ನಟ ಚಿಯಾನ್ ವಿಕ್ರಂಗೆ ಕೋವಿಡ್ ಪಾಸಿಟಿವ್
ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಮತ್ತೆ ಕೊರೊನಾ ಹಾವಳಿ ಆರಂಭ ಆಗಿದೆ. ದಿನ ಕಳೆದಂತೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ರೂಪಾಂತರಿ ಕೊರೊನ ಓಮಿಕ್ರಾನ್ ರೂಪದಲ್ಲೂ ದೇಹ ಹೊಕ್ಕುತ್ತಿದೆ. ಸಿನಿಮಾ ಮಂದಿಯಲ್ಲಿ ಕೊರೊನಾ ಹೆಚ್ಚಾಗಿ ಹಬ್ಬುತ್ತಿದೆ. ಸದ್ಯ ನಟ ಚಿಯಾನ್ ವಿಕ್ರಂಗೆ ಕೊರೊನಾ ಪಾಸಿಟಿವ್ ಆಗಿದೆ.
ಕೆಲವು ದಿನಗಳಿಂದ ಕೊರೊನಾ ವಿಚಾರವಾಗಿ ಸಿನಿಮಾ ತಾರೆಯರು ಸುದ್ದಿ ಆಗುತ್ತಿದ್ದಾರೆ. ಬಾಲಿವುಡ್, ಮತ್ತು ಸೌತ್ ಸಿನಿಮಾ ಕಲಾವಿದರಲ್ಲಿ ಕೊರೊನಾ ಹೆಚ್ಚಾಗಿ ಹಬ್ಬುತ್ತಿದೆ. ಒಬ್ಬರಾಗಿಯೇ ಕೊರೊನಾ ಪಾಸಿಟಿವ್ ವಿಚಾರವನ್ನು ಬಹಿರಂಗ ಪಡಿಸುತ್ತಿದ್ದಾರೆ.
ಸದ್ಯ ತಮಿಳು ನಟ ಚಿಯಾನ್ ವಿಕ್ರಂ ಅವರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ವಿಕ್ರಂ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವ ವಿಚಾರ ಬಹಿರಂಗ ಆಗಿದೆ.

ಐಸೋಲೇಷನ್‌ನಲ್ಲಿ ನಟ ಚಿಯಾನ್ ವಿಕ್ರಂ!
ತಮಿಳು ನಟ ವಿಕ್ರಂಗೆ ಕೊರೊನಾ ಬಂದಿದೆ. ಕೊರೊನಾ ಲಕ್ಷಣಗಳು ಕಂಡು ಬಂದಿದ್ದು, ವಿಕ್ರಂ ಪರೀಕ್ಷೆ ಮಾಡಿಸಿದ್ದಾರೆ. ಆಗ ಅವರಿಗೆ ಕೊರೊನಾ ಇರುವುದು ಪತ್ತೆ ಆಗಿದೆ. ಸದ್ಯ ವಿಕ್ರಂ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸೋಲೇಷನ್‌ನಲ್ಲಿ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಚೆನ್ನೈನ ಬೆಸ್ತನ್ ನಗರದಲ್ಲಿ ಇರುವ ಅವರ ಮನೆಯಲ್ಲಿಯೇ ವಿಕ್ರಂ ಐಸೋಲೇಟ್ ಆಗಿದ್ದಾರೆ.

