ವಿಜಯ್ 'ಮಾಸ್ಟರ್' ಆಡಿಯೋ ಬಿಡುಗಡೆಗೆ ದಿನಾಂಕ ನಿಗದಿ

ಕಾಲಿವುಡ್ ಸ್ಟಾರ್ ನಟ ಇಳೆಯದಳಪತಿ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ರಿಲೀಸ್ ಗೂ ಮೊದಲೆ ಕಾಲಿವುಡ್ ನಲ್ಲಿ ಟ್ರೆಂಡ್ ಸೃಷ್ಟಿಸಿರುವ ಮಾಸ್ಟರ್ ಸಿನಿಮಾದಿಂದ ಈಗ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಇತ್ತೀಚಿಗಷ್ಟೆ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಹಾಡುಗಳ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ.

ಹೌದು, ವಿಜಯ್ ಅಭಿನಯದ ಮಾಸ್ಟರ್ ಸಿನಿಮಾದ ಆಡಿಯೋ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ. ಬಹು ನಿರೀಕ್ಷೆಯ ಚಿತ್ರದ ಆಡಿಯೋ ಇದೆ ತಿಂಗಳು ಮಾರ್ಚ್ 15ಕ್ಕೆ ಬಿಡುಗಡೆಯಾಗುತ್ತಿದೆ. ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಚಿತ್ರದ ಹಾಡುಗಳು ರಿಲೀಸ್ ಆಗುತ್ತಿದ್ದಂತೆ, ಹಾಡುಗಳು ಹೇಗಿರಲಿವೆ ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಇತ್ತೀಚಿಗಷ್ಟೆ ಚಿತ್ರದ ಒಂದು ಲಿರಿಕಲ್ ವಿಡಿಯೋ ರಿಲೀಸ್ ಆಗಿತ್ತು. ವಿಭಿನ್ನವಾಗಿದ್ದ ಈ ಹಾಡು ಎಲ್ಲರ ಗಮನ ಸಳೆದಿದ್ದು. ಉಳಿದ ಹಾಡುಗಳು ಹೇಗಿರಲಿವೆ ಎನ್ನುವುದು ಸದ್ಯದ ಕುತೂಹಲ. ಅಂದ್ಹಾಗೆ ಹಾಡುಗಳು ಅನಿರುದ್ಧ ರವಿಚಂದ್ರನ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿವೆ.

Actor Vijay Starrer Master Audio Will Release On March 15th

ಸದ್ಯ ಚಿತ್ರದಿಂದ ರಿಲೀಸ್ ಆಗಿರುವ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಾಸ್ಟರ್ ಸಿನಿಮಾಗೆ ಲೋಕೇಶ್ ಕನಗರಾಜ ಆಕ್ಷನ್ ಕಟ್ ಹೇಳಿದ್ದಾರೆ. ಸೂಪರ್ ಹಿಟ್ ಕತ್ತಿ ಸಿನಿಮಾ ನೀಡಿದ್ದ ನಿರ್ದೇಶಕ ಈಗ ಮಾಸ್ಟರ್ ಮೂಲಕ ಮತ್ತೊಂದು ಹಿಟ್ ನೀಡಲು ಸಿದ್ಧರಾಗಿದ್ದಾರೆ.

ಚಿತ್ರದಲ್ಲಿ ವಿಜಯ್ ಸೇತುಪತಿ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಪೋಸ್ಟ್ ಕೆಲಸದಲ್ಲಿ ಬ್ಯುಸಿಯಾಗಿರುವ ಮಾಸ್ಟರ್ ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

More from Filmibeat

English summary
Tamil famous Actor Vijay starrer Master Audio will release on March 15th. This movie is directed by Lokesh Kanagaraj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X