Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಜಯ್ 'ಮಾಸ್ಟರ್' ರಿಲೀಸ್ ಮತ್ತೆ ಮುಂದಕ್ಕೆ: ವಿಶೇಷ ದಿನದಂದು ತೆರೆಗೆ ಬರಲು ಸಿದ್ಧತೆ
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಚಿತ್ರಗಳಲ್ಲಿ ಇಳಯದಳಪತಿ ವಿಜಯ್ ಅಭಿನಯದ 'ಮಾಸ್ಟರ್' ಸಿನಿಮಾ ಕೂಡ ಒಂದು. ಈಗಾಗಲೆ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ ಮಾಸ್ಟರ್ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 9ಕ್ಕೆ ರಿಲೀಸ್ ಆಗಿ ಬಾಕ್ಸ್ ಆಫೀಸ್ ಲೂಟಿ ಮಾಡಬೇಕಿತ್ತು.
Recommended Video
ಕೊರೊನಾ ಲಾಕ್ ಡೌನ್ ಪರಿಣಾಮ ಸಿನಿಮಾ ಲೆಕ್ಕಾಚಾರವೆ ತಲೆಕೆಳಗಾಗಿದ್ದು, ಮಾಸ್ಟರ್ ರಿಲೀಸ್ ಮುಂದಕ್ಕೆ ಹೋಗಿದೆ. ಅಭಿಮಾನಿಗಳು ಭಾರಿ ಕುತೂಹಲದಿಂದ ಕಾಯುತ್ತಿರುವ ಮಾಸ್ಟರ್, ವಿಜಯ್ ಹುಟ್ಟುಹಬ್ಬಕ್ಕೆ ತೆರೆಗೆ ಬರುತ್ತಿದೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ಮತ್ತೆ ರಿಲೀಸ್ ಡೇಟ್ ಮುಂದಕ್ಕೆ ಹೋಗಿದ್ದು, ಸಿನಿಮಾತಂಡ ಹೊಸ ಬಿಡುಗಡೆ ದಿನಾಂಕ ಫಿಕ್ಸ್ ಮಾಡಿಕೊಂಡಿದೆ ಎಂದು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಮುಂದೆ ಓದಿ..
ವಿಜಯ್ 'ಮಾಸ್ಟರ್' ಬಿಡುಗಡೆಗೆ ಹೊಸ ದಿನಾಂಕ ನಿಗದಿ: ಅಭಿಮಾನಿಗಳಿಗೆ ಡಬಲ್ ಸಂಭ್ರಮ
ಜೂನ್ 22ಕ್ಕೆ ಮಾಸ್ಟರ್ ರಿಲೀಸ್ ಅನುಮಾನ
ಬಹು ನಿರೀಕ್ಷೆಯ ಮಾಸ್ಟರ್ ಸಿನಿಮಾ ಜೂನ್ 22ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಜೂನ್ ಅಷ್ಟೊತ್ತಿಗೆ ಲಾಕ್ ಡೌನ್ ಕೊನೆಯಾಗಲಿದ್ದು, ಚಿತ್ರಮಂದಿರಗಳು ಓಪನ್ ಆಗುವ ಸಾಧ್ಯತೆ ಇದೆ. ಹಾಗಾಗಿ ಚಿತ್ರತಂಡ ಮಾಸ್ಟರ್ ಸಿನಿಮಾವನ್ನು ಜೂನ್ 22ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದೆ ಎನ್ನುವ ಮಾತುಗಳು ಹರಿದಾಡುತ್ತಿತ್ತು.