'ಪೊನ್ನಿಯಿನ್ ಸೆಲ್ವನ್' ಚಿತ್ರದ ಡಬ್ಬಿಂಗ್ ಮಾಡಿದ್ದ ನಟ ವಿಕ್ರಂ!
ನಟ ವಿಕ್ರಂ ಸದ್ಯ ಯಾವುದೇ ಸಿನಿಮಾದ ಶೂಟಿಂಗ್‌ನಲ್ಲಿ ಪಾಲ್ಗೊಂಡಿಲ್ಲ. ಸಿನಿಮಾ ಚಿತ್ರೀಕರಣ ಇಲ್ಲದ ಕಾರಣ ಅವರು ಹೆಚ್ಚು ಜನ ಇರುವ ಶೂಟಿಂಗ್‌ನಲ್ಲಿ ಭಾಗಿ ಆಗಿಲ್ಲ. ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ಚಿತ್ರದ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಆದರೂ ಅದು ಹೇಗೊ ನಟ ಚಿಯಾನ್ ವಿಕ್ರಂಗೆ ಕೊರೊನಾ ಬಂದು ಬಿಟ್ಟಿದೆ. ಹಾಗಾಗಿ ಇತ್ತೀಚೆಗೆ ಅವರ ಸಂಪರ್ಕಕ್ಕೆ ಬಂದವರು ಎಚ್ಚರಿಕೆ ವಹಿಸಬೇಕಾಗಿದೆ.

ಖೋಬ್ರಾ ನಂತರ ರಾಜಮೌಳಿ ಚಿತ್ರದಲ್ಲಿ ವಿಕ್ರಂ!
ಇತ್ತೀಚೆಗೆ ಚಿಯಾನ್ ವಿಕ್ರಂ ಹೆಚ್ಚಾಗಿ ಸುದ್ದಿಯಾಗಿ ಗಮನ ಸೆಳೆದಿದ್ದು, ಅವರ ಮುಂದಿನ ಸಿನಿಮಾ ಸಲುವಾಗಿ. ಚಿಯಾನ್ ವಿಕ್ರಂ ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮುಂದಿನ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಚಿಯಾನ್ ವಿಕ್ರಂ ಪಾತ್ರ ಹೇಗೆ ಇರಲಿದೆ ಎನ್ನುವ ಕುತೂಹಲ ಮೂಡಿದೆ. ಸದ್ಯ ನಟ ಚಿಯಾನ್ ವಿಕ್ರಂ ಖೋಬ್ರಾ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಇದರೊಂದಿಗೆ ಅವರ ಅಭಿನಯದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಕೂಡ ತೆರೆಕಾಣಬೇಕಿದೆ.

ಕಮಲ್ ಹಾಸನ್, ಅರ್ಜುನ್ ಸರ್ಜಾ, ಕರೀನಾ ಕಪೂರ್‌ಗೆ ಕೊರೊನಾ!
ಕೊರೊನಾ ಕಡಿಮೆ ಆಗಿದೆ ಎಂದು ಎಲ್ಲರೂ ತಣ್ಣಗೆ ಇದ್ದಾಗ, ಕೊರೊನಾ ಹಾವಳಿ ಮತ್ತೆ ಶುರುವಾಗಿದೆ. ಈ ಹಿಂದೆ ನಟ ಕಮಲ್ ಹಾಸನ್‌ಗೆ ಕೊರೊನಾ ಬಂದು ಬಳಿಕ ಗುಣಮುಖರಾಗಿದ್ದಾರೆ. ನಂತರ ನಟ ಅರ್ಜುನ್ ಸರ್ಜಾ ಅವರಿಗೂ ಕೊರೊನಾ ವಕ್ಕರಿಸಿದೆ. ಇನ್ನೂ ಕರೀನಾ ಕಪೂರ್‌ಗೂ ಕೊರೊನಾ ಬಂದಿದ್ದು, ಆಕೆಯಿಂದ ಮತ್ತೆ ಮೂವರಿಗೂ ಕೊರೊನಾ ಸೋಂಕು ಹಬ್ಬಿದೆ. ಹಾಗಾಗಿ ಕರೀನಾಳ ಬೇಜವಾಬ್ದಾರಿ ನಡೆಗೆ ವಿರೋಧ ವ್ಯಕ್ತ ಆಗಿತ್ತು. ಈಗ ಚಿಯಾನ್ ವಿಕ್ರಮ್‌ಗೂ ಕೊರೊನಾ ಕಾಣಿಸಿಕೊಂಡಿದ್ದು ಸಿನಿಮಾ ಮಂದಿಯಲ್ಲಿ ಆತಂಕ ಮೂಡಿದೆ.


Click it and Unblock the Notifications











