆ ಮಾಸ್ಟರ್ ಸಿನಿಮಾದ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾಸ್ಟರ್ ಸಿನಿಮಾದ ಪಾತ್ರದ ಬಗ್ಗೆ ರಿವೀಲ್ ಮಾಡಿದ್ದಾರೆ. ಮೊದಲ ಬಾರಿಗೆ ವಿಜಯ್ ಮಾಸ್ಟರ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. "ಮಾಸ್ಟರ್ ಚಿತ್ರದಲ್ಲಿ ನಾನು ತುಂಬಾ ಕ್ರೂರಿ ಮತ್ತು ಹಿಂಸೆ ನೀಡುವ ಖಳನಟನ ಪಾತ್ರದಲ್ಲಿ ನಟಿಸಿದ್ದೇನೆ. ಇದು ಔಟ್ ಅಂಡ್ ಔಟ್ ಶುದ್ಧ ದುಷ್ಟನ ಪಾತ್ರ ಆಗಿದೆ" ಎಂದು ಹೇಳಿದ್ದಾರೆ.

ನಾಯಕ ಮತ್ತು ಖಳನಟನ ಮುಖಾಮುಖಿ ದೃಶ್ಯಗಳು ಸಾಕಷ್ಟು ಇದೆಯಂತೆ. ಭಯಾನಕ ದೃಶ್ಯಗಳು ಮತ್ತೊಂದು ಲೆವೆಲ್ ಗೆ ಕರೆದೊಯ್ಯುತ್ತೆ ಎಂದು ಹೇಳಿದ್ದಾರೆ. ವಿಜಯ್ ಸೇತುಪತಿ ಹೇಳಿದ ಮೇಲೆ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ವಿಜಯ್ ಸೇತುಪತಿ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಮೀರ್ ಖಾನ್ ಅಭಿನಯದ ಬಹುನಿರೀಕ್ಷೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿಯು ಅಭಿನಯಿಸುವ ಮೂಲಕ ಹಿಂದಿಯಲ್ಲಿಯೂ ಮಿಂಚುತ್ತಿದ್ದಾರೆ. ಅಲ್ಲದೆ 10ಕ್ಕು ಹೆಚ್ಚು ಸಿನಿಮಾಗಳಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ.


Click it and Unblock the Notifications