'ಮನಿಹೈಸ್ಟ್' ಪಾತ್ರಗಳಿಗೆ ಭಾರತೀಯ ಸ್ಟಾರ್ಗಳನ್ನು ಆರಿಸಿದ ನಿರ್ದೇಶಕ ಅಲೆಕ್ಸ್ ರೋಡ್ರಿಗೊ
ಜೂನ್ 22ಕ್ಕೆ ವಿಜಯ್ ಹುಟ್ಟುಹಬ್ಬ
ಜೂನ್ 22ಕ್ಕೆ ಮಾಸ್ಟರ್ ಸಿನಿಮಾವನ್ನು ರಿಲೀಸ್ ಮಾಡಲು ಕಾರಣ ದಳಪತಿ ವಿಜಯ್ ಹುಟ್ಟುಹಬ್ಬ. ಸಿನಿಮಾ ರಿಲೀಸ್ ಮಾಡೋಕೆ ಇದಕ್ಕಿಂತ ಉತ್ತಮ ಸಮಯ ಬೇಕಾಗಿಲ್ಲ ಎಂದು ದಳಪತಿ ಹುಟ್ಟುಹಬ್ಬದ ದಿನವೇ ರಿಲೀಸ್ ಮಾಡಬೇಕೆಂದು ಸಿನಿಮಾತಂಡ ನಿರ್ಧರಿಸಿತ್ತು. ಆದರೀಗ ಮತ್ತೆ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.
ದೀಪಾವಳಿಗೆ ಮಾಸ್ಟರ್ ರಿಲೀಸ್ ಸಾಧ್ಯತೆ
ವಿಜಯ್ ಹುಟ್ಟುಹಬ್ಬಕ್ಕೆ ಮಾಸ್ಟರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಹುಟ್ಟುಹಬ್ಬದ ಗಿಫ್ಟ್ ನೀಡಲು ಸಿದ್ಧವಾಗಿತ್ತು. ಆದರೀಗ ಮತ್ತೆ ರಿಲೀಸ್ ಡೇಟ್ ಮುಂದಕ್ಕೆ ಹೋಗಿದ್ದು, ಈ ವರ್ಷ ದೀಪಾವಳಿಗೆ ಮಾಸ್ಟರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ತಮಿಳು ಚಿತ್ರರಂಗ: ಸೂರ್ಯ ಒಂದು ದಾರಿ, ಧನುಶ್-ವಿಜಯ್ ಮತ್ತೊಂದು ದಾರಿ
ದೀಪಾವಳಿಗೆ ರಿಲೀಸ್ ಆಗಿತ್ತು ಬಿಗಿಲ್
ವಿಜಯ್ ಅಭಿನಯದ ಬಿಗಿಲ್ ಸಿನಿಮಾ ಸಹ ಕಳೆದ ವರ್ಷ ದೀಪಾವಳಿಗೆ ರಿಲೀಸ್ ಆಗಿತ್ತು. ಅಲ್ಲದೆ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಬಾಕ್ಸ್ ಆಫೀಸ್ ನಲ್ಲಿ 300 ಕೋಟಿ ಕಲೆಕ್ಷನ್ ಮಾಡಿತ್ತು. ದೀಪಾವಳಿ ವಿಜಯ್ ಗೆ ಲಕ್ಕಿ ಎಂದು ಹೇಳಲಾಗುತ್ತಿದೆ. ಹಾಗಾಗಿ ಮಾಸ್ಟರ್ ಸಿನಿಮಾ ಸಹ ದೀಪಾವಳಿಗೆ ರಿಲೀಸ್ ಮಾಡುವ ಪ್ಲಾನ್ ಆಗಿದೆ.
ಪ್ರೊಫೆಸರ್ ಪಾತ್ರದಲ್ಲಿ ವಿಜಯ್
ಮಾಸ್ಟರ್ ಚಿತ್ರದಲ್ಲಿ ನಟ ವಿಜಯ್ ಕಾಲೇಜ್ ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಕನಗರಾಜ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ವಿಲನ್ ಆಗಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಕಾಂಬಿನೇಷನ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಯಕಿಯರಾಗಿ ಮಾಳವಿಕಾ ಮೋಹನ್, ಆಂಡ್ರಿಯಾ ಜೆರಿಮಿಯಾ ಕಾಣಿಸಿಕೊಂಡಿದ್ದಾರೆ.