ಕಿರುತೆರೆಗೆ ಮರಳಿದ ವಿಜಯ್ ಸೇತುಪತಿ; ಜನಪ್ರಿಯ ಶೋ ನಿರೂಪಣೆ
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ವಿಜಯ್ ಸೇತುಪತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ತೆಲುಗು ಮತ್ತು ಬಾಲಿವುಡ್ ಸೇರಿದಂತೆ ಬೇರೆ ಬೇರೆ ಭಾಷೆಯ ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ವಿಜಯ್ ಸೇತುಪತಿ ಇದೀಗ ಮತ್ತೊಂದು ಅವತಾರ ತಾಳಿದ್ದಾರೆ.
ಸಾಲು ಸಾಲು ಸಿನಿಮಾಗಳ ಜೊತೆಗೆ ವಿಜಯ್ ಸೇತುಪತಿ ಈಗ ಕಿರುತೆರೆಗೂ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯ ಪ್ರಸಿದ್ಧ ಶೋವೊಂದನ್ನು ವಿಜಯ್ ಸೇತುಪತಿ ನಡೆಸಿಕೊಡುತ್ತಿದ್ದಾರೆ. ಮಾಸ್ಟರ್ ವಿಲನ್ ಈಗ ಮಾಸ್ಟರ್ ಶೆಫ್ ಸರಣಿಯನ್ನು ಸೆರಿಕೊಂಡಿದ್ದಾರೆ.
ಕಿರುತೆರೆಯ ಜನಪ್ರಿಯ ಅಡುಗೆ ಶೋ ಮಾಸ್ಟರ್ ಶೆಫ್ ನಡೆಸಿಕೊಡಲು ವಿಜಯ್ ಸೇತುಪತಿ ಸಜ್ಜಾಗಿದ್ದಾರೆ. ಈಗಾಗಲೇ ಪ್ರೋಮೋ ಬಿಡುಗಡೆಯಾಗಿದ್ದು, ವಿಜಯ್ ಸೇತುಪತಿ ಹೆಲಿಕಾಪ್ಟರ್ ನಲ್ಲಿ ಎಂಟ್ರಿ ಕೊಡುತ್ತಿರುವ ದೃಶ್ಯ ವೈರಲ್ ಆಗಿದೆ.

ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಮಾಸ್ಟರ್ ಶೆಫ್ ಶೋಗೆ ವಿಜಯ್ ಸೇತುಪತಿ ಎಂಟ್ರಿ ಕೊಟ್ಟಿರುವುದು ಕಿರುತೆರೆ ಪ್ರೇಕ್ಷಕರ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ. ಅಂದಹಾಗೆ ಮಾಸ್ಟರ್ ಶೆಫ್ ಅಡುಗೆ ರಿಯಾಲಿಟಿ ಶೋ ಸನ್ ಟಿವಿಯಲ್ಲಿ ಪ್ರಸಾರವಾಗಲಿದೆ. ಸದ್ಯ ಪ್ರೋಮೋ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಶೋ ಸದ್ಯದಲ್ಲೇ ಪ್ರಸಾರವಾಗಲಿದೆ.
ಅಂದಹಾಗೆ ವಿಜಯ್ ಸೇತುಪತಿ ಈ ಮೊದಲು ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನಮ್ಮ ಊರು ನಮ್ಮ ಹೀರೋ ಶೋ ನಡೆಸಿಕೊಡುತ್ತಿದ್ದರು. ಈ ಶೋ ಕೂಡ ಯಶಸ್ವಿಯಾಗಿತ್ತು. ಇದೀಗ ಮತ್ತೊಮ್ಮೆ ಕಿರುತೆರೆಯಲ್ಲಿ ಕಮಾಲ್ ಮಾಡಲು ಸಿದ್ಧರಾಗಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ವಿಜಯ್ ಸೇತುಪತಿ ಇತ್ತೀಚಿಗಷ್ಟೆ ಉಪ್ಪೇನಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದೆ. ಲಾಬಮ್, ತುಘಲಕ್ ದರ್ಬಾರ್, ಯದುಮ್, ವಿದುತಲೈ, ಮುಂಬೈಕರ್ ಸೇರಿದಂತೆ ಕೈತುಂಬ ಸಿನಿಮಾಗಳಿವೆ.


Click it and Unblock the Notifications











